twitter
    For Quick Alerts
    ALLOW NOTIFICATIONS  
    For Daily Alerts

    ನಿಖಿಲ್ ಮಣಿಸಲು ಮತ್ತೆ ತಯಾರಾಗುತ್ತಿದ್ಯಾ 'ಚಕ್ರವ್ಯೂಹ'

    |

    Recommended Video

    ನಿಖಿಲ್ ಮಣಿಸಲು ಮತ್ತೆ ತಯಾರಾಗುತ್ತಿದ್ಯಾ 'ಚಕ್ರವ್ಯೂಹ'

    ಕಳೆದ ಲೋಕಸಭೆ ಚುನಾವಣೆಯಲ್ಲಿ ಮಂಡ್ಯದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ನಿಖಿಲ್ ಕುಮಾರ್, ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ವಿರುದ್ಧ ಸೋಲು ಕಂಡಿದ್ದರು.

    ಈ ಸೋಲಿನ ಬಳಿಕ ಹತಾಶೆಗೆ ಒಳಗಾಗದ ನಿಖಿಲ್ ಕುಮಾರ್ ಸಕ್ರೀಯ ರಾಜಕಾರಣದಲ್ಲಿ ತೊಡಗಿಸಿಕೊಳ್ಳುವ ಮೂಲಕ, ಮತ್ತೆ ಬರ್ತೀನಿ ಎಂಬ ಸುಳಿವು ಕೊಟ್ಟಿದ್ದರು. ಇದೀಗ, ರಾಜ್ಯದಲ್ಲಿ ಅನರ್ಹಗೊಂಡಿರುವ ಶಾಸಕರ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯುವ ಸಾಧ್ಯತೆ ಇದೆ. ಒಂದು ವೇಳೆ ಚುನಾವನೆ ನಡೆದಿದ್ದೇ ಆದರೆ, ಜೆಡಿಎಸ್ ಶಾಸಕರಿದ್ದ ಒಂದು ಕ್ಷೇತ್ರದಲ್ಲಿ ನಿಖಿಲ್ ಸ್ಪರ್ಧಿಸಲಿದ್ದಾರೆ ಎನ್ನಲಾಗುತ್ತಿದೆ.

    ನಿಖಿಲ್ ಇಲ್ಲ ಇಲ್ಲ ಅಂತಿದ್ರೂ ಟಾಲಿವುಡ್ ನಲ್ಲಿ ಸೌಂಡ್ ಮಾಡ್ತಿದೆ ಆ ಸುದ್ದಿ.! ನಿಖಿಲ್ ಇಲ್ಲ ಇಲ್ಲ ಅಂತಿದ್ರೂ ಟಾಲಿವುಡ್ ನಲ್ಲಿ ಸೌಂಡ್ ಮಾಡ್ತಿದೆ ಆ ಸುದ್ದಿ.!

    ಅದ್ಯಾವಾಗ ಈ ಸುದ್ದಿ ಜೆಡಿಎಸ್ ಪಾಳಯದಲ್ಲಿ ಚರ್ಚೆಯಾಯಿತೋ, ಅದನ್ನ ಮನಗಂಡ ಎದುರಾಳಿ ಪಕ್ಷದವರು, ನಿಖಿಲ್ ಸ್ಪರ್ಧಿಸಿದ್ದರೇ ಮತ್ತೆ ಅವರನ್ನ ಸೋಲಿಸಲು ಚಕ್ರವ್ಯೂಹ ನಿರ್ಮಿಸುತ್ತಿದ್ದಾರೆ. ನಿಖಿಲ್ ಅವರನ್ನ ಸೋಲಿಸಲೇ ಬೇಕು ಎಂಬ ಕಾರಣದಿಂದ ಈ ಮೂರವಲ್ಲಿ ಒಬ್ಬರನ್ನ ಎದುರಾಳಿಯಾಗಿ ನಿಲ್ಲಿಸಬೇಕು ಎಂಬ ಮಾತು ಕೇಳಿಬರುತ್ತಿದೆ. ಯಾರದು?

    ಕೆ.ಆರ್ ಪೇಟೆಯಿಂದ ಸ್ಪರ್ಧೆ

    ಕೆ.ಆರ್ ಪೇಟೆಯಿಂದ ಸ್ಪರ್ಧೆ

    ವಿಧಾನಸಭೆಯಿಂದ ಕೆ.ಆರ್ ಪೇಟೆ ಶಾಸಕ ನಾರಾಯಣ ಗೌಡ ಅನರ್ಹವಾಗಿದ್ದು, ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಕ್ಷೇತ್ರದಲ್ಲಿ ಬೈ ಎಲೆಕ್ಷನ್ ನಡೆಯುವ ಸಾಧ್ಯತೆ ಇದ್ದು, ನಿಖಿಲ್ ಕುಮಾರ್ ಅವರನ್ನ ಕಣಕ್ಕಿಳಿಸಲು ಪಕ್ಷದಿಂದ ಚಿಂತನೆ ನಡೆಸಲಾಗುತ್ತಿದೆ. ಇನ್ನೊಂದು ಕಡೆ ಮಹಾಲಕ್ಷ್ಮಿ ಲೇಔಟ್ ಮತ್ತು ರಾಜರಾಜೇಶ್ವರಿ ವಿಧಾನಸಭೆಯಲ್ಲೂ ಬೈ ಎಲೆಕ್ಷನ್ ನಡೆಯುವ ಸಾಧ್ಯತೆ ಇದ್ದು, ಆ ಕ್ಷೇತ್ರವೂ ನಿಖಿಲ್ ಸ್ಪರ್ಧೆಗೆ ಸಿದ್ಧವಾಗಬಹುದು.

    ಅಭಿಷೇಕ್ ಸ್ಪರ್ಧಿಸಲಿ: ಜನರ ಬೇಡಿಕೆ

    ಅಭಿಷೇಕ್ ಸ್ಪರ್ಧಿಸಲಿ: ಜನರ ಬೇಡಿಕೆ

    ಕೆ.ಆರ್ ಪೇಟೆಯಲ್ಲಿ ಜೆಡಿಎಸ್ ಪಕ್ಷದಿಂದ ನಿಖಿಲ್ ಕುಮಾರ್ ಸ್ಪರ್ಧೆ ಮಾಡುವುದು ಖಚಿತವಾದರೇ, ಅಂಬರೀಶ್ ಅವರ ಮಗ ಅಭಿಷೇಕ್ ಇಲ್ಲಿ ನಿಖಿಲ್ ವಿರುದ್ಧ ಸ್ಪರ್ಧಿಸಲಿ ಎಂಬ ಬೇಡಿಕೆ ಬರುತ್ತಿದೆಯಂತೆ. ಪಕ್ಷೇತರವಾಗಿ ಅಥವಾ ಯಾವುದೇ ಪಕ್ಷದಿಂದಾಗಲಿ ಅಭಿಷೇಕ್ ಸ್ಪರ್ಧಿಸಲಿ ಎಂಬ ಮಾತು ಅಂಬರೀಶ್ ಅಭಿಮಾನಿಗಳಲ್ಲಿದೆಯಂತೆ.

    ಕೊನೆಯ ಕ್ಷಣದಲ್ಲಿ ಎಚ್ಚೆತ್ತುಕೊಂಡ 'ಅಭಿಮನ್ಯು' ನಿಖಿಲ್ ಕುಮಾರ್ಕೊನೆಯ ಕ್ಷಣದಲ್ಲಿ ಎಚ್ಚೆತ್ತುಕೊಂಡ 'ಅಭಿಮನ್ಯು' ನಿಖಿಲ್ ಕುಮಾರ್

    ಸುಮಲತಾ ಹೆಸರು ಚರ್ಚೆಯಲ್ಲಿದೆ.!

    ಸುಮಲತಾ ಹೆಸರು ಚರ್ಚೆಯಲ್ಲಿದೆ.!

    ಇನ್ನೊಂದೆಡೆ ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ನಿಖಿಲ್ ವಿರುದ್ಧ ಗೆದ್ದಿದ್ದ ಸುಮಲತಾ ಅವರನ್ನ, ಬೈ ಎಲೆಕ್ಷನ್ ನಲ್ಲಿ ಬಿಜೆಪಿಯಿಂದ ಸ್ಪರ್ಧಿಸುವಂತೆ ಮಾಡಿ, ಗೆದ್ದ ಮೇಲೆ ಯಡಿಯೂರಪ್ಪ ಕ್ಯಾಬಿನೆಟ್ ನಲ್ಲಿ ಒಳ್ಳೆಯ ಖಾತೆ ನೀಡಬಹುದು ಎಂಬ ಲೆಕ್ಕಚಾರವೂ ಹಾಕಲಾಗಿದೆಯಂತೆ. ಇನ್ನೊಂದೆಡೆ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಅವರನ್ನ ನಿಖಿಲ್ ವಿರುದ್ಧ ನಿಲ್ಲಿಸಬಹುದು ಎಂಬ ಚರ್ಚೆಯೂ ಆಗುತ್ತಿದೆ.

    'ಚಕ್ರವ್ಯೂಹ' ಭೇದಿಸುತ್ತಾರಾ ನಿಖಿಲ್.!

    'ಚಕ್ರವ್ಯೂಹ' ಭೇದಿಸುತ್ತಾರಾ ನಿಖಿಲ್.!

    ನಿಖಿಲ್ ಕುಮಾರ್ ಸ್ಪರ್ಧೆ ಖಚಿತವಾದರೇ, ಅವರ ವಿರುದ್ಧ ಯಾರಾದರೂ ಒಬ್ಬ ಪ್ರಭಾವಿ ನಾಯಕರನ್ನ ನಿಲ್ಲಿಸಲು ಎದುರಾಳಿಗಳು ಲೆಕ್ಕಾಚಾರ ಹಾಕುತ್ತಿದ್ದಾರೆ. ಹೇಗಾದರೂ ಮಾಡಿ ನಿಖಿಲ್ ಅವರನ್ನ ಸೋಲಿಸಲೇ ಬೇಕು ಎಂದು ಚಕ್ರವ್ಯೂಹ ನಿರ್ಮಿಸಲು ಪ್ಲಾನ್ ಮಾಡಲಾಗುತ್ತಿದೆ. ಲೋಕಸಭೆಯಲ್ಲಿ ಹಿನ್ನಡೆ ಅನುಭವಿಸಿದ್ದ ನಿಖಿಲ್ ಬೈ ಎಲೆಕ್ಷನ್ ನಲ್ಲಿ ಅವಕಾಶ ಸಿಕ್ಕರೇ ಹೇಗೆ ಉಪಯೋಗಿಸಿಕೊಳ್ಳುತ್ತಾರೆ ಎಂಬುದು ಕಾದುನೋಡಬೇಕಿದೆ.

    English summary
    If the by-election is held in the KR Pet Assembly constituency, Nikhil Kumar may contest from the JDS
    Saturday, August 3, 2019, 16:39
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X