For Quick Alerts
  ALLOW NOTIFICATIONS  
  For Daily Alerts

  ಮತ್ತೆ ಅಖಾಡಕ್ಕಿಳಿದ ಮುಖ್ಯಮಂತ್ರಿಯ ಮಗ ನಿಖಿಲ್ ಕುಮಾರ್

  By Bharath Kumar
  |
  ಎಚ್ ಡಿ ಕುಮಾರಸ್ವಾಮಿ ಮಗ ನಿಖಿಲ್ ಕುಮಾರ್ ಮತ್ತೆ ಅಖಾಡಕ್ಕೆ | Filmibeat Kannada

  ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರ ಮಗ ನಿಖಿಲ್ ಕುಮಾರ್ ತಂದೆ ಪರವಾಗಿ, ಜೆಡಿಎಸ್ ಪಕ್ಷದ ಅಭ್ಯರ್ಥಿಗಳ ಪರವಾಗಿ ಬೀದಿಗಿಳಿದು ಚುನಾವಣೆ ಪ್ರಚಾರ ಮಾಡಿದ್ರು. ಈಗ ಎಲ್ಲವೂ ಮುಗಿದಿದ್ದು, ಮತ್ತೆ ಅಖಾಡಕ್ಕೆ ಇಳಿದಿದ್ದಾರೆ.

  'ಜಾಗ್ವಾರ್' ನಂತರ 'ಸೀತಾರಾಮ ಕಲ್ಯಾಣ' ಅಂತ ಎರಡನೇ ಸಿನಿಮಾ ಮಾಡ್ತಿದ್ದು, ಎಲೆಕ್ಷನ್ ಕಾರಣದಿಂದ ಶೂಟಿಂಗ್ ಗೆ ಬ್ರೇಕ್ ನೀಡಿದ್ದರು. ಈಗ ವಾಪಸ್ ಆಗಿರುವ ನಿಖಿಲ್ ಆಕ್ಷನ್ ಸೀನ್ ಗಳಲ್ಲಿ ತೊಡಗಿಕೊಂಡಿದ್ದಾರೆ.

  ಸದ್ಯ, 'ಸೀತಾರಾಮ ಕಲ್ಯಾಣ' ಚಿತ್ರದ ಫೈಟ್ ದೃಶ್ಯಗಳ ಚಿತ್ರೀಕರಣ ನಡೆಯುತ್ತಿದ್ದು, ಮುಂದಿನ ಹತ್ತು ದಿನಗಳ ಕಾಲ ಆಕ್ಷನ್ ಸೀಕ್ವೆನ್ಸ್ ಗಳಲ್ಲಿ ನಿಖಿಲ್ ಶೂಟಿಂಗ್ ಮಾಡಲಿದ್ದಾರೆ. ಸಾಹಸ ನಿರ್ದೇಶಕ ರಾಮ್-ಲಕ್ಷ್ಮಣ ಅವರು ಈ ದೃಶ್ಯಗಳಿಗೆ ಆಕ್ಷನ್ ಕಟ್ ಹೇಳ್ತಿದ್ದಾರೆ.

  ಸೀತಾರಾಮ ಕಲ್ಯಾಣದಲ್ಲಿ ಬಿಗ್ ಸ್ಟಾರ್ ಗಳ ಸಮಾಗಮ ಸೀತಾರಾಮ ಕಲ್ಯಾಣದಲ್ಲಿ ಬಿಗ್ ಸ್ಟಾರ್ ಗಳ ಸಮಾಗಮ

  ಇಲ್ಲಿಯವರೆಗೂ ಚಿತ್ರದ ಅರ್ಧದಷ್ಟು ಭಾಗ ಶೂಟಿಂಗ್ ಮುಗಿದಿದ್ದು, ಉಳಿದ ಭಾಗದ ಚಿತ್ರೀಕರಣವನ್ನ ಮಾಡಲು ಪ್ಲ್ಯಾನ್ ಮಾಡಲಾಗಿದೆ. ಶೂಟಿಂಗ್ ಅಂತ್ಯವಾದ ತಕ್ಷಣ ಪೋಸ್ಟ್ ಪ್ರೊಡಕ್ಷನ್ ಗೆ ಹೋಗಿ, ಇದೇ ವರ್ಷ ತೆರೆಗೆ ತರುವ ಯೋಜನೆ ಹೊಂದಿದ್ದಾರೆ.

  ರಾಜಮೌಳಿ ಮತ್ತು ನಿಖಿಲ್ ಬಗ್ಗೆ ಹೊರಬಿತ್ತು ರೋಚಕ ಸುದ್ದಿ.!ರಾಜಮೌಳಿ ಮತ್ತು ನಿಖಿಲ್ ಬಗ್ಗೆ ಹೊರಬಿತ್ತು ರೋಚಕ ಸುದ್ದಿ.!

  ಇನ್ನುಳಿದಂತೆ ಎ ಹರ್ಷ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ಡಿಂಪಲ್ ಕ್ವೀನ್ ರಚಿತಾ ರಾಮ್ ನಾಯಕಿಯಾಗಿದ್ದಾರೆ. ಇವರ ಜೊತೆಗೆ ಶರತ್ ಕುಮಾರ್, ರವಿಶಂಕರ್, 'ರನ್ನ' ಖ್ಯಾತಿ ನಟಿ ಮಧು ಸೇರಿದಂತೆ ಹಲವರು ಅಭಿನಯಿಸಿದ್ದಾರೆ.

  Nikhil Kumar back on Seetharama Kalayana sets

  ಮತ್ತೊಂದೆಡೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಕುರುಕ್ಷೇತ್ರ' ಚಿತ್ರದಲ್ಲಿ ಅಭಿಮನ್ಯು ಪಾತ್ರ ನಿರ್ವಹಿಸಿರುವ ನಿಖಿಲ್ ಕುಮಾರ್, ತನ್ನ ಭಾಗದ ಚಿತ್ರೀಕರಣ ಮುಗಿಸಿದ್ದಾರೆ. ಎಲ್ಲ ಅಂದುಕೊಂಡಂತೆ ಆದ್ರೆ, ಇವರೆಡು ಚಿತ್ರಗಳು ಇದೇ ವರ್ಷ ಬಿಡುಗಡೆಯಾಗಲಿದೆ.

  English summary
  As the political drama is dying down, Nikhil Kumar, son of chief minister HD Kumaraswamy, is back on sets. The actor had taken a break to help his father with his political campaign.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X