For Quick Alerts
  ALLOW NOTIFICATIONS  
  For Daily Alerts

  ಚಂದನ್-ನಿವೇದಿತಾ ಹನಿಮೂನ್: ಕೊರೊನಾ ಇದೆ ಹುಷಾರು ಎಂದ ನೆಟ್ಟಿಗರು

  |

  ಇತ್ತೀಚಿಗಷ್ಟೆ ದಾಂಪತ್ಯ ಜೀನವಕ್ಕೆ ಕಾಲಿಟ್ಟ ಗಾಯಕ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಹನಿಮೂನ್ ನಲ್ಲಿ ಇದ್ದಾರೆ. ಕೆಲವು ದಿನಗಳ ಹಿಂದಷ್ಟೆ ರ್ಯಾಪರ್ ಚಂದನ್ ಶೆಟ್ಟಿ ಮತ್ತು ಗೊಂಬೆ ನಿವೇದಿತಾ ಮೈಸೂರಿನಲ್ಲಿ ಅದ್ಧೂರಿಯಾಗಿ ವಿವಾಹವಾಗಿದ್ದರು. ಸದ್ಯ ಹನಿಮೂನ್ ನಲ್ಲಿರುವ ಚಂದನ್ ದಂಪತಿ ಒಂದಿಷ್ಟು ಕ್ಯೂಟ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

  ಮಧುಚಂದ್ರಕ್ಕೆ ಹೊರಟಿರುವ ಫೋಟೋಗಳನ್ನು ಶೇರ್ ಮಾಡಿದ್ದ ನಿವೇದಿತಾ ದಂಪತಿಯನ್ನು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಮೋಜಿನ ನಗರಿಯಲ್ಲಿ ಸುತ್ತಾಡುತ್ತಿರುವ ಫೋಟೋವನ್ನು ಹಂಚಿಕೊಂಡು ನಿವೇದಿತಾ ಮತ್ತು ಚಂದನ್ ಫೋಟೋವನ್ನು ನೋಡಿ ನೆಟ್ಟಿಗರು ಕಾಲೆಳೆಯುತ್ತಿದ್ದಾರೆ. ಮುಂದೆ ಓದಿ..

  ಹನಿಮೂನ್‌ ಮೂಡ್‌ನಲ್ಲಿ ಚಂದನ್ ಶೆಟ್ಟಿ-ನಿವೇದಿತ: ಯಾವ ದೇಶಕ್ಕೆ ಪಯಣ?ಹನಿಮೂನ್‌ ಮೂಡ್‌ನಲ್ಲಿ ಚಂದನ್ ಶೆಟ್ಟಿ-ನಿವೇದಿತ: ಯಾವ ದೇಶಕ್ಕೆ ಪಯಣ?

  ಮೋಜಿನ ನಗರಿಯಲ್ಲಿ ಚಂದನ್-ನಿವೇದಿತಾ

  ಮೋಜಿನ ನಗರಿಯಲ್ಲಿ ಚಂದನ್-ನಿವೇದಿತಾ

  ಚಂದನ್ ಶೆಟ್ಟಿ ಮತ್ತು ನಿವೇದಿತಾ ಮೋಜಿನ ನಗರಿಯೆಂದೇ ಹೆಸರುವಾಸಿಯಾಗಿರುವ ಆಮ್‌ಸ್ಟರ್‌ ಡ್ಯಾಂ ನಲ್ಲಿ ಹನಿಮೂನ್ ಟ್ರಿಪ್ ಎಂಜಾಯ್ ಮಾಡುತ್ತಿದ್ದಾರೆ. ನೆದರ್ ಲ್ಯಾಂಡ್ ‌ದೇಶದ ರಾಜಧಾನಿ ಆಮ್‌ಸ್ಟರ್‌ ಡ್ಯಾಂ ಪ್ರವಾಸಿಗರ ನೆಚ್ಚಿನ ನಗರ. ಚಳಿ ತುಂಬಿದ ನಗರದಲ್ಲಿ ಹೊಸ ಜೋಡಿ ಹನಿಮೂನ್ ಎಂಜಾಯ್ ಮಾಡುತ್ತಿದ್ದಾರೆ.

  ನವ ಜೋಡಿಯ ಫೋಟೋ ವೈರಲ್

  ನವ ಜೋಡಿಯ ಫೋಟೋ ವೈರಲ್

  ಚಂದನ್ ಮತ್ತು ನಿವೇದಿತಾ ಹನಿಮೂನ್ ಹೋಗಿರುವ ಒಂದಿಷ್ಟು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಚಂದನ್ ಶೆಟ್ಟಿ ಜೊತೆ ಹ್ಯಾಪಿ ಮೂಡ್ ನಲ್ಲಿ ಎಂದು ಕ್ಯಾಪ್ಷನ್ ಹಾಕಿ ಫೋಟೋ ಹಂಚಿಕೊಂಡಿದ್ದಾರೆ ನಿವೇದಿತಾ. ಇನ್ನು ಕೆಂಪು ಬಣ್ಣದ ಡ್ರೆಸ್ ಧರಿಸಿರುವ ನಿವೇದಿತಾ ಕ್ಯಾಮರಾಗೆ ಪೋಸ್ ನೀಡಿರುವ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿದೆ.

  ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಚಂದನ್-ನಿವೇದಿತಾಗೆ ದುಬಾರಿ ಜಾಗ್ವಾರ್ ಕಾರು ಗಿಫ್ಟ್.!ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಚಂದನ್-ನಿವೇದಿತಾಗೆ ದುಬಾರಿ ಜಾಗ್ವಾರ್ ಕಾರು ಗಿಫ್ಟ್.!

  ಕೊರೊನಾ ಬರುತ್ತೆ ಎಚ್ಚರಿಕೆ

  ಕೊರೊನಾ ಬರುತ್ತೆ ಎಚ್ಚರಿಕೆ

  ನಿವೇದಿತಾ ಮತ್ತು ಚಂದನ್ ಶೆಟ್ಟಿ ಫೋಟೋ ಶೇರ್ ಮಾಡಿರುವ ಫೋಚೋಗಳಿಗೆ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಸಾಕಷ್ಟು ಮಂದಿ ಇಬ್ಬರ ಕಾಲೆಳೆಯುತ್ತಿದ್ದಾರೆ. ಸದ್ಯ ವಿಶ್ಯದಾದ್ಯಂತ ಕೊರೊನಾ ವೈರ್ ಭೀತಿ ಕಾಡುತ್ತಿದೆ. ಹಾಗಾಗಿ ನೆಟ್ಟಿಗರು 'ಕೊರೊನಾ ವೈರಸ್ ಇದೆ ಹುಷಾರು', 'ಭಾರತದಲ್ಲಿಯೇ ಹನಿಮೂನ್ ಮಾಡಿಕೊಳ್ಳಿ, ಕೊರೊನಾ ಬರುತ್ತೆ' ಎಂದು ಕಾಮೆಂಟ್ ಮಾಡುತ್ತಿದ್ದಾರೆ.

  ರಿಸೆಪ್ಷನ್ ನಲ್ಲಿ ಮಿಂಚಿದ ಚಂದನ್ ಶೆಟ್ಟಿಯ ಮುದ್ದಿನ 'ಆಪಲ್'.!ರಿಸೆಪ್ಷನ್ ನಲ್ಲಿ ಮಿಂಚಿದ ಚಂದನ್ ಶೆಟ್ಟಿಯ ಮುದ್ದಿನ 'ಆಪಲ್'.!

  ಆಮ್‌ಸ್ಟರ್‌ ಡ್ಯಾಂ ಯಾವುದಕ್ಕೆ ಪ್ರಖ್ಯಾತಿ?

  ಆಮ್‌ಸ್ಟರ್‌ ಡ್ಯಾಂ ಯಾವುದಕ್ಕೆ ಪ್ರಖ್ಯಾತಿ?

  ಚಂದನ್ ಶೆಟ್ಟಿ-ನಿವೇದಿತಾ ಗೌಡ ಹನಿಮೂನ್ ಗೆ ಹೋಗಿರುವ ಆಮ್‌ಸ್ಟರ್‌ ಡ್ಯಾಂ ಅನ್ನು ವಯಸ್ಕರ ನಗರ ಎಂದೂ ಕರೆಯುತ್ತಾರೆ. ಆಮ್‌ಸ್ಟರ್‌ ಡ್ಯಾಂ ನಗರ ವೇಶ್ಯಾವಾಟಿಕೆಗೂ ಪ್ರಸಿದ್ಧ. ಜೊತೆಗೆ ಲೆಕ್ಕವಿಲ್ಲದಷ್ಟು ಕಾಫಿಶಾಪ್ ಗಳು ನಗರದಲ್ಲಿವೆ. ಜೊತೆಗೆ ಗಾಂಜಾ ಮಾರಾಟ ಇಲ್ಲಿ ಅವ್ಯಾಹತ.

  English summary
  Netizens trolled to Kannada Singer Chandan Shetty and Niveditha Gowda Honeymoon photos.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X