For Quick Alerts
  ALLOW NOTIFICATIONS  
  For Daily Alerts

  ಮೊಟ್ಟ ಮೊದಲ ಸಲ ಹಾರರ್ ಚಿತ್ರದಲ್ಲಿ ನಟಿ ನಿಧಿ ಸುಬ್ಬಯ್ಯ

  |

  'ಪಂಚರಂಗಿ' ನಟಿ ನಿಧಿ ಸುಬ್ಬಯ್ಯ ಮೊಟ್ಟ ಮೊದಲ ಹಾರರ್ ಥ್ರಿಲ್ಲಿಂಗ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಮದುವೆ ಆದ್ಮೇಲೆ ಚಿತ್ರರಂಗದಲ್ಲಿ ಅಷ್ಟಾಗಿ ಸಕ್ರಿಯರಾಗದ ನಿಧಿ ಈಗ ವಿಭಿನ್ನ ಪ್ರಯತ್ನಗಳ ಮೂಲಕ ಬ್ಯುಸಿಯಾಗುತ್ತಿದ್ದಾರೆ.

  ಮಮ್ಮಿ ಸೇವ್ ಮಿ ಖ್ಯಾತಿಯ ಲೋಹಿತ್ ಅರ್ಪಿಸುವ ಹಾರರ್ ಚಿತ್ರಕ್ಕೆ ನಿಧಿ ಸುಬ್ಬಯ್ಯ ಒಪ್ಪಿಗೆ ನೀಡಿದ್ದು, ಈ ಚಿತ್ರವನ್ನು ಪ್ರಸಾದ್ ಮತ್ತು ಪವನ್ ಆಕ್ಷನ್ ಕಟ್ ಹೇಳಲಿದ್ದಾರೆ.

  ಮದುವೆಯ ನಂತರ ಮತ್ತೆ ಚಿತ್ರರಂಗಕ್ಕೆ ನಿಧಿ ಕಮ್ ಬ್ಯಾಕ್ಮದುವೆಯ ನಂತರ ಮತ್ತೆ ಚಿತ್ರರಂಗಕ್ಕೆ ನಿಧಿ ಕಮ್ ಬ್ಯಾಕ್

  ಈ ಕುರಿತು ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ನಿಧಿ ಸುಬ್ಬಯ್ಯ ''ಹಾರರ್ ಸಿನಿಮಾಗಳು ನೋಡುವುದು ನನ್ನ ದೈನಂದಿನ ಮನರಂಜನೆಯಾಗಿದೆ. ಇದೀಗ, ನಾನೇ ಅಂತಹ ಪ್ರಾಜೆಕ್ಟ್‌ನಲ್ಲಿ ನಟಿಸುವ ಮೂಲಕ ಅನ್ವೇಷಣೆಗೆ ಕೈ ಹಾಕಿದ್ದೇನೆ'' ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

  ಅವನು ಹೀರೊ ನಾನು ವಿಲನ್ ಅಂತ ಹೇಳಿದ್ದೆ ಅದು ನಿಜ ಆಗೋಯ್ತು | Filmibeat Kannada

  ''ಈ ಪ್ರಾಜೆಕ್ಟ್‌ನಲ್ಲಿ ನಟಿಸಲು ನಾನು ಎದುರು ನೋಡುತ್ತಿದ್ದೇನೆ. ಈ ಚಿತ್ರವನ್ನು ಇಬ್ಬರು ನಿರ್ದೇಶಿಸುತ್ತಿರುವುದು ವಿಶೇಷ ಎನಿಸಿದೆ. ಮೊದಲ ಬಾರಿಗೆ ಈ ಪ್ರೊಡಕ್ಷನ್‌ ಹೌಸ್‌ನಲ್ಲಿ ನಟಿಸುತ್ತಿದ್ದೇನೆ. ಇದು ಹೆಚ್ಚು ಆಸಕ್ತಿ ನೀಡುತ್ತಿದೆ'' ಎಂದು ನಟಿ ಹೇಳಿಕೊಂಡಿದ್ದಾರೆ.

  ಕನ್ನಡ ಮತ್ತು ಹಿಂದಿ ಚಿತ್ರರಂಗದಲ್ಲಿ ತೊಡಗಿಕೊಂಡಿದ್ದ ನಟಿ ನಿಧಿ ಸುಬ್ಬಯ್ಯ ಕೊನೆಯದಾಗಿ ಶಿವರಾಜ್ ಕುಮಾರ್ ಮತ್ತು ರಚಿತಾ ರಾಮ್ ಅಭಿನಯಿಸಿದ್ದ 'ಆಯುಷ್ಮಾನ್ ಭವ' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಇದರಲ್ಲಿ ಅತಿಥಿ ಪಾತ್ರ ನಿರ್ವಹಿಸಿದ್ದರು.

  English summary
  Kannada actress Nidhi Subbaiah Excited to be a part of her first horror film. the movie produced by Lohith.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X