For Quick Alerts
  ALLOW NOTIFICATIONS  
  For Daily Alerts

  ಅಭಿಮಾನಿ ಮನೆ ಗೃಹ ಪ್ರವೇಶಕ್ಕೆ ಹೋಗಿದ್ದ ಪ್ರೇಮ್‌ಗೆ ಸರ್ಪ್ರೈಸ್

  |

  'ನೆನಪಿರಲಿ' ಪ್ರೇಮ್ ಅಭಿಮಾನಿಯೊಬ್ಬರ ಹೊಸ ಮನೆಯ ಗೃಹ ಪ್ರವೇಶ ಕಾರ್ಯಕ್ರಮಕ್ಕೆ ಅತಿಥಿಯಾಗಿ ಹೋಗಿದ್ದರು. ಈ ವೇಳೆ ಆ ಅಭಿಮಾನಿ ಪ್ರೇಮ್ ಅವರಿಗೆ ಸರ್ಪ್ರೈಸ್ ನೀಡಿದ್ದಾರೆ.

  ನೂತನವಾಗಿ ನಿರ್ಮಿಸಿರುವ ಮನೆಯಲ್ಲಿ ಹೋಮ್ ಥಿಯೇಟರ್ ಇದ್ದು, ಆ ಥಿಯೇಟರ್‌ನಲ್ಲಿ ಪ್ರೇಮ್ ಅವರ 25ನೇ ಚಿತ್ರದ ಟೀಸರ್ ಪ್ರದರ್ಶಿಸಿ ಅಭಿಮಾನ ಮೆರೆದಿದ್ದಾರೆ. ಗೃಹಪ್ರವೇಶದ ದಿನವೇ ತಮ್ಮ ಹೋಮ್ ಥಿಯೇಟರ್‌ನಲ್ಲಿ ನೆಚ್ಚಿನ ನಟನ ಚಿತ್ರದ ಟೀಸರ್ ಪ್ಲೇ ಮಾಡಿ ಅಭಿಮಾನಿ ಖುಷಿಪಟ್ಟಿದ್ದಾರೆ.

  ದೊಡ್ಮನೆ ಅಂಗಳದಲ್ಲಿ ಕೇಳುತ್ತಿದೆ 'ನೆನಪಿರಲಿ' ಪ್ರೇಮ್ ಹೆಸರು?

  ಅಭಿಮಾನಿಯ ಮನೆಯಲ್ಲಿ 'ಪ್ರೇಮಂ ಪೂಜ್ಯಂ' ಚಿತ್ರದ ಟೀಸರ್ ಪ್ರದರ್ಶನ ಕಂಡು ಪ್ರೇಮ್ ಸಹ ಸಂತಸಗೊಂಡಿದ್ದಾರೆ. ಈ ಖುಷಿಯನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ''ಅಭಿಮಾನಿ ಒಬ್ಬರ ಗೃಹ ಪ್ರವೇಶಕ್ಕೆ ಭೇಟಿ ನೀಡಿದ್ದಾಗ ಅವರ ಹೊಚ್ಚ ಹೊಸ ಮನೆಯ Home Theatre ನಲ್ಲಿ ಪ್ರೇಮಂ ಪೂಜ್ಯಂ ಚಿತ್ರದ ಟೀಸರ್ ನೋಡಿದ ಕ್ಷಣ...'' ಎಂದು ಪೋಸ್ಟ್ ಹಾಕಿ ವಿಡಿಯೋ ತುಣುಕು ಪೋಸ್ಟ್ ಮಾಡಿದ್ದಾರೆ.

  ಅಂದ್ಹಾಗೆ, 'ಪ್ರೇಮಂ ಪೂಜ್ಯಂ' ಸಿನಿಮಾ ಪ್ರೇಮ್ ಅಭಿನಯದ 25ನೇ ಚಿತ್ರ. ರಾಘವೇಂದ್ರ ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದು, ಇತ್ತೀಚಿಗಷ್ಟೆ ಟೀಸರ್ ಬಿಡುಗಡೆಯಾಗಿದೆ. ಬೃಂದಾ ಆಚಾರ್ಯ ನಾಯಕಿಯಾಗಿ ನಟಿಸಿದ್ದಾರೆ.

  ದೇವರಾಣೆ ನಾನು ಇದನ್ನೆಲ್ಲ ಮಾಡಿಲ್ಲ ಎಂದ ವಿವಾದಿತ ನಿರ್ಮಾಪಕ | Filmibeat Kannada

  ಇನ್ನು ಬಿಗ್ ಬಾಸ್ ಕನ್ನಡ ಏಂಟನೇ ಆವೃತ್ತಿಯಲ್ಲಿ ನಟ ಪ್ರೇಮ್ ಸ್ಪರ್ಧಿಯಾಗಿ ಭಾಗವಹಿಸಲಿದ್ದಾರೆ ಎಂಬ ಸುದ್ದಿ ಚರ್ಚೆಯಾಗುತ್ತಿತ್ತು. ಈ ಕುರಿತು ಫಿಲ್ಮಿಬೀಟ್‌ಗೆ ಪ್ರತಿಕ್ರಿಯಿಸಿದ್ದ ನಟ ''ನನಗೆ ಬೇರೆ ಕೆಲಸಗಳಿದೆ, ನಾನು ಬಿಗ್ ಬಾಸ್‌ಗೆ ಹೋಗಲ್ಲ'' ಎಂದಿದ್ದರು.

  English summary
  Kannada film actor nenapirali Prem has visit to his fan new home.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X