Don't Miss!
- Sports
ಗೆದ್ದ ಜಯ್ ಶಾ ಹಠ, ಪಾಕ್ಗೆ ಹಿನ್ನೆಡೆ; ತಟಸ್ಥ ಸ್ಥಳದಲ್ಲಿ 2023ರ ಏಷ್ಯಾಕಪ್ ಆಯೋಜಿಸಲು ನಿರ್ಧಾರ
- Lifestyle
Horoscope Today 5 Feb 2023: ಭಾನುವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ಗುಜರಾತ್ಗೆ ಬರಲಿದ್ದಾರೆ ಯುಎಸ್ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್
- Finance
ಅದಾನಿ ಸ್ಟಾಕ್ ಕುಸಿತ: 'ನಿಯಂತ್ರಕರು ಅವರ ಕೆಲಸ ಮಾಡುತ್ತಾರೆ', ಎಂದ ವಿತ್ತ ಸಚಿವೆ
- Automobiles
ಬೆಲೆ ಏರಿಕೆ ಪಡೆದುಕೊಂಡ ಬಹುಬೇಡಿಕೆಯ ಟೊಯೊಟಾ ಹೈರೈಡರ್ ಎಸ್ಯುವಿ
- Technology
ಅಜ್ಜಿಗೆ ಆಪ್ಗಳ ಬಗ್ಗೆ ತಿಳಿಸಿಕೊಟ್ಟ ಯುವಕ; ವೈರಲ್ ಆಯ್ತು ವಿಡಿಯೋ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ದರ್ಶನ್ ಮೇಲೆ ಚಪ್ಪಲಿ ಎಸೆತ; ನಿಮ್ಮ ಕೈವಾಡ ಎನ್ನುವವರಿದ್ದಾರೆ ಮಾತಾಡಿ ಶಿವಣ್ಣ ಎಂದ ಫ್ಯಾನ್ಸ್!
ನಿನ್ನೆ ( ಡಿಸೆಂಬರ್ 18 ) ಬಳ್ಳಾರಿಯ ಹೊಸಪೇಟೆಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ವಿ ಹರಿಕೃಷ್ಣ ಕಾಂಬಿನೇಶನ್‌ನ ಕ್ರಾಂತಿ ಚಿತ್ರದ ಎರಡನೇ ಹಾಡು ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಇನ್ನು ಈ ಸಲುವಾಗಿ ಕ್ರಾಂತಿ ಸಂಪೂರ್ಣ ತಂಡ ಹೊಸಪೇಟೆಗೆ ಆಗಮಿಸಿತ್ತು. ಈ ಕಾರ್ಯಕ್ರಮಕ್ಕೆ ಎರಡು ಮೂರು ದಿನಗಳು ಬಾಕಿ ಇದೆ ಎನ್ನುವಾಗಲೇ ದರ್ಶನ್ ಅಭಿಮಾನಿಗಳು ಹಾಗೂ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳ ನಡುವೆ ಫ್ಯಾನ್ ವಾರ್ ಶುರುವಾಗಿತ್ತು.
ಹಾಡು ಬಿಡುಗಡೆಯಾಗಲಿದ್ದ ವಾಲ್ಮೀಕಿ ವೃತ್ತದಲ್ಲಿಯೇ ಪುನೀತ್ ರಾಜ್‌ಕುಮಾರ್ ಅವರ ಬ್ಯಾನರ್ ಕಟ್ಟಿದ್ದ ಪುನೀತ್ ರಾಜ್‌ಕುಮಾರ್ ಫ್ಯಾನ್ಸ್ ವೇದಿಕೆ ಮೇಲೂ ಹತ್ತಿ ಪುನೀತ್ ಕಟ್ ಔಟ್ ಹಾಗೂ ಬ್ಯಾನರ್ ಹಿಡಿದು ಕುಣಿದಿದ್ದರು. ಹೀಗೆ ಪುನೀತ್ ರಾಜ್‌ಕುಮಾರ್ ಹಾಗೂ ದರ್ಶನ್ ಅಭಿಮಾನಿಗಳ ನಡುವಿನ ಫ್ಯಾನ್ ವಾರ್ ಮಿತಿಮೀರುತ್ತಿದ್ದು, ಹಾಡು ಬಿಡುಗಡೆ ಕಾರ್ಯಕ್ರಮಕ್ಕೆ ಅಡ್ಡಿಯಾಗುತ್ತಾ ಎಂಬ ಪ್ರಶ್ನೆ ಎದ್ದಿತ್ತು.
ಆದರೆ ನಟ ದರ್ಶನ್ ಹೊಸಪೇಟೆಯಲ್ಲಿನ ಪುನೀತ್ ರಾಜ್‌ಕುಮಾರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ನಂತರ ಪರಿಸ್ಥಿತಿ ತುಸು ತಣ್ಣಗಾಗಿತ್ತು ಹಾಗೂ ಕ್ರಾಂತಿ ಚಿತ್ರದ ಬೊಂಬೆ ಬೊಂಬೆ ಹಾಡು ಬಿಡುಗಡೆ ಕಾರ್ಯಕ್ರಮ ಕೂಡ ಯಾವುದೇ ಅಡ್ಡಿಯಿಲ್ಲದೇ ಆರಂಭಗೊಂಡಿತ್ತು. ಹೀಗೆ ಎಲ್ಲವೂ ಸರಿಯಾದ ಬೆನ್ನಲ್ಲೆ ಕಿಡಿಗೇಡಿಯೊಬ್ಬ ವೇದಿಕೆ ಮೇಲಿದ್ದ ನಟ ದರ್ಶನ್ ಅವರ ಮೇಲೆ ಚಪ್ಪಲಿ ಎಸೆದೆದಿದ್ದಾನೆ. ಇನ್ನು ದರ್ಶನ್ ಮೇಲೆ ಚಪ್ಪಲಿ ಎಸೆದದ್ದು ಯಾರು ಎಂಬುದು ಇನ್ನೂ ಸಹ ಬಹಿರಂಗವಾಗಿಲ್ಲ. ಜನಸ್ತೋಮವಿದ್ದ ಕಾರಣ ಆತ ಯಾರು ಎಂಬುದನ್ನು ಪತ್ತೆಹಚ್ಚಲಾಗಿಲ್ಲ. ಸದ್ಯ ಈ ಘಟನೆ ದರ್ಶನ್ ಅಭಿಮಾನಿಗಳಲ್ಲಿ ಬೇಸರ ಹಾಗೂ ನೋವನ್ನು ಉಂಟು ಮಾಡಿದ್ದು, ಬೃಹತ್ ಸುದ್ದಿಯಾಗ್ತಿದೆ.

ರಾಜ್‌ವಂಶ ಅಭಿಮಾನಿಗಳದ್ದೇ ಕೆಲಸ ಎಂದ ದರ್ಶನ್ ಫ್ಯಾನ್ಸ್!
ಇನ್ನು ಹಾಡು ಬಿಡುಗಡೆಯಾಗುವ ಮುನ್ನ ಹೊಸಪೇಟೆ ಕಿಂಗ್ ಪುನೀತ್ ಎಂದು ಕುಣಿದಾಡಿದ್ದ ಹಾಗೂ ಕ್ರಾಂತಿ ವೇದಿಕೆ ಏರಿ ಅಪ್ಪು ಹಾಡನ್ನು ಹಾಕಿಸಿ ಹೆಜ್ಜೆ ಹಾಕಿದ್ದ ಅಪ್ಪು ಅಭಿಮಾನಿಗಳೇ ಈ ಕೃತ್ಯ ಎಸಗಿದವರು ಎಂದು ದರ್ಶನ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಆರೋಪಿಸುತ್ತಿದ್ದಾರೆ. ನಮ್ಮ ನಟನ ಮೇಲೆ ಚಪ್ಪಲಿ ಎಸೆದಿದ್ದೀರ ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳದೇ ಸುಮ್ಮನೆ ಬಿಡುವುದಿಲ್ಲ ಎಂದು ಚಾಲೆಂಜ್ ಹಾಕಿದ್ದಾರೆ.

ಶಿವಣ್ಣ ಹಾಗೂ ರಾಘಣ್ಣ ಪೋಸ್ಟ್‌ಗಳಲ್ಲಿ ದರ್ಶನ್ ಫ್ಯಾನ್ಸ್ ಕಾಮೆಂಟ್
ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ಘಟನೆಯ ಕಿಡಿ ಜೋರಾಗಿ ಹೊತ್ತುಕೊಂಡಿದ್ದು ಬೆಂಕಿಯಾಗಿ ಪರಿಣಮಿಸಿದೆ. ದರ್ಶನ್ ಅವರ ಅಭಿಮಾನಿಗಳು ರಾಘವೇಂದ್ರ ರಾಜ್‌ಕುಮಾರ್ ಹಾಗೂ ಶಿವರಾಜ್‌ಕುಮಾರ್ ಅವರು ಮಾಡಿರುವ ಟ್ವೀಟ್‌ಗಳಿಗೆ ಕಾಮೆಂಟ್ ಮಾಡುತ್ತಿದ್ದು, ಹೊಸಪೇಟೆಯ ಕೃತ್ಯದ ಬಗ್ಗೆ ಹೇಳಿಕೆ ನೀಡಿ ಮೌನ ವಹಿಸಬೇಡಿ ಎಂದಿದ್ದಾರೆ. ಇನ್ನು ಬೇರೆ ವಿಷಯಗಳ ಬಗ್ಗೆ ಪೋಸ್ಟ್ ಮಾಡೋಕೆ ಆಗುತ್ತೆ, ದೊಡ್ಡ ವಿವಾದ ಉಂಟಾಗಿ ಪರಿಸ್ಥಿತಿ ಕೆಟ್ಟಮಟ್ಟಕ್ಕೆ ತಿರುಗುತ್ತಿರುವುದರ ಕುರಿತು ಒಂದು ಪೋಸ್ಟ್ ಹಾಕುವುದಕ್ಕೆ ಸಮಯ ಇಲ್ವ ಎಂದು ಶಿವ ರಾಜ್‌ಕುಮಾರ್ ಹಾಗೂ ರಾಘವೇಂದ್ರ ರಾಜ್‌ಕುಮಾರ್ ಟ್ವೀಟ್‌ಗೆ ದರ್ಶನ್ ಅಭಿಮಾನಿಗಳು ನುಗ್ಗಿ ಕಾಮೆಂಟ್ ಹಾಕುತ್ತಿದ್ದಾರೆ.

ಇದರ ಬಗ್ಗೆ ಮಾತನಾಡಿ ಶಿವಣ್ಣ ಎಂದ ಅಭಿಮಾನಿ
ಒಂದೆಡೆ ರಾಜ್‌ವಂಶದ ಅಭಿಮಾನಿಗಳೇ ದರ್ಶನ್ ಮೇಲೆ ಚಪ್ಪಲಿ ಎಸೆದದ್ದು ಎಂದು ದರ್ಶನ್ ಅಭಿಮಾನಿಗಳು ಆರೋಪ ಮಾಡುತ್ತಿದ್ದರೆ, ಇನ್ನೊಂದೆಡೆ ಇದನ್ನು ಖಂಡಿತ ರಾಜ್‌ವಂಶದ ಅಭಿಮಾನಿಗಳು ಮಾಡಲು ಸಾಧ್ಯವಿಲ್ಲ, ಯಾರೋ ಸಮಯವನ್ನು ಸರಿಯಾಗಿ ಬಳಸಿಕೊಂಡು ತಂದಿಡುವ ಕೆಲಸ ಮಾಡಿದ್ದಾರೆ ಅಷ್ಟೇ ಎಂದು ರಾಜ್‌ವಂಶ ಫ್ಯಾನ್ಸ್ ಸಾಮಾಜಿಕ ಜಾಲತಾಣದಲ್ಲಿ ಪ್ರತಿವಾದಿಸುತ್ತಿದ್ದಾರೆ. ಇನ್ನು ಈ ಕುರಿತಾಗಿ ಶಿವ ರಾಜ್‌ಕುಮಾರ್ ಅವರ ಬಳಿ ಕೆಲ ರಾಜ್‌ವಂಶ ಅಭಿಮಾನಿಗಳು ಬೇಡಿಕೆ ಇಟ್ಟಿದ್ದಾರೆ. ದರ್ಶನ್ ಅವರಿಗೆ ಚಪ್ಪಲಿ ಎಸೆದದ್ದರ ಹಿಂದೆ ರಾಜ್‌ವಂಶದ ಕೈವಾಡ ಇದೆ ಎಂದು ದೊಡ್ಡ ಮಟ್ಟದಲ್ಲಿ ಆರೋಪಿಸುತ್ತಿದ್ದಾರೆ, ಅಷ್ಟೇ ಅಲ್ಲ ನೀವು ಸುಮ್ಮನಿದ್ದರೆ ನಿಮ್ಮ ಕೈವಾಡವೂ ಸಹ ಇದೆ ಎಂದು ಹೇಳುವವರಿದ್ದಾರೆ, ನಿಮ್ಮ ಹಾಗೂ ತೂಗುದೀಪ ವಂಶದ ನಡುವಿನ ಬಾಂಧವ್ಯ ಹಾಳಾಗಬಾರದು. ಹೀಗಾಗಿ ದಯವಿಟ್ಟು ಇದರ ಕುರಿತು ಮಾತನಾಡಿ ಹಾಗೂ ತನಿಖೆ ನಡೆಸಿ ಸತ್ಯ ಏನೆಂಬುದನ್ನು ತಿಳಿಯುವಂತೆ ಮಾಡಿ ಎಂದು ಕಾಮೆಂಟ್ ಮಾಡಿದ್ದಾರೆ.