Don't Miss!
- Sports
Ind Vs Aus Test: ಟೆಸ್ಟ್ ಸರಣಿಗೆ ಈ ರೀತಿ ಪಿಚ್ ಬೇಕು ಎಂದು ಕ್ಯುರೇಟರ್ಗಳಿಗೆ ಮನವಿ ಮಾಡಿದ ದ್ರಾವಿಡ್ ಮತ್ತು ರೋಹಿತ್ ಶರ್ಮಾ
- Lifestyle
Horoscope Today 5 Feb 2023: ಭಾನುವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ಗುಜರಾತ್ಗೆ ಬರಲಿದ್ದಾರೆ ಯುಎಸ್ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್
- Finance
ಅದಾನಿ ಸ್ಟಾಕ್ ಕುಸಿತ: 'ನಿಯಂತ್ರಕರು ಅವರ ಕೆಲಸ ಮಾಡುತ್ತಾರೆ', ಎಂದ ವಿತ್ತ ಸಚಿವೆ
- Automobiles
ಬೆಲೆ ಏರಿಕೆ ಪಡೆದುಕೊಂಡ ಬಹುಬೇಡಿಕೆಯ ಟೊಯೊಟಾ ಹೈರೈಡರ್ ಎಸ್ಯುವಿ
- Technology
ಅಜ್ಜಿಗೆ ಆಪ್ಗಳ ಬಗ್ಗೆ ತಿಳಿಸಿಕೊಟ್ಟ ಯುವಕ; ವೈರಲ್ ಆಯ್ತು ವಿಡಿಯೋ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
2023 Sandalwood: ಹೊಸ ವರ್ಷಕ್ಕೆ ಹೊಚ್ಚ ಹೊಸ ಪೋಸ್ಟರ್ಸ್, ಮೇಕಿಂಗ್ ಝಲಕ್
ಇಡೀ ಜಗತ್ತು ಹಳೇ ವರ್ಷಕ್ಕೆ ಬೈ ಹೇಳಿ ಹೊಸ ವರ್ಷವನ್ನು ಸ್ವಾಗತಿಸಿದೆ. ಸ್ಯಾಂಡಲ್‌ವುಡ್‌ನಲ್ಲೂ ಹೊಸ ವರ್ಷದ ಸಂಭ್ರಮ ಕಳೆಕಟ್ಟಿದೆ. ಬಹುನಿರೀಕ್ಷಿತ ಸಿನಿಮಾಗಳ ಹೊಸ ಹೊಸ ಪೋಸ್ಟರ್‌ಗಳು, ಟೀಸರ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಈ ವರ್ಷ ಕನ್ನಡ ಸಿನಿಮಾಗಳು ಮತ್ತಷ್ಟು ಸದ್ದು ಮಾಡುವ ಸುಳಿವು ಸಿಕ್ತಿದೆ.
2022ರಲ್ಲಿ ಕನ್ನಡ ಚಿತ್ರರಂಗದಲ್ಲಿ ದೊಡ್ಡಮಟ್ಟದಲ್ಲಿ ಸದ್ದು ಮಾಡಿದ್ದು ಗೊತ್ತೇಯಿದೆ. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಕನ್ನಡ ಸಿನಿಮಾಗಳು ಸಾವಿರಾರು ಕೋಟಿ ಕಲೆಕ್ಷನ್ ಮಾಡಿವೆ. ಈ ವರ್ಷ ಕೂಡ ಒಂದಷ್ಟು ಸಿನಿಮಾಗಳು ದೊಡ್ಡಮಟ್ಟದಲ್ಲಿ ಸದ್ದು ಮಾಡುವ ಸಾಧ್ಯತೆಯಿದೆ. ಹಬ್ಬ ಅಥವಾ ಹೊಸ ವರ್ಷದ ಸಂಭ್ರಮದಲ್ಲಿ ಸಿನಿರಸಿಕರಿಗೆ ವಿಶೇಷ ಉಡುಗೊರೆ ಸಿಗುತ್ತಿರುತ್ತದೆ. ವಿಶೇಷ ಸಂದರ್ಭಗಳಲ್ಲಿ ಪೋಸ್ಟರ್, ಟೀಸರ್ ರಿಲೀಸ್ ಆಗೋದು ಕಾಮನ್. ಈ ಬಾರಿ ಹೊಸ ವರ್ಷಕ್ಕೂ ಅಂತದ್ದೇ ಹೊಚ್ಚ ಹೊಸ ಪೋಸ್ಟರ್‌ಗಳು ರಿಲೀಸ್ ಆಗಿದೆ.
2023
ಹೊಸವರ್ಷಕ್ಕೆ
ಚಂದನವನದ
ತಾರೆಯರು
ವಿಷ್
ಮಾಡಿದ್ದು
ಹೀಗೆ
'ಕಬ್ಜ', 'KD', 'ಕ್ರಾಂತಿ', 'UI', 'ಮಾರ್ಟಿನ್', 'ಸಪ್ತ ಸಾಗರದಾಚೆ ಎಲ್ಲೋ', 'ಘೋಸ್ಟ್' ಸೇರಿದಂತೆ ಸಾಲು ಸಾಲು ಸಿನಿಮಾಗಳು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸದ್ದು ಮಾಡಲಿವೆ. 'KGF- 2' ನಂತರ ಯಶ್ ಹೊಸ ಸಿನಿಮಾ ಘೋಷಿಸಿಲ್ಲ. ಶೀಘ್ರದಲ್ಲೇ ಆ ಪ್ರಶ್ನೆಗೂ ಉತ್ತರ ಸಿಗಲಿದೆ.

'ಘೋಸ್ಟ್' ಮೋಷನ್ ಪೋಸ್ಟರ್
ಶ್ರೀನಿ ನಿರ್ದೇಶನದಲ್ಲಿ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ನಟನೆಯ 'ಘೋಸ್ಟ್' ಸಿನಿಮಾ ಮೋಷನ್ ಪೋಸ್ಟರ್ ಹೊಸ ವರ್ಷದ ಸಂಭ್ರಮದಲ್ಲೇ ರಿಲೀಸ್ ಆಗಿದೆ. ಚಿತ್ರದಲ್ಲಿ ಶಿವಣ್ಣ ಬಹಳ ವಿಭಿನ್ನ ಲುಕ್‌ನಲ್ಲಿ ದರ್ಶನ ಕೊಟ್ಟಿದ್ದಾರೆ. ರೆಟ್ರೋ ಸ್ಟೈಲ್‌ನಲ್ಲಿ ಸಿಕ್ಕಾಪಟ್ಟೆ ಮಜವಾಗಿ ಪೋಸ್ಟರ್ ಡಿಸೈನ್ ಮಾಡಿದ್ದಾರೆ. 'ಒನ್ಸ್ ಎ ಗ್ಯಾಂಗ್‌ಸ್ಟರ್ ಆಲ್ವೇಸ್ ಎ ಗ್ಯಾಂಗ್‌ಸ್ಟರ್' ಎಂದು ಬರೆದು ಶ್ರೀನಿ ಕುತೂಹಲ ಕೆರಳುವಂತೆ ಮಾಡಿದ್ದಾರೆ. ಸಿನಿಮಾ ಶೂಟಿಂಗ್ ಭರದಿಂದ ಸಾಗ್ತಿದೆ. ಇದೊಂದು ಆಕ್ಷನ್ ಥ್ರಿಲ್ಲರ್ ಸಿನಿಮಾ ಆಗಿದ್ದು, ಶಿವಣ್ಣನನ್ನು ಬಹಳ ವಿಭಿನ್ನವಾಗಿ ತೋರಿಸುವ ಪ್ರಯತ್ನ ನಡೀತಿದೆ. ಹೆಲಿಕ್ಯಾಪ್ಟರ್, ಕಾರ್ ಚೇಸಿಂಗ್ ಸೀನ್, ಗನ್ನು ಬುಲ್ಲೆಟ್ಟು ಸೌಂಡ್ ಜೋರಾಗಿದೆ. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸಿನಿಮಾ ತೆರೆಗಪ್ಪಳಿಸಲಿದೆ.

'KD' ಅಡ್ಡಕ್ಕೆ ಕ್ರೇಜಿಸ್ಟಾರ್ ಎಂಟ್ರಿ
ಜೋಗಿ ಪ್ರೇಮ್ ನಿರ್ದೇಶನದಲ್ಲಿ 'KD' ಸಿನಿಮಾ ಕೂಡ ಭಾರೀ ನಿರೀಕ್ಷೆ ಮೂಡಿಸಿದೆ. ಈಗಾಗಲೇ ಧ್ರುವ ಫಸ್ಟ್ ಲುಕ್ ಪೋಸ್ಟರ್ ಟೀಸರ್ ರಿಲೀಸ್ ಆಗಿ ಸದ್ದು ಮಾಡಿದೆ. ಚಿತ್ರದ ಮತ್ತೊಂದು ಮುಖ್ಯ ಪಾತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ನಟಿಸೋದು ಪಕ್ಕಾ ಆಗಿದೆ. ರೆಟ್ರೋ ಲುಕ್‌ನಲ್ಲಿ ಅಣ್ಣಯ್ಯಪ್ಪ ಆಗಿ ಕ್ರೇಜಿಸ್ಟಾರ್ ಕಾರಿನಿಂದ ಇಳಿದುಬರುವಂತೆ ಪೋಸ್ಟರ್ ಡಿಸೈನ್ ಮಾಡಿದ್ದಾರೆ. ಕೆಲ ದಿನಗಳ ಹಿಂದೆ ನಿರ್ದೇಶಕ ಪ್ರೇಮ್ ಬಾಲಿವುಡ್‌ನ ಸಂಜಯ್ ದತ್, ಮಲಯಾಳಂನ ಮೋಹನ್ ಲಾಲ್, ಪೃಥ್ವಿರಾಜ್ ಹಾಗೂ ವಿಜಯ್ ಸೇತುಪತಿ ಭೇಟಿ ಮಾಡಿ ಬಂದಿದ್ದರು. ಈ ನಾಲ್ವರಲ್ಲಿ ಒಬ್ಬರು ಅಣ್ಣಯ್ಯಪ್ಪ ಆಗುತ್ತಾರೆ ಎನ್ನಲಾಗಿತ್ತು. ಆದರೆ ಅಚ್ಚರಿ ಎನ್ನುವಂತೆ ಆ ಪಾತ್ರಕ್ಕೆ ಪ್ರೇಮ್, ಕ್ರೇಜಿಸ್ಟಾರ್‌ನ ಕರೆತಂದಿದ್ದಾರೆ. ಕೆವಿಎನ್ ಪ್ರೊಡಕ್ಷನ್ ಬ್ಯಾನರ್‌ನಲ್ಲಿ 5 ಭಾಷೆಗಳಲ್ಲಿ ಸಿನಿಮಾ ಮೂಡಿ ಬರ್ತಿದೆ.

'UI' ಮೇಕಿಂಗ್ ಝಲಕ್
ರಿಯಲ್ ಸ್ಟಾರ್ ಉಪೇಂದ್ರ 'UI' ಸಿನಿಮಾ ನಿರ್ದೇಶನದ ಜೊತೆಗೆ ಹೀರೊ ಆಗಿ ನಟಿಸ್ತಿದ್ದಾರೆ. ಚಿತ್ರದ ಸಣ್ಣ ಮೇಕಿಂಗ್ ಝಲಕ್ ಬಿಟ್ಟು 7 ಭಾಷೆಗಳಲ್ಲಿ ಹೊಸ ವರ್ಷದ ಶುಭಾಶಯ ಕೋರಿದ್ದಾರೆ. 'UI' ಚಿತ್ರದಲ್ಲಿ ಯಾವ ರೀತಿಯ ಕ್ಯಾಮರಾಗಳನ್ನು ಬಳಸಲಾಗ್ತಿದೆ, ಯಾರೆಲ್ಲಾ ತಂತ್ರಜ್ಞರು ತೆರೆ ಹಿಂದೆ ಕೆಲಸ ಮಾಡುತ್ತಿದ್ದಾರೆ ಎನ್ನುವುದನ್ನು ಸ್ಪೆಷಲ್ ವಿಡಿಯೋದಲ್ಲಿ ನೋಡಬಹುದು. ಸಿನಿಮಾ ಶೂಟಿಂಗ್ ಭರದಿಂದ ಸಾಗಿದ್ದು ಜೂನ್ ವೇಳೆಗೆ ಸಿನಿಮಾ ರಿಲೀಸ್ ಪ್ರಯತ್ನ ನಡೀತಿದೆ. ಜಿ. ಮನೋಹರನ್ ಹಾಗೂ ಕೆ. ಪಿ ಶ್ರೀಕಾಂತ್ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ.

'ಪೆಪೆ' ಸ್ಪೆಷಲ್ ಪೋಸ್ಟರ್
ಹೊಸ ವರ್ಷಕ್ಕೆ ವಿನಯ್ ರಾಜ್‌ಕುಮಾರ್ ನಟನೆಯ 'ಪೆಪೆ' ಚಿತ್ರದ ರಗಡ್ ಪೋಸ್ಟರ್ ರಿಲೀಸ್ ಆಗಿದೆ. ಶ್ರೀಲೇಶ್ ಎಸ್ ನಾಯರ್ ನಿರ್ದೇಶನದ ಈ ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಪೋಸ್ಟ್ ಪ್ರೊಡಕ್ಷನ್ ವರ್ಕ್ ನಡೀತಿದೆ. ಕೆಲ ದಿನಗಳ ಹಿಂದೆ ರಿಲೀಶ್ ಆಗಿದ್ದ ಟೀಸರ್ ಸಖತ್ ಕಿಕ್ ಕೊಟ್ಟಿತ್ತು. ಇಷ್ಟು ದಿನ ಕೊಂಚ ಸಾಫ್ಟ್ ರೋಲ್‌ಗಳಲ್ಲಿ ಕಾಣಿಸಿಕೊಳ್ತಿದ್ದ ವಿನಯ್ ಮೊದಲ ಬಾರಿಗೆ ಬಹಳ ರಗಡ್ ಆಗಿ ಮಿಂಚಿದ್ದಾರೆ. ಚಿತ್ರದಲ್ಲಿ ರಕ್ತಸಿಕ್ತ ಅಧ್ಯಾಯ ಹೇಳಲಾಗ್ತಿದೆ. ಶೀಘ್ರದಲ್ಲೇ ಸಿನಿಮಾ ತೆರೆಗೆ ಬರಲಿದೆ.

'ಕ್ರಾಂತಿ' ಹೊಸ ಪೋಸ್ಟರ್
ಇನ್ನು ಹೊಸ ವರ್ಷದ ಸಂಭ್ರಮದಲ್ಲೇ 'ಕ್ರಾಂತಿ' ಚಿತ್ರದ ಸ್ಪೆಷಲ್ ಅಪ್‌ಡೇಟ್ ಸಿಕ್ಕಿದೆ. ಹೊಸ ಪೋಸ್ಟರ್ ಸಮೇತ ಜನವರಿ 7ಕ್ಕೆ ಟ್ರೈಲರ್ ರಿಲೀಸ್ ಮಾಡುವುದಾಗಿ ಘೋಷಿಸಲಾಗಿದೆ. ಸೂಟ್ ತೊಟ್ಟು ಸನ್ ಗ್ಲಾಸ್ ಹಾಕಿಕೊಂಡು ಸ್ಟೈಲಿಶ್ ಲುಕ್‌ನಲ್ಲಿ ದರ್ಶನ್ ಕಾಣಿಸಿಕೊಂಡಿದ್ದಾರೆ. ವಿ. ಹರಿಕೃಷ್ಣ ನಿರ್ದೇಶನದ 'ಕ್ರಾಂತಿ' ಚಿತ್ರದಲ್ಲಿ ಘಟಾನುಘಟಿ ಕಲಾವಿದರು ನಟಿಸಿದ್ದಾರೆ. ಚಿತ್ರದಲ್ಲಿ ಸರ್ಕಾರಿ ಕನ್ನಡ ಶಾಲೆಗಳ ಸ್ಥಿತಿಗತಿ ಬಗ್ಗೆ ಚರ್ಚಿಸಲಾಗುತ್ತಿದೆ.