»   » 'ಕುರುಕ್ಷೇತ್ರ' ಚಿತ್ರದಲ್ಲಿ ನಿಖಿಲ್ ಕುಮಾರ್ ಲುಕ್ ಬಹಿರಂಗ

'ಕುರುಕ್ಷೇತ್ರ' ಚಿತ್ರದಲ್ಲಿ ನಿಖಿಲ್ ಕುಮಾರ್ ಲುಕ್ ಬಹಿರಂಗ

Posted By:
Subscribe to Filmibeat Kannada

'ಕುರುಕ್ಷೇತ್ರ' ಚಿತ್ರದಲ್ಲಿ ನಟ ನಿಖಿಲ್ ಕುಮಾರ್ ನಟಿಸುವುದು ಅಧಿಕೃತವಾಗಿದೆ. ಜೊತೆಗೆ ಚಿತ್ರದಲ್ಲಿ ಅವರ ಲುಕ್ ಹೇಗಿರಲಿದೆ ಎಂಬ ಪ್ರಶ್ನೆಗೂ ಈಗ ಉತ್ತರ ಸಿಕ್ಕಿದೆ.

ಚಿತ್ರದಲ್ಲಿ ನಿಖಿಲ್ ಕುಮಾರ್ 'ಅಭಿಮನ್ಯು' ಪಾತ್ರವನ್ನು ಮಾಡಲಿದ್ದಾರೆ. ಈ ಪಾತ್ರ ಹೇಗಿರಬೇಕು ಎಂದು ಚಿತ್ರತಂಡ ಪ್ಲಾನ್ ಮಾಡಿ ಒಂದು ಚಿತ್ರಣವನ್ನು ಸ್ಕೆಚ್ ಮಾಡಿದೆ. ತಮ್ಮ ಪಾತ್ರದ ಆ ಸ್ಕೆಚ್ ನ್ನು ನಿಖಿಲ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Nikhil kumar look in 'Kurukshetra' Movie

ನಿಖಿಲ್ ಅವರ 'ಅಭಿಮನ್ಯು' ಲುಕ್ ಕಂಡು ಅಭಿಮಾನಿಗಳು ತುಂಬ ಸಂತಸಗೊಂಡಿದ್ದಾರೆ. ನೂರಾರೂ ಅಭಿಮಾನಿಗಳು ಈ ಪಾತ್ರ ನಿಖಿಲ್ ಅವರಿಗೆ ತುಂಬ ಚೆನ್ನಾಗಿ ಸೂಕ್ತವಾಗುತ್ತಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಇದೇ ಜುಲೈ 31 ರಂದು ಬೆಂಗಳೂರಿನಲ್ಲಿ 'ಕುರುಕ್ಷೇತ್ರ' ಸಿನಿಮಾ ಸೆಟ್ಟೇರಲಿದೆ. ಮುನಿರತ್ನ ನಿರ್ಮಾಣ ಮಾಡುತ್ತಿದ್ದು, ನಾಗಣ್ಣ ನಿರ್ದೇಶನ ಮಾಡುತ್ತಿದ್ದಾರೆ. ದರ್ಶನ್, ರವಿಚಂದ್ರನ್, ಸಾಯಿಕುಮಾರ್, ಹರಿಪ್ರಿಯಾ, ಲಕ್ಷ್ಮಿ, ಸ್ನೇಹಾ, ಸೇರಿದಂತೆ ಹಲವರು ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

English summary
Actor Nikhil kumar has taken his facebook account to share his first look in 'Kurukshetra' Movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada