»   » ಕುತೂಹಲ ಹುಟ್ಟಿಸಿದ 'ಕಿಲ್ಲಿಂಗ್ ವೀರಪ್ಪನ್' ಪೋಸ್ಟರ್

ಕುತೂಹಲ ಹುಟ್ಟಿಸಿದ 'ಕಿಲ್ಲಿಂಗ್ ವೀರಪ್ಪನ್' ಪೋಸ್ಟರ್

Posted By:
Subscribe to Filmibeat Kannada

ಗಾಂಧಿನಗರದಲ್ಲಿ ಶಿವಣ್ಣ ಅಭಿಮಾನಿಗಳಿಗೆ ಇದೀಗ ಸಂಭ್ರಮದ ವಾತಾವರಣ. ಯಾಕಂತೀರ, ಇದೇ ಜುಲೈ 12 ನೇ ತಾರೀಖಿನಂದು ಅಣ್ಣಾವ್ರ ಮಗ ಶಿವರಾಜ್ ಕುಮಾರ್ 53ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ.

ಹರ್ಷ ಆಕ್ಷನ್-ಕಟ್ ಹೇಳಿದ್ದ, 'ವಜ್ರಕಾಯ' ಸಿನೆಮಾ ಬಾಕ್ಸಾಪೀಸ್ ಕೊಳ್ಳೆ ಹೊಡೆದ ನಂತರ ಸ್ಯಾಂಡಲ್ ವುಡ್ ಪ್ರಿನ್ಸ್ ಶಿವರಾಜ್ ಕುಮಾರ್ ಟಾಪ್ ಸ್ಟೇಜ್ ನಲ್ಲಿದ್ದಾರೆ. ಈ ಚಿತ್ರದಲ್ಲಿ ಶಿವಣ್ಣ 'ಒನ್ ಮ್ಯಾನ್ ಶೋ' ಅವತಾರದಲ್ಲಿ ಪ್ರೇಕ್ಷಕರ ಮನಗೆದ್ದಿದ್ದರು.[ರಾಮ್ ಗೋಪಾಲ್ ವರ್ಮಾ ಬಗ್ಗೆ ಎಂಥಾ ಕಾಮೆಂಟು.!]

'ವಜ್ರಕಾಯ' ದ ಮೂಲಕ ಇಷ್ಟೆಲ್ಲಾ ಸುದ್ದಿ ಮಾಡಿದ್ದ ಶಿವು, ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಗಾಂಧಿನಗರಗಳಲ್ಲಿ ಮತ್ತೆ ಸುದ್ದಿ ಮಾಡಿದ್ದಾರೆ. ಅದೇನಪ್ಪಾ ಅಂದ್ರೆ ಶಿವಣ್ಣ ಮುಂದಿನ ಚಿತ್ರ 'ಕಿಲ್ಲಿಂಗ್ ವೀರಪ್ಪನ್' ನಲ್ಲಿ ವೀರಪ್ಪನ್ ಹಂತಕನಾಗಲು ಹೊರಟಿದ್ದಾರೆ. ಕಾಡುಗಳ್ಳ ವೀರಪ್ಪನ್ ಕಥೆಯಾಧರಿಸಿದ 'ಕಿಲ್ಲಿಂಗ್ ವೀರಪ್ಪನ್' ಚಿತ್ರಕ್ಕೆ ಈಗಾಗಲೇ ಟೈಟಲ್ ಫೈನಲ್ ಆಗಿದೆ.[ಬಂದ..ಬಂದ..ನೋಡಿ ಹೊಸ ವೀರಪ್ಪನ್..]

ವಿವಾದಾತ್ಮಕ ನಿರ್ದೇಶಕ ಎಂದೇ ಖ್ಯಾತಿಯಾಗಿರುವ ರಾಮ್ ಗೋಪಾಲ್ ವರ್ಮ 'ಕಿಲ್ಲಿಂಗ್ ವೀರಪ್ಪನ್' ಚಿತ್ರಕ್ಕೆ ಆಕ್ಷನ್-ಕಟ್ ಹೇಳಿದ್ದಾರೆ. ಶಿವರಾಜ್ ಕುಮಾರ್, ಸಂದೀಪ್ ಭಾರಾದ್ವಾಜ್, ಸಂಚಾರಿ ವಿಜಯ್, ಯಜ್ಷಾ ಶೆಟ್ಟಿ, ಮತ್ತು ಪಾರುಲ್ ಯಾದವ್ ಚಿತ್ರದಲ್ಲಿ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಹೆಚ್ಚಿನ ಮಾಹಿತಿಗಾಗಿ ಸ್ಲೈಡ್ ಕ್ಲಿಕ್ ಮಾಡಿ...

ಸ್ಯಾಂಡಲ್ ವುಡ್ ಪ್ರಿನ್ಸ್ ಶಿವರಾಜ್ ಕುಮಾರ್

ಸ್ಯಾಂಡಲ್ ವುಡ್ ಪ್ರಿನ್ಸ್ ಶಿವಣ್ಣ ಇದೇ ಜುಲೈ 12ಕ್ಕೆ ತಮ್ಮ 53ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ನಿರ್ದೇಶಕ ಆರ್.ಜಿ.ವಿ ಚಿತ್ರದ ಕೆಲವು ಕೂತೂಹಲ ಪೋಸ್ಟರ್ ಗಳನ್ನು ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ.

ವಿವಿಧ ಮೂಲಗಳ ಪ್ರಕಾರ ಎಲ್ಲವೂ ಕೂಡಿ ಬಂದರೆ 'ಕಿಲ್ಲಿಂಗ್ ವೀರಪ್ಪನ್' ಚಿತ್ರದ ಟ್ರೈಲರ್ ಬಿಡುಗಡೆ ಮಾಡಲು ನಟ ಸುದೀಪ್ ಆಗಮಿಸುವ ಸಾಧ್ಯತೆಯಿದೆ. ಅಲ್ಲದೇ ತೆಲುಗು ನಿರ್ದೇಶಕ ಪೂರಿ ಜಗನ್ನಾಥ್ ಕೂಡ ಉಪಸ್ಥಿತರಿರುತ್ತಾರೆ.

ಶಿವಣ್ಣ ಸ್ಪೆಷಲ್ ಪೋಲಿಸ್ ಆಫೀಸರ್ ಲುಕ್ ನಲ್ಲಿ

'ಕಿಲ್ಲಿಂಗ್ ವೀರಪ್ಪನ್' ಚಿತ್ರದಲ್ಲಿ ಶಿವರಾಜ್ ಕುಮಾರ್ ಸ್ಪೆಷಲ್ ಪೋಲಿಸ್ ಆಫೀಸರ್ ಪಾತ್ರದಲ್ಲಿ ಮಿಂಚಲಿದ್ದಾರೆ.

ಶಿವರಾಜ್ ಕುಮಾರ್ ಗೆ ಅತ್ಯಂತ ನಿರೀಕ್ಷಿತ ಚಿತ್ರ

ಇದೇ ಮೊದಲ ಬಾರಿಗೆ ಶಿವಣ್ಣ ಆರ್.ಜಿ.ವಿ ಚಿತ್ರದಲ್ಲಿ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿರುವುದು. ಅಲ್ಲದೇ 'ಕಿಲ್ಲಿಂಗ್ ವೀರಪ್ಪನ್' ಚಿತ್ರ ಏಕಕಾಲದಲ್ಲಿ ಮೂರು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಮಾತ್ರವಲ್ಲದೇ ತೆಲುಗು, ತಮಿಳು ಭಾಷೆಗಳಿಗೆ ಡಬ್ ಆಗುತ್ತಿದೆ.

ರಾಜೇಶ್, ಶಿವಣ್ಣ, ಮತ್ತು ಸಂಚಾರಿ ವಿಜಯ್

'ಕಿಲ್ಲಿಂಗ್ ವೀರಪ್ಪನ್' ಚಿತ್ರದ ಶೂಟಿಂಗ್ ಈಗಾಗಲೇ ಆರಂಭಗೊಂಡಿದೆ.ಯಲ್ಲಾಪುರದ ಕಾಡುಗಳಲ್ಲಿ ಚಿತ್ರೀಕರಣ ಭರದಿಂದ ಸಾಗಿದೆ. ಆದಷ್ಟು ಬೇಗ ಚಿತ್ರದ ಕೆಲ ಭಾಗಗಳನ್ನು ಮುಗಿಸಿ, ಶಿವಣ್ಣ ಹುಟ್ಟುಹಬ್ಬದಂತೆ ಟ್ರೈಲರ್ ಬಿಡುಗಡೆ ಮಾಡುವ ಪ್ಲಾನ್ ಮಾಡಿದ್ದಾರೆ ಆರ್,ಜಿ.ವಿ.

ಮೊದಲ ಬಾರಿಗೆ ಸ್ಪೂರ್ತಿದಾಯಕ ಲುಕ್ ನಲ್ಲಿ ಶಿವಣ್ಣ

ಇದೇ ಮೊದಲ ಬಾರಿಗೆ ಸ್ಪೂರ್ತಿದಾಯಕ ಲುಕ್ ನಲ್ಲಿ ಕಾಣಿಸಿಕೊಂಡಿರುವ ಶಿವಣ್ಣ ಅಬಿಮಾನಿಗಳಲ್ಲಿ ಬಹಳ ನಿರೀಕ್ಷೆಯನ್ನು ಹುಟ್ಟುಹಾಕಿ ಚಿತ್ರದ ಬಿಡುಗಡೆಗೆ ಕಾಯುವಂತೆ ಮಾಡಿದ್ದಾರೆ.

ಸಂಚಾರಿ ವಿಜಯ್ ಮತ್ತು ಸಂದೀಪ್ ಭಾರದ್ವಾಜ್

62ನೇ ರಾಷ್ಟ್ರಮಟ್ಟದ ಅವಾರ್ಡ್ ವಿನ್ನರ್ ಸಂಚಾರಿ ವಿಜಯ್ ಮತ್ತು ಸಂದೀಪ್ ಭಾರದ್ವಾಜ್ ಶೂಟಿಂಗ್ ಸ್ಪಾಟ್ ನಲ್ಲಿ. 'ಕಿಲ್ಲಿಂಗ್ ವೀರಪ್ಪನ್' ಚಿತ್ರದಲ್ಲಿ ಸಂಚಾರಿ ವಿಜಯ್ ಪೋಲಿಸ್ ಆಫೀಸರ್ ಪಾತ್ರದಲ್ಲಿ ಮತ್ತು ಸಂದೀಪ್ 'ವೀರಪ್ಪನ್' ಪಾತ್ರದಲ್ಲಿ ಮಿಂಚಿದ್ದಾರೆ.

ಶಿವಣ್ಣ ಆರ್.ಜಿ.ವಿ ಜೋಡಿ

ತುಂಬಾ ಅಭಿಮಾನಿಗಳು ಶಿವಣ್ಣ ಆರ್.ಜಿ.ವಿ ಜೋಡಿಯನ್ನು ತೆರೆಯ ಮೇಲೆ ನೋಡಲು ಕಾತರದಿಂದ ಕಾಯುತ್ತಿದ್ದಾರೆ.

ಆಲ್ ಟೈಮ್ ಸ್ಯಾಂಡಲ್ ವುಡ್ ಸೂಪರ್ ಸ್ಟಾರ್

ಸ್ಯಾಂಡಲ್ ವುಡ್ ಸೂಪರ್ ಸ್ಟಾರ್ ಖ್ಯಾತಿ ಪಡೆಯುತ್ತಿರುವ ಶಿವಣ್ಣ ಅವರ ಹುಟ್ಟುಹಬ್ಬದಂದು ಅವರ ಅಭಿನಯದ ಮೂರು ಚಿತ್ರಗಳ ಟ್ರೈಲರ್ ಬಿಡುಗಡೆಗೊಳ್ಳಲಿದೆ. 'ಕಿಲ್ಲಿಂಗ್ ವೀರಪ್ಪನ್' ಚಿತ್ರದ ಹೆಚ್ಚಿನ ಮಾಹಿತಿಗಾಗಿ ಕನ್ನಡ ಫಿಲ್ಮಿ ಬೀಟ್ ನೋಡುತ್ತಿರಿ.

English summary
Newly Released Pics of Shivarajkumar's 'Killing Veerappan' Creates Anticipation! The movie is directed by Ram Gopal Varma.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada