For Quick Alerts
  ALLOW NOTIFICATIONS  
  For Daily Alerts

  ಲವ್ ಮಾಕ್ಟೇಲ್ 2 ಚಿತ್ರಕ್ಕೆ ಎಂಟ್ರಿ ಕೊಟ್ಟ ಹೊಸ ನಟಿ ಸುಶ್ಮಿತಾ

  |

  ಡಾರ್ಲಿಂಗ್ ಕೃಷ್ಣ ನಟಿಸಿ, ನಿರ್ದೇಶಿಸುತ್ತಿರುವ 'ಲವ್ ಮಾಕ್ಟೇಲ್-2' ಚಿತ್ರ ಹಂತ ಹಂತದಲ್ಲೂ ಕುತೂಹಲ ಹೆಚ್ಚಿಸುತ್ತಿದೆ. ಲವ್ ಮಾಕ್ಟೇಲ್ ಚಿತ್ರದ ಮೂಲಕ ಕನ್ನಡಿಗರ ಹೃದಯ ಕದ್ದ ಡಾರ್ಲಿಂಗ್ ಕೃಷ್ಣ ಮತ್ತು ತಂಡ ಈಗ ಎರಡನೇ ಭಾಗಕ್ಕೆ ಸಿದ್ಧವಾಗಿದೆ.

  Drug Mafia 15 ಜನ ಹೀರೋ, ಹೀರೋಯಿನ್ ದಾಖಲೆಯನ್ನು ಸಾಕ್ಷಿ ಸಮೇತ ಪೋಲೀಸರ ಕೈಗೆ ಕೊಟ್ಟ ಇ,ಲಂಕೇಶ್ |

  ಈಗಾಗಲೇ ಸ್ಕ್ರಿಪ್ಟ್ ಕೆಲಸ ಮುಗಿಸಿ ಶೂಟಿಂಗ್‌ಗೆ ಸಜ್ಜಾಗುತ್ತಿರುವ ಚಿತ್ರತಂಡ ಫಸ್ಟ್ ಲುಕ್ ಪೋಸ್ಟರ್ ಸಹ ಬಿಡುಗಡೆ ಮಾಡಿತ್ತು. ಮೊದಲ ಭಾಗದಲ್ಲಿ ಭಾರಿ ಯಶಸ್ಸು ಕಂಡ ಸಿನಿಮಾ ಮುಂದುವರಿದ ಭಾಗದಲ್ಲಿ ಹೊಸ ಕಲಾವಿದರನ್ನು ಪರಿಚಯಿಸುತ್ತಿದೆ. ಮುಂದೆ ಓದಿ...

  ಲವ್ ಮಾಕ್ ಟೇಲ್-2: ನಿಧಿಮಾ ಇಲ್ಲದೆ ಉದ್ದ ಗಡ್ಡ ಬಿಟ್ಟು ಎಂಟ್ರಿ ಕೊಟ್ಟ ಆದಿ

  'ಲವ್ ಮಾಕ್ಟೇಲ್-2' ಪ್ರವೇಶಿಸಿದ ಸುಶ್ಮಿತಾ

  'ಲವ್ ಮಾಕ್ಟೇಲ್-2' ಪ್ರವೇಶಿಸಿದ ಸುಶ್ಮಿತಾ

  ಲವ್ ಮಾಕ್ಟೇಲ್-2 ಚಿತ್ರದ ಪ್ರಮುಖ ಪಾತ್ರವೊಂದಕ್ಕೆ ಸುಶ್ಮಿತಾ ಎಂಟ್ರಿಯಾಗಿದ್ದಾರೆ. ಇದು ಇವರ ಮೊದಲ ಚಿತ್ರವಾಗಲಿದ್ದು, ಆಡಿಷನ್ ಮೂಲಕ ಈ ಪಾತ್ರಕ್ಕೆ ಆಯ್ಕೆಯಾಗಿದ್ದಾರೆ. ಸದ್ಯಕ್ಕೆ ಸುಶ್ಮಿತಾ ಕುರಿತು ಹೆಚ್ಚೇನೂ ತಿಳಿದಿಲ್ಲವಾದರೂ, ಸೂಪರ್ ಹಿಟ್ ಚಿತ್ರದ ಸೀಕ್ವೆಲ್‌ಗೆ ಆಯ್ಕೆಯಾಗಿರುವುದು ಸರ್ಪ್ರೈಸ್ ಎನಿಸಿದೆ.

  ಶೀಘ್ರದಲ್ಲೇ 'ಲವ್ ಮಾಕ್‌ಟೇಲ್' ಜೋಡಿಯ ಮದುವೆ

  ಮೂವರು ನಾಯಕಿಯರು!

  ಮೂವರು ನಾಯಕಿಯರು!

  ಸದ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ ಲವ್ ಮಾಕ್ಟೇಲ್-2 ಚಿತ್ರದಲ್ಲಿ ಮೂವರು ನಾಯಕಿಯರು ಇರಲಿದ್ದಾರೆ ಎಂದು ಹೇಳಲಾಗಿದೆ. ಅದರಲ್ಲಿ ಒಬ್ಬರು ಸುಶ್ಮಿತಾ. ಇನ್ನು ಇಬ್ಬರು ಹೊಸ ನಟಿಯರಿಗೆ ಅವಕಾಶ ನೀಡುವ ಸಾಧ್ಯತೆ ಹೆಚ್ಚಿದೆ.

  ಅಭಿಲಾಷ್-ಖುಷಿ ಮುಂದುವರಿಯಲಿದ್ದಾರೆ

  ಅಭಿಲಾಷ್-ಖುಷಿ ಮುಂದುವರಿಯಲಿದ್ದಾರೆ

  ಇನ್ನು ಲವ್ ಮಾಕ್ಟೇಲ್ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ಅವರ ಸ್ನೇಹಿತನ ಪಾತ್ರದಲ್ಲಿ ನಟಿಸಿದ್ದ ಅಭಿಲಾಷ್ ಮತ್ತು ಖುಚಿ ಆಚಾರ್ ಪಾತ್ರಗಳು ಇಲ್ಲಿಯೂ ಮುಂದುವರಿಯಲಿದೆ.

  ಮಿಲನ ನಾಗರಾಜ್ ನಿರ್ಮಾಣ!

  ಮಿಲನ ನಾಗರಾಜ್ ನಿರ್ಮಾಣ!

  ಅಂದ್ಹಾಗೆ, ಲವ್ ಮಾಕ್ಟೇಲ್-2 ಚಿತ್ರವನ್ನು ಡಾರ್ಲಿಂಗ್ ಕೃಷ್ಣ ಮತ್ತು ಮಿಲನ ನಾಗರಾಜ್ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ. ಮೊದಲ ಭಾಗಕ್ಕೆ ಸಂಗೀತ ನೀಡಿದ ರಘು ದೀಕ್ಷಿತ್ ಸಂಗೀತ ಒದಗಿಸಲಿದ್ದಾರೆ. ಕ್ರೇಜಿಮೈಂಡ್ಸ್ ಛಾಯಾಗ್ರಹಣ ಹಾಗೂ ಸಂಕಲನ ಚಿತ್ರಕ್ಕಿದೆ.

  English summary
  New actress Sushmitha to make her debut with darling krishna's Love Mocktail 2 movie. Love Mocktail 2 is jointly produced by Krishna and Milana Nagaraj.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X