For Quick Alerts
  ALLOW NOTIFICATIONS  
  For Daily Alerts

  'ಎಸ್.ಎಲ್.ವಿ ಸಿರಿ ಲಂಬೋದರ ವಿವಾಹ': ನೂತನ ಚಿತ್ರಕ್ಕೆ ಚಾಲನೆ

  By ಫಿಲ್ಮಿಬೀಟ್ ಡೆಸ್ಕ್
  |

  "ಸಂಭ್ರಮ ಸೌರಭ"ದ ಮೂಲಕ ಮನೆ ಮಾತಾಗಿದ್ದ ಸಂಜೀವ್ ಕುಲಕರ್ಣಿ ಪುತ್ರ ಸೌರಭ್ ಕುಲಕರ್ಣಿ ನಿರ್ದೇಶಕನಾಗಿ ಕನ್ನಡ ಚಿತ್ರರಂಗ ಪಾದಾರ್ಪಣೆ ಮಾಡಿದ್ದಾರೆ.

  ಇವರ ನಿರ್ದೇಶನದ ಮೊದಲ ಚಿತ್ರ "ಎಸ್.ಎಲ್.ವಿ ಸಿರಿ ಲಂಬೋದರ ವಿವಾಹ" ಚಿತ್ರದ ಮುಹೂರ್ತ ಸಮಾರಂಭ ಧರ್ಮಗಿರಿ ಮಂಜುನಾಥನ ದೇವಸ್ಥಾನದಲ್ಲಿ ನೆರವೇರಿತು. ಮೊದಲ ಸನ್ನಿವೇಶಕ್ಕೆ ನಟ ಸಿಹಿಕಹಿ ಚಂದ್ರು ಆರಂಭ ಫಲಕ ತೋರಿದರು. ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ಕ್ಯಾಮೆರಾ ಚಾಲನೆ ಮಾಡಿದರು. ಮಂಡ್ಯ ರಮೇಶ್, ಮಾಸ್ಟರ್ ಆನಂದ್ ಸೇರಿದಂತೆ ಅನೇಕ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

  ಮುಹೂರ್ತದ ದಿನದಂದಿಲ್ಲೇ ಬೆಂಗಳೂರಿನಲ್ಲಿ ಮೊದಲ ಹಂತದ ಚಿತ್ರೀಕರಣ ಆರಂಭವಾಗಲಿದೆ. ಕಮರ್ಷಿಯಲ್ ರ್ಎಟರ್ ಟೈನರ್ ನ ಈ ಚಿತ್ರದ ನಿರ್ದೇಶಕ ಸೌರಭ್ ಕುಲಕರ್ಣಿ ರಂಗಭೂಮಿ, ಕಿರುತೆರೆಯಲ್ಲಿ ಹೆಸರು ಮಾಡಿರುವವರು. "ಪಾಪ ಪಾಂಡು" ಮೂಲಕ ಕನ್ನಡದ ಮನೆಮಾತಾಗಿರುವ ಸೌರಭ್‌ ಸಾಕಷ್ಟು ‌ಕಿರುಚಿತ್ರಗಳನ್ನು ನಿರ್ದೇಶಿಸಿದ್ದಾರೆ. ‌ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆಯನ್ನು ಸೌರಭ ಕುಲಕರ್ಣಿ ಹಾಗೂ ನಮ್ಮನೆ ಪ್ರೊಡಕ್ಷನ್ಸ್ ತಂಡದವರದು.

  ಈಗಾಗಲೇ ಅನೇಕ ಚಿತ್ರಗಳಲ್ಲಿ ನಟಿಸಿರುವ ಅಂಜನ್ ಎ ಭಾರದ್ವಾಜ್ ಈ ಚಿತ್ರದ ನಾಯಕ. ಮಂಡ್ಯ ರಮೇಶ್ ಪುತ್ರಿ ದಿಶಾ ರಮೇಶ್ ನಾಯಕಿ.‌ ರಾಜೇಶ್ ನಟರಂಗ, ಸುಂದರ್ ವೀಣಾ, ಬಾಲ ರಾಜವಾಡಿ, ರೋಹಿತ್ ನಾಗೇಶ್, ಶಬರಿ ಮಂಜು, ಹರೀಶ್ ಪ್ರಭಾತ್, ಶಿವಕುಮಾರ್, ಪಿ.ಡಿ.ಸತೀಶ್ ಚಂದ್ರ, ಗಿರೀಶ್ ಜತ್ತಿ, ಸಂತೋಷ್ ಕರ್ಕಿ, ಅಶೋಕ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

  ವಸ್ಯ್ರಾಟೊ ವೆಂಚ್ಯೂರ್ಸ್, ಪವಮಾನ ಕ್ರಿಯೇಷನ್ಸ್ ಹಾಗೂ ಧೂಪದ ದೃಶ್ಯ ಈ ಚಿತ್ರವನ್ನು ನಿರ್ಮಿಸುತ್ತಿದೆ.

  New Teams SLV Siri Lambodhara Movie Shooting Starts

  ಸಂಘರ್ಷ ಕುಮಾರ್ ಸಂಗೀತ ನಿರ್ದೇಶನ, ಕಿಟ್ಟಿ ಕೌಶಿಕ್ ಛಾಯಾಗ್ರಹಣ, ವಿನೋದ್ ಸಾಹಸ ನಿರ್ದೇಶನ, ದೇವಿಪ್ರಕಾಶ್ ಕಲಾ ನಿರ್ದೇಶನ ಹಾಗೂ ಕಂಬಿ ರಾಜು ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.

  English summary
  New movie team's 'SLV Siri Lambodhara' movie shooting starts in Bengaluru. Sihi Kahi Chandra, Sunil Puranik wish movie team for success.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X