Just In
Don't Miss!
- Lifestyle
ಕೋವಿಡ್ 19 ಲಸಿಕೆಯ ಅಡ್ಡಪರಿಣಾಮದಿಂದ ಸಾವು ಸಂಭವಿಸಲ್ಲ: ಏಮ್ಸ್ ನಿರ್ದೇಶಕ
- News
ಮಕ್ಕಳಿಗೆ ಯಾವ ಕೊರೊನಾ ಲಸಿಕೆ ಸೂಕ್ತ; ಏಮ್ಸ್ ನಿರ್ದೇಶಕರ ಸಲಹೆ
- Sports
ಐಪಿಎಲ್ 2021: ಆರ್ಸಿಬಿ ಉಳಿಸಿಕೊಂಡಿರುವ ಆಟಗಾರರ ಸಂಪೂರ್ಣ ಪಟ್ಟಿ
- Automobiles
ಅನಾವರಣಕ್ಕೂ ಮುನ್ನ ಹೊಸ ಕಿಗರ್ ಕಾರಿನ ಟೀಸರ್ ಬಿಡುಗಡೆ ಮಾಡಿದ ರೆನಾಲ್ಟ್
- Education
UAS Dharwad Recruitment 2021: ರಿಸರ್ಚ್ ಅಸೋಸಿಯೇಟ್ ಹುದ್ದೆಗೆ ಜ.28ಕ್ಕೆ ನೇರ ಸಂದರ್ಶನ
- Finance
ಸೆನ್ಸೆಕ್ಸ್, ನಿಫ್ಟಿ ಹೊಸ ದಾಖಲೆ; ಟಾಟಾ ಮೋಟಾರ್ಸ್ 6%ಗೂ ಹೆಚ್ಚು ಗಳಿಕೆ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ಡಬ್ಬಿಂಗ್ ತಂದವರು, ನೀವು ಅಪ್ಪನಿಗೆ ಹುಟ್ಟಿದವರಾ? ಕನ್ನಡ ದ್ರೋಹಿಗಳು': ಜಗ್ಗೇಶ್ ಹೇಳಿಕೆಗೆ ಭಾರಿ ಖಂಡನೆ
'ಪ್ಯಾನ್ ಇಂಡಿಯಾ ಸಿನಿಮಾ ನಮ್ಮನ್ನು ಉದ್ದಾರ ಮಾಡಲ್ಲ, ಯಾರನ್ನೋ ಮೆಚ್ಚಿಸೋಕೆ ಪ್ಯಾನ್ ಇಂಡಿಯಾ ಮಾಡ್ತಿದ್ದಾರೆ' ಎಂದು ಹೇಳಿ ಕೆಲವರ ವಿರೋಧ ಎದುರಿಸಿದ ನಟ ಜಗ್ಗೇಶ್ ಈಗ ಡಬ್ಬಿಂಗ್ ಪರ ಹೋರಾಟಗಾರರ ವಿರುದ್ಧ ಕೆಟ್ಟದಾಗಿ ಮಾತನಾಡಿ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಕನ್ನಡದ ಖಾಸಗಿ ಸುದ್ದಿ ವಾಹಿನಿಯ ಸಂದರ್ಶನವೊಂದರಲ್ಲಿ ಮಾತನಾಡಿದ ನಟ ಜಗ್ಗೇಶ್, ಡಬ್ಬಿಂಗ್ ತಂದವರ ವಿರುದ್ಧ ಆಕ್ರೋಶ ವ್ಯಕಪಡಿಸಿದ್ದಾರೆ. ''ಕರ್ನಾಟಕದಲ್ಲಿ ಡಬ್ಬಿಂಗ್ ತಂದು ಕನ್ನಡ ದ್ರೋಹಿ ಕೆಲಸ ಮಾಡ್ತಿದ್ದಾರೆ. ನೀವು ಅಪ್ಪನಿಗೆ ಹುಟ್ಟಿದವರ? ಕನ್ನಡ ದ್ರೋಹಿಗಳು'' ಎಂದೆಲ್ಲ ಕಿಡಿಕಾರಿದ್ದರು. ಜಗ್ಗೇಶ್ ಅವರ ಈ ಹೇಳಿಕೆಗೆ ಡಬ್ಬಿಂಗ್ ಪರ ಹೋರಾಟಗಾರರು ಸಿಡಿದೆದ್ದಿದ್ದು ನಟ ಜಗ್ಗೇಶ್ ವಿರುದ್ಧ ಮುಗಿ ಬಿದ್ದಿದ್ದಾರೆ. ಮುಂದೆ ಓದಿ....
ಪ್ಯಾನ್ ಇಂಡಿಯಾ ವಿರೋಧಿಸಿದ್ದಕ್ಕೆ ನಟ ಜಗ್ಗೇಶ್ ವಿರುದ್ಧ ಟೀಕೆ

ಜಗ್ಗೇಶ್ ಏನು ಹೇಳಿದ್ದಾರೆ?
ಡಬ್ಬಿಂಗ್‌ಗೆ ಅವಕಾಶ ಕೊಟ್ಟಮೇಲೆ ಟಿವಿ ವಾಹಿನಿಗಳಲ್ಲಿ ಬರಿ ಪರಭಾಷೆ ಚಿತ್ರಗಳೇ ಪ್ರಸಾರವಾಗ್ತಿದೆ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಜಗ್ಗೇಶ್ ''ನಮ್ಮ ಮಕ್ಕಳು ಡಿಸ್ಕವರಿ ಹಾಗೂ ಸೈನ್ಸ್ ಚಾನಲ್ ನೋಡಬಾರದೇ ಎಂತ ಹೇಳಿ ಡಬ್ಬಿಂಗ್ ತಂದ ಮಹನೀಯರ ಪಾದಕ್ಕೆ ನನ್ನ ನಮಸ್ಕಾರ. ಈಗ ಯಾವ ಚಾನಲ್ ನೋಡಿದ್ರೂ ತಮಿಳು, ತೆಲುಗು ಸಿನಿಮಾ ತುಂಬುತ್ತಿದ್ದೀರಾ, ನೀವು ಅಪ್ಪನಿಗೆ ಹುಟ್ಟಿದವರು, ಕನ್ನಡದವರಿಗೆ ಹುಟ್ಟಿದವರಾ, ನೀವೆಲ್ಲ ಕನ್ನಡ ದ್ರೋಹಿಗಳು, ನೀವೆಲ್ಲ ಹುಳ ಬಿದ್ದು ಸಾಯ್ತೀರಾ. ನಿಮ್ಮ ತೆವಲುಗಳಿಗಾಗಿ ಮುಂದಿನ ಪೀಳಿಗೆ ಮಕ್ಕಳ ಭವಿಷ್ಯಕ್ಕೆ ಕೊಳ್ಳಿ ಇಟ್ಟಿದ್ದೀರಾ'' ಎಂದು ಹೇಳಿದ್ದಾರೆ.

ಜಗ್ಗೇಶ್‌ಗೆ ಸ್ಪಷ್ಟತೆ ಇಲ್ಲ
''ಈ ಜಗ್ಗೇಶ ಇಲ್ಲಿ ಮಾತಾಡಿರೋದನ್ನ ಕೇಳಿದರೆ ಒಂದಷ್ಟು ವಿಷಯ ಸ್ಪಷ್ಟವಾಗುತ್ತದೆ. ಆ ಯಪ್ಪನಿಗೆ ಯಾವ ವಿಚಾರದ ಬಗ್ಗೆಯೂ ಸ್ಪಷ್ಟತೆ ಇಲ್ಲ. ಕನ್ನಡ ಪರ ಅಂದರೇನು, ಕನ್ನಡಿಗರ ಹಕ್ಕುಗಳೇನು, ಒಂದು ಉದ್ಯಮದಲ್ಲಿ ಮಾರುಕಟ್ಟೆ ಹಾಗು ಪೈಪೋಟಿಯ ಪಾತ್ರ, ಕನ್ನಡ ಚಿತ್ರೋದ್ಯಮದ ಒಳಿತು ಅಂದರೆ ಏನು. ದೇಶದ ನ್ಯಾಯಾಂಗ ವ್ಯವಸ್ಥೆ ಏನು, ಅದರ ಆದೇಶಗಳನ್ನ ಏಕೆ ಪಾಲಿಸಬೇಕು, ಪಾಲಿಸದಿದ್ದರೆ ಏನಾಗುತ್ತದೆ, ಸಾರ್ವಜನಿಕ ಜೀವನದಲ್ಲಿ ಇರುವವರು ಮಾತಾಡುವ ಬಗೆ. ಏನು ಗೊತ್ತಿಲ್ಲದ ಅಯೋಗ್ಯ'' ಗ್ರಾಹಕರ ಒಕ್ಕೂಟದ ಗಣೇಶ್ ಚೇತನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ಯಾನ್ ಇಂಡಿಯಾ ವಿವಾದ: 'ಎಷ್ಟೆ ಬೆಳೆದರು ತಂದೆ ಮುಂದೆ ಮಕ್ಕಳೇ ವಿನಃ ತಂದೆಯಾಗಲ್ಲಾ'

ಬಾಯಿ ಬಿಟ್ಟರೆ ಬರೆ ಹಲ್ಕಾ ಮಾತು
"ಡಬ್ಬಿಂಗ್ ತಂದವರು, ನೀವು ಅಪ್ಪನಿಗೆ ಹುಟ್ಟಿದವರ? ನೀವು ಕನ್ನಡದವರ?" ಒಬ್ಬ ಹಿರಿಯ ನಟನ ಮಾತುಗಳು ಇವು. ರಾಜಕುಮಾರ್ ಅಭಿಮಾನಿ ಅನೋವುದು. ಬಾಯಿ ಬಿಟ್ಟರೆ ಬರೆ ಹಲ್ಕಾ ಮಾತು.'' ಎಂದು ಜಗ್ಗೇಶ್ ಅವರ ಮಾತಿಗೆ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.

ನೀನು ಕನ್ನಡನಾಡಿನ ದ್ರೋಹಿ
''ಜಗ್ಗೇಶ್ ರವರ ಮಾತು ತುಂಬಾ ಅತಿರೇಕಕ್ಕೆ ಹೋಗುತ್ತಿದೆ. ಅವರು ತಿಳಿದಿರುವುದೇ ಕನ್ನಡತನ ಎನ್ನುವುದು ಅದು ಮೂರ್ಖತನದ ಪರಮಾವಧಿ. ಕನ್ನಡಿಗರಿಗೆ ಅವರ ಆಯ್ಕೆ ವಿಚಾರ ಅವರಿಗೆ ತಿಳಿದಿದೆ. ಕಾನೂನನ್ನು ಅಲ್ಲಗೆಳೆದು, ಕನ್ನಡಪರ ಹೋರಾಟಗಾರರನ್ನು ವೈಯಕ್ತಿಕವಾಗಿ ನಿಂದನೆ ಮಾಡುತ್ತಿರುವ ನೀನು ಕನ್ನಡನಾಡಿನ ದ್ರೋಹಿ'' ಎಂದು ಜಗ್ಗೇಶ್ ವಿರುದ್ಧ ಕಿಡಿಕಾರಿದ್ದಾರೆ.

ಕನ್ನಡ ಸಂಸ್ಕೃತಿಯನ್ನು ಕಾಪಾಡ್ತಾರಾ?
''ಇವರುಗಳು ಡಬ್ಬಿಂಗ್ ವಿರುದ್ಧವಾಗಿ ಮಾಡಿಕೊಂಡು ಬಂದ ವಾದಗಳಲ್ಲಿ "ಕನ್ನಡ ಸಂಸ್ಕೃತಿಯನ್ನು" ಕಾಪಾಡುವುದೂ ಒಂದು. ಇಂತಹ ಸಂಸ್ಕೃತಿ, ಸಂಸ್ಕಾರ ಹೊಂದಿರುವವರು ನಿಜವಾಗಿಯೂ ಕನ್ನಡ ಸಂಸ್ಕೃತಿಯನ್ನು ಕಾಪಾಡ್ತಾರಾ?'' ಎಂದು ಪ್ರಶ್ನಿಸಿದ್ದಾರೆ.

ಕೆಲಸಗಳು ಹಿಂದಿಯವರೇ ಬಾಚಿಕೊಳ್ಳುತ್ತಿದ್ದಾರೆ, ಆಗ ಆಕ್ರೋಶ ಏಕಿಲ್ಲ?
''ಕರ್ನಾಟಕದಲ್ಲಿ ಎಲ್ಲಾ ಕೆಲಸಗಳು ಹಿಂದಿಯವರೇ ಬಾಚಿಕೊಳ್ಳುತ್ತಿದ್ದಾರೆ, ಅದರ ಬಗ್ಗೆ ಈ ಆಕ್ರೋಶ ಯಾಕೆ ಇಲ್ಲ, ಓಹೋ ಸಿನಿಮಾ ಮಾಡಿದರೆ 300 ಜನಕ್ಕೆ ಅಷ್ಟೇ ಸಿಗುತ್ತೆ ಅದೆ ರೀತಿ ಕರ್ನಾಟಕದ ಕೆಲಸಗಳು ಕನ್ನಡಿಗರಿಗೆ ದೊರತರೇ ಮುನ್ನೂರು ಏನು ಮೂರು ಲಕ್ಷ ಮೂವತ್ತು ಲಕ್ಷ ಜನರಿಗೆ ಸಿಗಬಹುದು ಬರೋಕೆ ಹೇಳಿ ಬೀದಿಗೆ ಇವತ್ತನಿಂದಲೇ ಹೋರಾಟ ಮಾಡೋಣ.'' ಎಂದು ಟೀಕಿಸಿದ್ದಾರೆ.