For Quick Alerts
  ALLOW NOTIFICATIONS  
  For Daily Alerts

  ತೆರೆಮೇಲೆ 'ಔಟ್‌ ಆಫ್ ಸಿಲಬಸ್' ಜೀವನ ಪಾಠ: ಸಾಥ್ ಕೊಟ್ಟ ಜೋಗಿ ಪ್ರೇಮ್!

  |

  ಸ್ಯಾಂಡಲ್‌ವುಡ್‌ ಯಶಸ್ಸಿನ ಉತ್ತುಂಗದಲ್ಲಿದೆ. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಚಿತ್ರರಂಗ ಮಿಂಚುತ್ತಿದೆ. ಈ ಗ್ಯಾಪ್‌ನಲ್ಲಿ ಕೇವಲ ಸೂಪರ್‌ಸ್ಟಾರ್‌ಗಳು ಅಷ್ಟೇ ಅಲ್ಲ. ಹೊಸಬರು ಕೂಡ ಹೊಸ ಹೊಸ ಕಥೆಯೊಂದಿಗೆ ಸಿನಿಪ್ರಿಯರನ್ನು ಮೆಚ್ಚಿಸಲು ಮುಂದೆ ಬರುತ್ತಿದ್ದಾರೆ.

  ಈ ಹಾದಿಯಲ್ಲಿ ಮತ್ತೊಂದು ಹೊಸಬರ ಕನ್ನಡ ಸಿನಿಮಾ ಸೆಟ್ಟೇರಿದೆ. ಅದುವೇ 'ಔಟ್ ಆಫ್ ಸಿಲಬಸ್'. ಪ್ರದೀಪ್ ದೊಡ್ಡಯ್ಯ ನಟಿಸುತ್ತಿರುವ ಈ ಸಿನಿಮಾ ಮೂಲಕ ವಿಭಿನ್ನ ಪ್ರಯತ್ನಕ್ಕೆ ಚಿತ್ರತಂಡ ಕೈ ಹಾಕಿದೆ. ಎಡಿ6 ಎಂಟರ್‌ಟೈನ್ಮೆಂಟ್‌ ಸಂಸ್ಥೆ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ.

  ಅಶ್ವಿನಿ ಪುನೀತ್ ರಾಜ್‌ಕುಮಾರ್ 'ಗಂಧದ ಗುಡಿ' ಎಲ್ಲಿ ನೋಡ್ತಾರೆ? ಕಾರ್ಯಕ್ರಮದ ಪಟ್ಟಿಯೇನು?ಅಶ್ವಿನಿ ಪುನೀತ್ ರಾಜ್‌ಕುಮಾರ್ 'ಗಂಧದ ಗುಡಿ' ಎಲ್ಲಿ ನೋಡ್ತಾರೆ? ಕಾರ್ಯಕ್ರಮದ ಪಟ್ಟಿಯೇನು?

  ಇತ್ತೀಚೆಗೆ ಈ ಸಿನಿಮಾದ ಮುಹೂರ್ತ ನಡೆದಿದ್ದು, ನಿರ್ದೇಶಕ-ನಟ ಜೋಗಿ ಪ್ರೇಮ್ ಹೊಸಬರ ತಂಡಕ್ಕೆ ಸಾಥ್ ನೀಡಿದ್ದಾರೆ. ಸಿನಿಮಾತಂಡದ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ. ಜೀವನ ನಮಗೆ ಕಲಿಸೋ ಪಾಠ, ನಾವು ಓದುವ ಪುಸ್ತಕಗಳಲ್ಲಿ ಇರುವುದಿಲ್ಲ ಅದು 'OUT OF SYLLABUS' ಎಂಬುದು ಈ ಸಿನಿಮಾ ಕಥೆಯ ಒನ್ ಲೈನ್ ಸ್ಟೋರಿ.

  ಅಂದ್ಹಾಗೆ 'ಔಟ್ ಆಫ್ ಸಿಲಬಸ್' ಸಿನಿಮಾದ ಕಥೆಯನ್ನು ರಚಿಸಿದ್ದು, ಸ್ವತ: ಪ್ರದೀಪ್ ದೊಡ್ಡಯ್ಯನವರೇ. 'ಗುರು ಶಿಷ್ಯರು' ಖ್ಯಾತಿಯ ನಿರ್ದೇಶಕ ಜಡೇಶ ಕೆ ಹಂಪಿ ಸ್ಕ್ರಿಪ್ಟ್ ಚೀಫ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಇನ್ನು ಪ್ರದೀಪ್‌ಗೆ ನಾಯಕಿ ಹೃತಿಕ ಶ್ರೀನಿವಾಸ್. ಈ ಸಿನಿಮಾದ ಹೆಚ್ಚಿಗೆ ಜವಾಬ್ದಾರಿಯನ್ನು 'ಕಬ್ಜಾ' ಚಿತ್ರದ ಎಡಿಟರ್ ಮಹೇಶ್ ರೆಡ್ಡಿಗೆ ವಹಿಸಲಾಗಿದೆ.

  ಅಪ್ಪು ಪುಣ್ಯಭೂಮಿಯಲ್ಲಿ 'ಗಂಧದ ಗುಡಿ' ಸೆಲೆಬ್ರೆಷನ್: 24 ಗಂಟೆ ಸಾಧು ಕೋಕಿಲಾ ಮನರಂಜನೆ!ಅಪ್ಪು ಪುಣ್ಯಭೂಮಿಯಲ್ಲಿ 'ಗಂಧದ ಗುಡಿ' ಸೆಲೆಬ್ರೆಷನ್: 24 ಗಂಟೆ ಸಾಧು ಕೋಕಿಲಾ ಮನರಂಜನೆ!

  ಇನ್ನು ಮುಖ್ಯ ಅತಿಥಿಯಗಾಗಿ ಆಗಮಿಸಿದ್ದ ಜೋಗಿ ಪ್ರೇಮ್ "ನನಗೆ ಹೆಚ್ಚೇನು ಇಂಗ್ಲಿಷ್ ಬರೋದಿಲ್ಲ. ಆದರೆ, ನನಗೆ ಸಿಲಬಸ್ ಗೊತ್ತು. ರೆಗ್ಯೂಲರ್ ಆಗಿ ನಾವು ಓದಿಕೊಂಡು ಬಂದಿದ್ದೇವಲ್ಲ. ಒಂದೊಳ್ಳೆ ಟೈಟಲ್‌, ತುಂಬಾನೇ ಕ್ಯಾಚಿ ಟೈಟಲ್. ನಮ್ಮ ಹುಡುಗ ತುಂಬಾನೇ ಬ್ರಿಲಿಯಂಟ್ ಹುಡುಗ. ಅವನಿಗೆ ರೈಟಿಂಗ್ ಚೆನ್ನಾಗಿದೆ. ನನ್ನ ಹಳೆಯ ಸ್ನೇಹಿತ. ಚಡ್ಡಿ ದೋಸ್ತ್ ಅಂತ ಹೇಳಬಹುದು. ಹೊಸ ಟೀಮ್ ಆಗಲಿ. ಹೊಸ ಕಥೆಗಳಾಗಿ, ಹೊಸ ಟೀಮ್ ಆಗಲಿ ಚೆನ್ನಾಗಿ ಬರುತ್ತಿದೆ. ನಮ್ಮ ಕನ್ನಡ ಸಿನಿಮಾದ ಕಂಟೆಂಟ್ ಚೆನ್ನಾಗಿ ಇರುವುದರಿಂದ ಇಡೀ ದೇಶ ನಿಂತು ನೋಡುತ್ತಿದೆ. ಹಾಗೇ ಈ ಟೀಮ್‌ಗೂ ಆಲ್‌ ದಿ ಬೆಸ್ಟ್." ಎಂದು ಹೊಸಬರ ತಂಡದ ಬೆಂಬಲಕ್ಕೆ ನಿಂತಿದ್ದಾರೆ.

  New Comers Out Of Syllabus Movie Launched By Jogi Prem

  ಪಕ್ಕದ ಮನೆ ಅಂಕಲ್ ಅಂತ ಟಿಕ್‌ ಟಾಕ್ ಮಾಡುತ್ತಿದ್ದರು. ಈಗ ಸಿನಿಮಾಗೋಸ್ಕರ ತುಂಬಾನೇ ಬದಲಾಗಿದ್ದೇನೆ. ದೊಡ್ಡ ಮಟ್ಟದಲ್ಲಿ ಸಕ್ಸಸ್ ಸಿಕ್ಕಿತ್ತು. ಬಳಿಕ ಪ್ರೇರಣೆ ನೀಡುವ ವಿಡಿಯೋಗಳನ್ನು ಮಾಡುತ್ತಿದ್ದರು. ನಂತರ ಕಾಲೇಜ್‌ಗಳಿಗೆ ಹೋಗಿ ಭಾಷಣ ನೀಡಲು ಆರಂಭಿಸಿದ್ದರು. ಯೂತ್ ಪಲ್ಸ್ ಹಿಡಿಯುವುದಕ್ಕಾಗಿ ಸುಮಾರು ಒಂದೂವರೆ ಲಕ್ಷ ಮಕ್ಕಳಿಗೆ ಮೋಟಿವೇಷನಲ್ ಸ್ಪೀಚ್ ನೀಡಲು ಮುಂದಾಗಿದ್ದರು. " ನಾನು ಕಾಲೇಜಿಗೆ ಹೋದಾಗಲೆಲ್ಲಾ ವಿದ್ಯಾರ್ಥಿಗಳು ಲೈಫ್ ಅಂದರೆ ಏನು ಅನ್ನೋ ಒಂದೇ ಪ್ರಶ್ನೆ ಕೇಳುತ್ತಿದ್ದರು. ಆಗ ವಿದ್ಯಾರ್ಥಿಗಳಿಗೆ ನಾನು ಲೈಫ್ ಅಂದರೆ, ಔಟ್ ಆಫ್ ಸಿಲಬಸ್ ಅಂತ ಹೇಳುತ್ತಿದ್ದೆ. ಅದಕ್ಕಾಗಿ ಈ ಟೈಟಲ್ ಅನ್ನು ಇಟ್ಟುಕೊಂಡಿದ್ದೆವು." ಎಂದು ಪ್ರದೀಪ್ ಹೇಳಿದ್ದಾರೆ.

  " ಔಟ್ ಆಫ್ ಸಿಲಬಲ್ ಇದು ನನಗೆ ಎರಡನೇ ಸಿನಿಮಾ. ಈ ಸಿನಿಮಾ ನೋಡಿ ಎಲ್ಲರೂ ಕನೆಕ್ಟ್ ಆಗಬಹುದು. ಎಲ್ಲರಿಗೂ ಇದು ಸಲ್ಲುತ್ತೆ." ಎನ್ನುತ್ತಾರೆ ಹೃತಿಕಾ ಶ್ರೀನಿವಾಸ್. ಇನ್ನು ಸಿನಿಮಾದಲ್ಲಿ ನಟಿಸಲಿರುವ ಉಳಿದ ಕಲಾವಿದರನ್ನು ಮುಂದಿನ ದಿನಗಳಲ್ಲಿ ಪರಿಚಿಯಿಸಲಿದೆ ಚಿತ್ರತಂಡ. j

  English summary
  New Comers Out Of Syllabus Movie Launched By Jogi Prem, Know More.
  Friday, October 28, 2022, 14:08
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X