Don't Miss!
- News
ಮಾನ್ವಿ: ಮಂಜೂರಾದ ಬಡವರ ಭೂಮಿಗೆ ಕಣ್ಣು ಹಾಕಿದ ಪ್ರಭಾವಿಗಳು, ಜನಾಕ್ರೋಶ
- Sports
LLC 2023: ಲೆಜೆಂಡ್ಸ್ ಲೀಗ್ನಲ್ಲಿ ಕೈಫ್, ಗೇಲ್, ಗಂಭೀರ್ ಸೇರಿದಂತೆ ಹಲವು ಸ್ಟಾರ್ಗಳು
- Lifestyle
ಆರೋಗ್ಯವಾಗಿರಬೇಕೆ? ಹಾಗಾದರೆ ನೀವು 3 ವಿಷಯಗಳಲ್ಲಿ ನಂಬಿಕೆ ಇಡಲೇಬೇಕು
- Finance
Jio 5G services: ಇಂದಿನಿಂದ ಮತ್ತೆ 34 ನಗರಗಳಲ್ಲಿ ಪ್ರಾರಂಭ- ಮಧ್ಯ ಕರ್ನಾಟಕದ ಯಾವ ನಗರಕ್ಕೆ ಕೊಡುಗೆ? ಮಾಹಿತಿ ಪಡೆಯಿರಿ
- Automobiles
ಪೆಟ್ರೋಲ್ ಬೆಲೆ ಏರಿಕೆ ಚಿಂತೆ ಬಿಡಿ: ರೂ.1 ಲಕ್ಷ ಇದ್ರೆ ಆಕ್ಟಿವಾವನ್ನು ಎಲೆಕ್ಟ್ರಿಕ್ ಸ್ಕೂಟರ್ ಆಗಿ ಪರಿವರ್ತಿಸಬ
- Technology
ಆಂಡ್ರಾಯ್ಡ್ ಬಳಕೆದಾರರಿಗಾಗಿ 'ಕಿಡ್ಸ್ ಮಿಸ್ಟರಿ ಬಾಕ್ಸ್' ಫೀಚರ್ಸ್ ಪರಿಚಯಿಸಿದ ನೆಟ್ಫ್ಲಿಕ್ಸ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಶಿವಗಂಗೆ ತೀರ್ಥ ಕಂಬದ ಬಳಿ ಶೂ ಧರಿಸಿ ನಿಂತ ನಟ ಚಂದನ್-ಕವಿತಾ: ನೆಟ್ಟಿಗರ ಆಕ್ರೋಶ
ನಟ ಚಂದನ್, ಕವಿತಾ ಗೌಡ, ನೇಹಾ ಗೌಡ ಸೇರಿದ್ದಂತೆ ಕಿರುತೆರೆ ಕಲಾವಿದರ ಟೀಂ ಇತ್ತೀಚಿಗೆ ಪ್ರವಾಸಕ್ಕೆ ತೆರಳಿದ್ದರು. ಮೋಜು ಮಸ್ತಿಯ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಅಂದ್ಹಾಗೆ ಇವರೆಲ್ಲ ಪ್ರವಾಸಕ್ಕೆ ಹೋಗಿದ್ದು ಬೆಂಗಳೂರಿನ ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಶಿವಗಂಗೆ ಬೆಟ್ಟಕ್ಕೆ.
Recommended Video
ದಕ್ಷಿಣ ಕಾಶಿ ಶಿವಗಂಗೆ ಬೆಟ್ಟದಲ್ಲಿ ತೀರ್ಥ ಕಂಬದ ಬಳಿ ಕವಿತಾ ಗೌಡ ಮತ್ತು ಚಂದನ್ ಶೂ ಧರಿಸಿ ನಿಂತಿದ್ದಾರೆ. ಈ ಫೋಟೋವನ್ನು ಸಾಮಾಜಿಕ ಜಾಲತಾಣಗಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಫೋಟೋಗೆ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಪವಿತ್ರ ಪುಣ್ಯಕ್ಷೇತ್ರವನ್ನು ಧರಿಸಿ, ಮೋಜು ಮಸ್ತು ಮಾಡಿ ಅಪವಿತ್ರಗೊಳಿಸುತ್ತಿದ್ದಾರೆ ಎಂದು ನೆಟ್ಟಿಗರು ಟೀಕಿಸುತ್ತಿದ್ದಾರೆ. ಮುಂದೆ ಓದಿ...
ಮದುವೆ
ಆಗ್ಬಿಟ್ರಾ
ಚಂದನ್.!
ಫೋಟೋ
ನೋಡಿ
ಫುಲ್
ಕನ್ಫ್ಯೂಷನ್

ಮಕರ ಸಂಕ್ರಾಂತಿ ದಿನ ತೀರ್ಥ ಉದ್ಭವವಾಗುತ್ತೆ
ದಕ್ಷಿಣ ಕಾಶಿ ಪ್ರಸಿದ್ಧ ಶ್ರೀ ಗಂಗಾಧರೇಶ್ವರ ಸ್ವಾಮಿ ನೆಲೆಸಿರುವ ಪುಣ್ಯ ಕ್ಷೇತ್ರ ಶಿವಗಂಗೆ. ಮಕರ ಸಂಕ್ರಾಂತಿ ದಿನ ತೀರ್ಥ ಕಂಬದಲ್ಲಿ ತೀರ್ಥೋದ್ಭವವಾಗುತ್ತೆ. ಉದ್ಭವದ ಜಲದಿಂದ ಹೊನ್ನಾದೇವಿ ಹಾಗೂ ಗಂಗಾಧರೇಶ್ವರ ಪ್ರಸಿದ್ಧ ಗಿರಿಜಾ ಕಲ್ಯಾಣವಾಗುತ್ತೆ. ಅಂತಹ ಪವಿತ್ರ ಜಾಗದಲ್ಲಿ ಶೂ ಧರಿಸಿ ಓಡಾಡಿರುವ ಬಗ್ಗೆ ಆಕ್ರೋಶ ಹೊರಹಾಕುತ್ತಿದ್ದಾರೆ.

ಕ್ಷಮೆ ಕೇಳುವಂತೆ ಒತ್ತಾಯ
ಕ್ಷಮೆ ಕೇಳಿ, ಫೋಟೋ ಡಿಲೀಟ್ ಮಾಡುವಂತೆ ನೆಟ್ಟಿಗರು ಒತ್ತಾಯ ಮಾಡುತ್ತಿದ್ದಾರೆ. ಸೆಲೆಬ್ರಿಟಿ ಆಗಿ ನಾಲ್ಕು ಜನರಿಗೆ ಬುದ್ಧಿ ಹೇಳಬೇಕಾದವರು ನೀವು, ನೀವೆ ಅಂತಹ ತಿಳುವಲಿಕೆ ಇಲ್ಲದ ಕೆಲಸ ಮಾಡ್ತೀರಾ ಎಂದು ಪ್ರಶ್ನಿಸುತ್ತಿದ್ದಾರೆ. ಇಂತವರಿಗೆ ದೇವರೆ ಶಿಕ್ಷೆ ಕೊಡುತ್ತಾನೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ಸೂಕ್ತ ಕ್ರಮ ಕೈಗೊಳಬೇಕು
ಅಲ್ಲದೆ ಸ್ಥಳಿಯ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಸಂಬಂಧಪಟ್ಟ ಇಲಾಖೆ ಇವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ನೆಟ್ಟಿಗರು ಒತ್ತಾಯ ಮಾಡುತ್ತಿದ್ದಾರೆ. ಚಂದನ್ ಮತ್ತು ಸ್ನೇಹಿತರು ಪ್ರವಾಸಕ್ಕೆ ತೆರಳಿರುವ ಸಾಕಷ್ಟು ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ತೆಲುಗಿನ
ಸೀರಿಯಲ್
ನಲ್ಲೂ
ನಟ
ಚಂದನ್
ಮಿಂಚಿಂಗ್.!

ವೈರಲ್ ಆಗಿವೆ ಪ್ರವಾಸದ ಫೋಟೋಗಳು
ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ನಟಿಸುತ್ತಿದ್ದ ಬಹುತೇಕರು ಪ್ರವಾಸಕ್ಕೆ ಹೊರಟಿದ್ದಾರೆ. ಜೊತೆಗೆ ಬಿಗ್ ಬಾಸ್ ಖ್ಯಾತಿಯ ಕಿಶನ್ ಶೆಟ್ಟಿ ಕೂಡ ಧಾರಾವಾಹಿ ಸ್ನೇಹಿತರ ಜೊತೆ ಪ್ರವಾಸಕ್ಕೆ ತೆರಳಿದ್ದಾರೆ. ಎಲ್ಲಾ ಸ್ನೇಹಿತರು ಮಸ್ತಿ ಮಾಡುತ್ತಿರುವ ಫೋಟೋಗಳು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಫೋಟೋ ವಿಡಿಯೋಗಳಿಗೆ ಮೆಚ್ಚುಗೆಯ ಜೊತೆಗೆ ಪುಣ್ಯ ಕ್ಷೇತ್ರದಲ್ಲಿ ಶೂ ಧರಿಸಿ ಮಸ್ತಿ ಮಾಡಿರುವ ಬಗ್ಗೆ ಆಕ್ರೋಶ ಕೂಡ ವ್ಯಕ್ತವಾಗುತ್ತಿದೆ.