»   » ನೂತನ ದಂಪತಿಗಳ ಟ್ಯಾಟೂ ಪ್ರೀತಿ ಎಂತದ್ದು ಅಂತೀರಾ?

ನೂತನ ದಂಪತಿಗಳ ಟ್ಯಾಟೂ ಪ್ರೀತಿ ಎಂತದ್ದು ಅಂತೀರಾ?

Posted By:
Subscribe to Filmibeat Kannada

ಕನ್ನಡ ಚಿತ್ರರಂಗದ ಖ್ಯಾತ ನಟಿ ಅನುಪ್ರಭಾಕರ್ ಮತ್ತು ನಟ ರಘು ಮುಖರ್ಜಿ ಅವರು ಕಳೆದ ತಿಂಗಳಲ್ಲಿ (ಏಪ್ರಿಲ್ 25) ಮದುವೆಯಾಗಿರುವ ವಿಚಾರ ಎಲ್ಲರಿಗೂ ಗೊತ್ತೇ ಇದೆ. ಇದೀಗ ನವ ದಂಪತಿಗಳು ಪಾರ್ಟಿ-ಶಾಪಿಂಗ್ ಅಂತ ಕೈ ಕೈ ಹಿಡಿದು ಸುತ್ತಾಡುತ್ತಾ ನೂತನ ಜೀವನವನ್ನು ಎಂಜಾಯ್ ಮಾಡುತ್ತಿದ್ದಾರೆ.[ಅನು ಪ್ರಭಾಕರ್-ರಘು ಮುಖರ್ಜಿ 'ಎರಡನೇ' ವಿವಾಹ ಮಹೋತ್ಸವ]

New Married couple Anu Prabhakar-Raghu Mukherjee's new tattoos

ಅಂದಹಾಗೆ ನವ ದಂಪತಿಗಳಾದ ನಟಿ ಅನು ಪ್ರಭಾಕರ್ ಮತ್ತು ರಘು ಮುಖರ್ಜಿ ಅವರು ಹೊಸದಾಗಿ ಟ್ಯಾಟೂ ಹಾಕಿಸಿಕೊಳ್ಳುವ ಮೂಲಕ ಸುದ್ದಿಯಾಗಿದ್ದಾರೆ. ಹೌದು ರಸೆಲ್ ಎನ್ನುವ ಪ್ರಖ್ಯಾತ ಟ್ಯಾಟೂ ಕಲಾವಿದ ನೂತನ ದಂಪತಿಗಳಾದ ರಘು ಮುಖರ್ಜಿ ಮತ್ತು ಅನುಪ್ರಭಾಕರ್ ಅವರಿಗೆ ಟ್ಯಾಟೂ ಹಾಕಿದ್ದಾರೆ.[ಸದ್ದಿಲ್ಲದೆ ಮದುವೆಯಾದ ಅನು ಪ್ರಭಾಕರ್-ರಘು ಮುಖರ್ಜಿ ಹೇಳಿದ್ದೇನು?]

New Married couple Anu Prabhakar-Raghu Mukherjee's new tattoos

ಈ ಟ್ಯಾಟೂ ಹಾಕಿಸಿಕೊಳ್ಳೋದು ಅಂದ್ರೆ ನಮ್ಮ ಚಿತ್ರರಂಗದ ತಾರೆಯರಿಗೆ ಒಂಥರಾ ಫ್ಯಾಶನ್ ಆದಂತಿದೆ. ಇದೀಗ ಈ ಸಾಲಿಗೆ ಹೊಸದಾಗಿ ಸೇರ್ಪಡೆಗೊಂಡವರು ನಟಿ ಅನುಪ್ರಭಾಕರ್ ಮತ್ತು ನಟ ರಘು ಮುಖರ್ಜಿ ಅವರು.[ತಾನು ಸತ್ತರೂ ಅಭಿಮಾನಿಗಳನ್ನು ಬಿಡಲಾರೆ ಎಂದ ದುನಿಯಾ ವಿಜಿ]

New Married couple Anu Prabhakar-Raghu Mukherjee's new tattoos

ಅನು ಪ್ರಭಾಕರ್ ಅವರು ತಮ್ಮ ಬೆನ್ನ ಮೇಲೆ 'ಅಪ್ಪ's girl' ಅಂತ ತಮ್ಮ ತಂದೆಯ ನೆನಪುಗಳನ್ನು ಜೀವನ ಪರ್ಯಂತ ಈ ಟ್ಯಾಟೂ ಮೂಲಕ ಶಾಶ್ವತವಾಗಿಸಿಕೊಂಡರೆ, ನಟ ರಘು ಮುಖರ್ಜಿ ಅವರು ತಮ್ಮ ತೋಳಿನ ಮೇಲೆ ಇಷ್ಟಗಲದ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಜೊತೆಗೆ ಮೊಣಕೈ ಮೇಲೂ ಟ್ಯಾಟೂ ಹಾಕಿಸಿಕೊಂಡಿದ್ದಾರೆ.

English summary
New Married couple Kannada Actress Anu Prabhakar and Actor Raghu Mukherjee got the new tattoo.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada