For Quick Alerts
  ALLOW NOTIFICATIONS  
  For Daily Alerts

  'ಅವನೇ ಶ್ರೀಮನ್ನಾರಾಯಣ' ಟ್ರೈಲರ್ ನೋಡಿದ್ರಾ? ರಶ್ಮಿಕಾಗೆ ನೆಟ್ಟಿಗರ ಪ್ರಶ್ನೆ

  |

  ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ ಬಹು ನಿರೀಕ್ಷೆಯ ಅವನೇ ಶ್ರೀಮನ್ನಾರಾಯಣ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕನ್ನಡ ಮಾತ್ರವಲ್ಲದೆ ಬೇರೆ ಬೇರೆ ಭಾಷೆಯಲ್ಲೂ ಅವನೇ ಶ್ರೀಮನ್ನಾರಾಯಣನ ಹವಾ ಜೋರಾಗಿದೆ. ಐದು ಭಾಷೆಯಲ್ಲಿ ಸಿನಿಮಾಗೆ ತೆರೆಗೆ ಬರುತ್ತಿದೆ. ಅವನೇ ಶ್ರೀಮನ್ನಾರಾಯಣ ಟ್ರೈಲರ್ ರಿಲೀಸ್ ಆಗುತ್ತಿದ್ದಂತೆ ನೆಟ್ಟಿಗರು ರಶ್ಮಿಕಾ ಕಾಲೆಳೆಯಲು ಪ್ರಾರಂಭಿಸಿದ್ದಾರೆ.

  ಟ್ರೋಲ್ ಗಳ ವಿಚಾರದಲ್ಲಿ ಇನ್ಮುಂದೆ ಸುಮ್ಮನಿರಲ್ಲ: ರಶ್ಮಿಕಾ ಮಂದಣ್ಣಟ್ರೋಲ್ ಗಳ ವಿಚಾರದಲ್ಲಿ ಇನ್ಮುಂದೆ ಸುಮ್ಮನಿರಲ್ಲ: ರಶ್ಮಿಕಾ ಮಂದಣ್ಣ

  ಸಾಮಾಜಿಕ ಜಾಲತಾಣದಲ್ಲಿ ರಶ್ಮಿಕಾ ಯಾವುದೆ ಪೋಸ್ಟ್ ಮಾಡಿದ್ರು ನೆಟ್ಟಿಗರು ಅವನೇ ಶ್ರೀಮನ್ನಾರಾಯಣ ಬಗ್ಗೆದ ಕಮೆಂಟ್ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ರಶ್ಮಿಕಾ ಕಾಲೆಳೆಯುವುದು ಇದೆ ಮೊದಲೇನಲ್ಲ. ಈ ಮೊದಲು ಸಹ ರಶ್ಮಿಕಾ ಯಾವುದೆ ಪೋಸ್ಟ್ ಮಾಡಿದ್ರು ರಕ್ಷಿತ್ ಅಭಿಮಾನಿಗಳು ಕಾಲೆಳೆಯುತ್ತಿರುತ್ತಾರೆ. ಈ ಬಾರಿ ಸಹ ಅವನೇ ಶ್ರೀಮನ್ನಾರಾಯಣ ಟ್ರೋಲರ್ ನೋಡಿದ್ರಾ ಎಂದು ಅನೇಕರು ಪ್ರಶ್ನೆ ಮಾಡುತ್ತಿದ್ದಾರೆ.

  'ಸರಿಲೇರು ನೀಕೆವ್ವರು' ಬಗ್ಗೆ ರಶ್ಮಿಕಾ ಪೋಸ್ಟ್

  'ಸರಿಲೇರು ನೀಕೆವ್ವರು' ಬಗ್ಗೆ ರಶ್ಮಿಕಾ ಪೋಸ್ಟ್

  ರಶ್ಮಿಕಾ ಸದ್ಯ ಬಹುನಿರೀಕ್ಷೆಯ 'ಸರಿಲೇರು ನೀಕೆವ್ವರು' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ನಟ ಮಹೇಶ್ ಬಾಬುಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ರಶ್ಮಿಕಾ ಇತ್ತೀಚಿಗೆ ಒಂದು ಪೋಸ್ಟ್ ಹಾಕಿದ್ದಾರೆ. ಮುಂದಿನ ತಿಂಗಳು ಚಿತ್ರದ ಹಾಡುಗಳು ತೆರೆಗೆ ಬರುವ ಬಗ್ಗೆ ಅಪ್ ಡೇಟ್ ಮಾಡಿದ್ದಾರೆ. ಆದರೆ ನೆಟ್ಟಿಗರು ರಶ್ಮಿಕಾ ಪೋಸ್ಟ್ ಕೆಳಗೆ 'ಅವನೇ ಶ್ರೀಮನ್ನಾರಾಯಣ' ಪೋಸ್ಟರ್ ಗಳನ್ನು ಹಾಕಿ ಕಮೆಂಟ್ ಮಾಡುತ್ತಿದ್ದಾರೆ.

  ಸುರಕ್ಷತೆ ಎಲ್ಲಿದೆ? ಪ್ರಿಯಾಂಕಾ ರೆಡ್ಡಿ ಹತ್ಯೆ ವಿರುದ್ಧ ಅನುಷ್ಕಾ, ಕೀರ್ತಿ, ರಶ್ಮಿಕಾ, ಅನಿರುದ್ಧ್ ಆಕ್ರೋಶಸುರಕ್ಷತೆ ಎಲ್ಲಿದೆ? ಪ್ರಿಯಾಂಕಾ ರೆಡ್ಡಿ ಹತ್ಯೆ ವಿರುದ್ಧ ಅನುಷ್ಕಾ, ಕೀರ್ತಿ, ರಶ್ಮಿಕಾ, ಅನಿರುದ್ಧ್ ಆಕ್ರೋಶ

  ಶ್ರೀಮನ್ನಾರಾಯಣ ಟ್ರೈಲರ್ ನೋಡಿದ್ರಾ?

  ಶ್ರೀಮನ್ನಾರಾಯಣ ಟ್ರೈಲರ್ ನೋಡಿದ್ರಾ?

  ನೆಟ್ಟಿಗರು ರಶ್ಮಿಕಾಗೆ 'ಅವನೇ ಶ್ರೀಮನ್ನಾರಾಯಣ' ಟ್ರೈಲರ್ ನೋಡಿದ್ರಾ ಎಂದು ಪ್ರಶ್ನೆಮಾಡುತ್ತಿದ್ದಾರೆ. ನೋಡದಿದ್ದರೆ ನೋಡಿ ಅಂತ ಟ್ರೈಲರ್ ನ ಲಿಂಕ್ ಅನ್ನು ಶೇರ್ ಮಾಡಿ ಕಾಲೆಳೆಯುತ್ತಿದ್ದಾರೆ. ಚಿತ್ರದ ಪೋಸ್ಟರ್ ಗಳನ್ನು ಶೇರ್ ಮಾಡಿ ಪ್ರಶ್ನೆ ಕೇಳುತ್ತಿದ್ದಾರೆ. ನೀವು ಈ ಟ್ರೈಲರ್ ಅನ್ನು ನೋಡಲೆ ಬೇಕು. ಮಿಸ್ ಮಾಡಬೇಡಿ ಎಂದು ಹೇಳುತ್ತಿದ್ದಾರೆ.

  ಕನ್ನಡ ಬರದಿದ್ರು ಟ್ರೈಲರ್ ನೋಡಬಹುದು

  ಕನ್ನಡ ಬರದಿದ್ರು ಟ್ರೈಲರ್ ನೋಡಬಹುದು

  "ನೀವು ಟ್ರೈಲರ್ ನೋಡಿದ್ರಾ? ಓ ಕನ್ನಡ ಗೊತ್ತಾಗಲ್ಲ ಅಲ್ಲವಾ. ಪರವಾಗಿಲ್ಲ. ಹಿಂದೆ, ತಮಿಳು, ತೆಲುಗು, ಮಲಯಾಳಂ ಎಲ್ಲಾ ಭಾಷೆಯಲ್ಲೂ ತೆರೆಗೆ ಬರುತ್ತಿದೆ. ಕೆಲವೇ ದಿನಗಳಲ್ಲಿ ನಿನ್ನ ಮುಂದೆ ಅವನು.. ಅವನು... ಅವನು ಅಂದ್ರೆ ಗೊತ್ತಲ್ಲಾ ಅದೇ ಅವನು ಶ್ರೀಮನ್ನಾರಾಯಣ" ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ.

  ದಾರಿ ತೋರಿಸಿದವರನ್ನೆ ಮರೆತವರು

  ದಾರಿ ತೋರಿಸಿದವರನ್ನೆ ಮರೆತವರು

  ಸಾಕಷ್ಟು ಕಮೆಂಟ್ ಗಳು ಅವನೇ ಶ್ರೀಮನ್ನಾರಾಯಣ ಟ್ರೈಲರ್ ನೋಡಿದ್ರಾ ಎಂದು ಕೇಳುತ್ತಿದ್ದಾರೆ. ಇನ್ನು ಕೆಲವರು ಜೊತೆಗೆ ದಾರಿ ತೋರಿದ ದಣಿಯನ್ನೆ ಮರೆತ ನಾಯಕಿ ಎಂದು ರಶ್ಮಿಕಾರನ್ನು ಮತ್ತೆ ಕಿಚಾಯಿಸುತ್ತಿದ್ದಾರೆ.

  1 ಚಿತ್ರಕ್ಕೆ ರಶ್ಮಿಕಾ, ಆಶಿಕಾ, ರಚಿತಾ, ಅದಿತಿ ಸಂಭಾವನೆ ಎಷ್ಟು?1 ಚಿತ್ರಕ್ಕೆ ರಶ್ಮಿಕಾ, ಆಶಿಕಾ, ರಚಿತಾ, ಅದಿತಿ ಸಂಭಾವನೆ ಎಷ್ಟು?

  ಸಕ್ಸಸ್ ಆಗುತ್ತೆ ಶ್ರೀಮನ್ನಾರಾಯಣ

  ಸಕ್ಸಸ್ ಆಗುತ್ತೆ ಶ್ರೀಮನ್ನಾರಾಯಣ

  "ನಾವೆಲ್ಲರು ಅವನೇ ಶ್ರೀಮನ್ನಾರಾಯಣ ಚಿತ್ರವನ್ನು ಬೆಂಬಲಿಸುತ್ತೇವೆ. ದೊಡ್ಡ ಮಟ್ಟಕ್ಕೆ ಹಿಟ್ ಆಗುತ್ತೆ" ಎಂದು ಹೇಳುತ್ತಿದ್ದಾರೆ. ಜೊತೆಗೆ ಅನೇಕರು ರಶ್ಮಿಕಾಗೆ ಲಿಂಕ್ ಅನ್ನು ಶೇರ್ ಮಾಡುತ್ತಿದ್ದಾರೆ.

  English summary
  Netizens coments on Rashmika Mandanna post about Rakshith Shetty's Avane Shrimannarayana.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X