For Quick Alerts
  ALLOW NOTIFICATIONS  
  For Daily Alerts

  ಡಾ.ರಾಜ್ ನಿಧನದ ದಿನ ಸುದ್ದಿ ಪತ್ರಿಕೆಗಳಲ್ಲಿ ಕಂಡು ಬಂದ ಶೀರ್ಷಿಕೆಗಳು

  |
  ಡಾ ರಾಜ್ ಕುಮಾರ್ ನಿಧನರಾದಾಗ ಸುದ್ದಿ ಪತ್ರಿಕೆಗಳಲ್ಲಿ ಕಂಡು ಬಂದು ಶೀರ್ಷಿಕೆಗಳಿವು

  ಏಪ್ರಿಲ್ ತಿಂಗಳು ಎಂದರೆ ಬಹುತೇಕರು ಡಾ ರಾಜ್ ಕುಮಾರ್ ತಿಂಗಳು ಅಂತನೇ ಹೇಳುತ್ತಾರೆ. ಅದರಲ್ಲೂ ರಾಜ್ ಅಭಿಮಾನಿಗಳಿಗೆ ತುಂಬ ವಿಶೇಷವಾದ ತಿಂಗಳಿದು. ಏಪ್ರಿಲ್ 12 ಡಾ ರಾಜ್ ಕುಮಾರ್ ಎಂಬ ಮೇರು ನಟ ಅಗಲಿದ ದಿನವಾದ್ರೆ, ಏಪ್ರಿಲ್ 24 ದೇವತಾ ಮನುಷ್ಯ ಹುಟ್ಟಿದ ದಿನ. ಈ ಎರಡು ದಿನಗಳನ್ನು ರಾಜ್ ಅಭಿಮಾನಿಗಳು ಶ್ರದ್ಧೆ ಯಿಂದ ಆಚರಿಸುತ್ತಾರೆ.

  ಶುಕ್ರವಾರ (ಏಪ್ರಿಲ್-12) ಡಾ ರಾಜ್ ಕುಮಾರ್ ಅವರ 13ನೇ ಪುಣ್ಯ ಸ್ಮರಣೆಯನ್ನು ಆಚರಿಸಲಾಗುತ್ತಿದೆ. ಅಭಿಮಾನಿಗಳು ಕಂಠೀರವ ಸ್ಟುಡಿಯೋಗೆ ತೆರಳಿ ಮೇರು ನಟನ ಸ್ಮಾರಕಕ್ಕೆ ಪೂಜೆ ಸಲ್ಲಿಸಿ ರಾಜ್ ಗೆ ನಮನ ಸಲ್ಲಿಸುತ್ತಾರೆ.

  ಡಾ.ರಾಜ್ ಅಸುನೀಗಿದ ದಿನ ಏನಾಗಿತ್ತು : ಅಭಿಮಾನಿ ಕಂಡಂತೆ

  ರಾಜ್ ಕುಮಾರ್ ಕುಟುಂಬದವರು ಮತ್ತು ಮಕ್ಕಳಾದ ರಾಘವೇಂದ್ರ ರಾಜ್ ಕುಮಾರ್, ಪುನೀತ್ ರಾಜ್ ಮತ್ತು ಶಿವರಾಜ್ ಕುಮಾರ್ ಪ್ರತಿ ವರ್ಷದಂತೆ ಈ ವರ್ಷವು ಅಪ್ಪಾಜಿ ಸ್ಮಾರಕಕ್ಕೆ ಪೂಜೆ ಸಲ್ಲಿಸಿದರು. ನಂತರ ಅಭಿಮಾನಿಗಳಿಗೆ ಪ್ರಸಾದ ವಿತರಣೆ ಮಾಡಲಾಗುತ್ತೆ. ಇನ್ನು ವಿಶೇಷ ಅಂದ್ರೆ, 13 ವರ್ಷಗಳ ಹಿಂದೆ ಡಾ ರಾಜ್ ಅಗಲಿದ ದಿನ ಕನ್ನಡದ ಪ್ರಮುಖ ದಿನಪತ್ರಿಕೆಗಳು ಪ್ರಕಸಿಟಿಸಿದ ಸುದ್ದಿ ಹೀಗಿದ್ದವು. ಮುಂದೆ ಓದಿ..

  ಚಿತ್ರ ಕೃಪೆ: ಶಿವಣ್ಣ ಕನಕಪುರ

  ದೈವ ಸನ್ನಿಧಿಗೆ ದೇವತಾ ಮನುಷ್ಯಾ

  ದೈವ ಸನ್ನಿಧಿಗೆ ದೇವತಾ ಮನುಷ್ಯಾ

  'ದೈವ ಸನ್ನಿಧಿಗೆ ದೇವತಾ ಮನುಷ್ಯಾ' ಎನ್ನುವ ಶೀರ್ಷಿಕೆ ಯೊಂದಿಗೆ ಉದಯವಾಣಿ ದಿನಪತ್ರಿಕೆ ಸುದ್ದಿ ಬಿತ್ತರಿಸಿತ್ತು. ಈ ಶೀರ್ಷಿಕೆ ಜೊತೆಗೆ ಮುಗಿಯದ ಒಂದು ಮುತ್ತಿನ ಕಥೆ ಎನ್ನುವ ಸಬ್ ಟೈಟಲ್ ಕೂಡ ಹಾಕಲಾಗಿತ್ತು. 2006 ಏಪ್ರಿಲ್ 12 ರಂದು ವರನಟ ಡಾ ರಾಜ್ ಕುಮಾರ್ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಅಗಲಿ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದರು.

  ಕನ್ನಡ ಕಣ್ಮಣಿ ಕಣ್ಮರೆ

  ಕನ್ನಡ ಕಣ್ಮಣಿ ಕಣ್ಮರೆ

  'ಕನ್ನಡ ಕಣ್ಮಣಿ ಕಣ್ಮರೆ' ಟೈಟಲ್ ನೀಡಿ ವಿಜಯ ಕರ್ನಾಟಕ ಸುದ್ದಿ ಪತ್ರಿಕೆ ಡಾ ರಾಜ್ ಕುಮಾರ್ ನಿಧನದ ಸುದ್ದಿಯನ್ನು ಪ್ರಕಟ ಮಾಡಿತ್ತು. ಜೊತೆಗೆ ಬೆಂಗಳೂರು ಉದ್ರಿಕ್ತ, ಅಘೋಷಿತ ಬಂದ್ ಎನ್ನುವ ಸಬ್ ಟೈಟಲ್ ಕೂಡ ಬಿತ್ತರಿಸಿತ್ತು. ಚಿರನಿದ್ರೆಗೆ ಜಾರಿರುವ ಡಾ ರಾಜ್ ಕುಮಾರ್ ಅವರನ್ನು ಪತ್ನಿ ಪಾರ್ವತಮ್ಮ ರಾಜ್ ಕುಮಾರ್ ಬಿಗಿ ದಪ್ಪಿ ಕಣ್ಣೀರಿಡುತ್ತಿರುವ ಮನ ಕಲುವಂತಹ ಫೋಟೋವನ್ನು ಪ್ರಕಟಮಾಡಿತ್ತು.

  'ದೊಡ್ಮನೆ' ನಟರ ಮೇಲಿತ್ತು ಸಿದ್ಧಗಂಗಾ ಶ್ರೀಗಳ ಆಶೀರ್ವಾದ

  ಕರ್ನಾಟಕ ರತ್ನ ಕಳಚಿ ಬಿತ್ತು

  ಕರ್ನಾಟಕ ರತ್ನ ಕಳಚಿ ಬಿತ್ತು

  'ಕರ್ನಾಟಕ ರತ್ನ ಕಳಚಿ ಬಿತ್ತು' ಶೀರ್ಷಿಕೆಯೊಂದಿಗೆ 5 ಕೋಟಿ ಕನ್ನಡಿಗರು ತಬ್ಬಲಿಗಳಾದರು ಎನ್ನುವ ಸಬ್ ಟೈಟಲ್ ಜೊತೆಗೆ ಸಂಜೆ ವಾಣಿ ಸುದ್ದಿ ಪತ್ರಿಕೆಯಲ್ಲಿ ರಾಜ್ ಕುಮಾರ್ ನಿಧನದ ಸುದ್ದಿ ಪ್ರಕಟವಾಗಿತ್ತು.

  ಡಾ ರಾಜ್‌ ಗೆ ಕಲರ್ ಶರ್ಟ್ ಹಾಕಿಸಿದ ಅಪರೂಪದ ಕಥೆ

  ಅಣ್ಣಾವ್ರು ಭೂತಾಯಿ ಮಡಿಲಿಗೆ

  ಅಣ್ಣಾವ್ರು ಭೂತಾಯಿ ಮಡಿಲಿಗೆ

  ಪದ್ಮ ಭೂಷಣ ಡಾ ರಾಜ್ ಕುಮಾರ್ ನಿಧನದ ದಿನ ಸಂಭವಿಸಿದ ಘಟನೆಗಳಾದ ಆಕ್ರೋಶವಾಗಿ ಮಾರ್ಪಟ್ಟ ಅಭಿಮಾನ, ಕಲ್ಲು ತೂರಾಟ, ಪೊಲೀಸ್ ಮೇಲೆ ಹಲ್ಲೆ, ಲಾಠಿ ಪ್ರಹಾರ, ಅಶ್ರುವಾಯು ಶೆಲ್ ಸಿಡಿತ, ಕಂಠೀರವ ಸ್ಟುಡಿಯೋ ಆವರಣದಲ್ಲಿ ಗೋಲಿಬಾರ್ ಎಲ್ಲವನ್ನು ಸೇರಿಸಿ ಉಷಾ ಕಿರಮ ದಿನಪತ್ರಿಕೆ 'ಅಣ್ಣಾವ್ರು ಭೂತಾಯಿ ಮಡಿಲಿಗೆ' ಎನ್ನುವ ಟೈಟಲ್ ನೊಂದಿಗೆ ರಾಜ್ ಕುಮಾರ್ ಅಗಲಿಕೆಯ ಸುದ್ದಿ ಬಿತ್ತರಿಸಿತ್ತು.

  English summary
  Kannada legendary actor Dr. Rajkumar remembrance of his 13th death anniversary, the family members of Dr. Rajkumar's family were present at Kanteerava Studio on April 12th. Here are the Newspapers Headlines on dr rajkumar death day .

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X