»   » ಮೈಸೂರಿನಲ್ಲಿ ಸರಳವಾಗಿ ಬರ್ತ್ ಡೇ ಆಚರಿಸಿಕೊಂಡ ನಿಖಿಲ್ ಕುಮಾರ್

ಮೈಸೂರಿನಲ್ಲಿ ಸರಳವಾಗಿ ಬರ್ತ್ ಡೇ ಆಚರಿಸಿಕೊಂಡ ನಿಖಿಲ್ ಕುಮಾರ್

Posted By:
Subscribe to Filmibeat Kannada

ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರ ಮೊಮ್ಮಗ ನಿಖಿಲ್ ಕುಮಾರ್ ಅವರು ನಿನ್ನೆ (ಜನವರಿ 22) ತಮ್ಮ ಹುಟ್ಟುಹಬ್ಬವನ್ನು ಮೈಸೂರಿನಲ್ಲಿ ಸಂಭ್ರಮದಿಂದ ಆಚರಿಸಿಕೊಂಡಿದ್ದಾರೆ. ಮಾತ್ರವಲ್ಲದೇ ಇದರ ಜೊತೆಗೆ ಅದ್ಧೂರಿ ಬಜೆಟ್ ನ ತಮ್ಮ ಚೊಚ್ಚಲ ಚಿತ್ರ 'ಜಾಗ್ವಾರ್' ನ ಟೀಸರ್ ಬಿಡುಗಡೆಗೆ ಎಲ್ಲಾ ರೀತಿಯ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದ್ದಾರೆ.

ಸ್ಯಾಂಡಲ್ ವುಡ್ ಕ್ಷೇತ್ರಕ್ಕೆ ಭರ್ಜರಿಯಾಗಿ ಎಂಟ್ರಿ ಕೊಟ್ಟಿರುವ ನಟ ನಿಖಿಲ್ ಕುಮಾರಸ್ವಾಮಿ ಅವರು ತಮ್ಮ ಕನಸಿನ 'ಜಗ್ವಾರ್'ಗೆಂದೇ ವಿಭಿನ್ನ ತಯಾರಿಗಳನ್ನು ನಡೆಸಿ ಈಗಾಗಲೇ ಗಾಂಧಿನಗರದ ಗಮನ ಸೆಳೆದಿರುವುದರಿಂದ ಸಾಮಾನ್ಯವಾಗಿ ಸಿನಿಮಾ ಹಲವಾರು ನಿರೀಕ್ಷೆಗಳನ್ನು ಹುಟ್ಟುಹಾಕಿದೆ.[ಸದ್ದಿಲ್ಲದೆ ನಡೀತಾಯಿದೆ ನಿಖಿಲ್ ಕುಮಾರ್ 'ಜಾಗ್ವಾರ್' ಶೂಟಿಂಗ್]

Nikhil Gowda's Jaguar shooting at the Infosys campus in Mysore

ಅರಮನೆ ನಗರಿ ಮೈಸೂರಿನಲ್ಲಿ ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿ ನಗರದ ಇನ್ಫೋಸಿಸ್ ಆವರಣದಲ್ಲಿ ಸುಮಾರು 40 ದಿನಗಳ ಕಾಲ ಚಿತ್ರೀಕರಣ ನಡೆಸಿರುವ ನಿಖಿಲ್ ಅವರ 'ಜಾಗ್ವಾರ್' ಪ್ರಾರಂಭದಲ್ಲಿಯೇ ಖಡಕ್ ಫೈಟ್ ದೃಶ್ಯಗಳ ಚಿತ್ರೀಕರಣ ನಡೆಸಿ ಅಭಿಮಾನಿಗಳ ಗಮನ ಸೆಳೆದಿದೆ.[ನಿಖಿಲ್ 'ಜಾಗ್ವಾರ್'ಗೆ ನಾಯಕಿ ಯಾರು ಗೊತ್ತಾಯ್ತಾ?]

ಸಾಂಸ್ಕೃತಿಕ ನಗರಿ ಮೈಸೂರಿನ ಖಾಸಗಿ ಹೋಟೆಲ್ ಒಂದರಲ್ಲಿ ನಟ ನಿಖಿಲ್ ಕುಮಾರ್ ಅವರು ತಮ್ಮ ತಂದೆ ಕುಮಾರಸ್ವಾಮಿ ಮತ್ತು ತಾಯಿ ಅನಿತಾ ಕುಮಾರಸ್ವಾಮಿ ಅವರೊಂದಿಗೆ ಸಿಂಪಲ್ ಆಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

English summary
Nikhil Gowda's Jaguar is the first film to be given access and shooting permission at the Infosys company Mysuru campus. That too, for free.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada