For Quick Alerts
  ALLOW NOTIFICATIONS  
  For Daily Alerts

  ಫೋಟೋಗಳು: ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಿಖಿಲ್-ರೇವತಿ

  |

  ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಪುತ್ರ ನಟ ಮತ್ತು ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೊರೊನಾ ಲಾಕ್ ಡೌನ್ ನಡುವೆಯೂ ನಿಗದಿಯಾದ ಮುಹೂರ್ತದಲ್ಲಿಯೆ ನಿಖಿಲ್-ರೇವತಿ ಪತಿ-ಪತ್ನಿಯರಾಗಿದ್ದಾರೆ. ಕುಮಾರಸ್ವಾಮಿ ಆಸೆಯಂತೆ ತಮ್ಮ ನೆಚ್ಚಿನ ಕ್ಷೇತ್ರ, ರಾಮನಗರದ ಸಮೀಪ ಕೇತಗಾನಹಳ್ಳಿ ಫಾರ್ಮ್ ಹೌಸ್ ನಲ್ಲಿ ಅಚ್ಚುಕಟ್ಟಾಗಿ, ಸರಳವಾಗಿ ಮದುವೆ ನೆರವೇರಿತು.

  Nikhil Kumaraswamy marriage footage midst Corona Lockdown | Nikhil Kumarswamy Weds Revathi

  ದೊಡ್ಡ ಗೌಡರ ಮನೆಯ ಮದುವೆ ಸಮಾರಂಭದಲ್ಲಿ ಕುಟುಂಬಸ್ಥರು ಮಾತ್ರ ಭಾಗಿಯಾಗಿ ನವ ಜೋಡಿಗೆ ಆಶೀರ್ವದಿಸಿದ್ದಾರೆ. ನಿಖಿಲ್ ಸರಳವಾಗಿ ಹಸೆಮಣೆ ಏರಿದ್ರು, ಮದುವೆ ಶಾಸ್ತ್ರಗಳು ಭರ್ಜರಿಯಾಗಿ ನಡೆಯುತ್ತಿದೆ. ನಿಖಿಲ್ ಮದುವೆಯ ಫೋಟೋಗಳು ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಮುಂದೆ ಓದಿ..

  ಬೆಳಗ್ಗೆ 9.15 ರಿಂದ 9.45ರ ಮುಹೂರ್ತ

  ಬೆಳಗ್ಗೆ 9.15 ರಿಂದ 9.45ರ ಮುಹೂರ್ತ

  ಬಳಗ್ಗೆ 9.15 ರಿಂದ 9.45ರ ಶುಭ ಲಗ್ನದಲ್ಲಿ ನಿಖಿಲ್, ರೇವತಿಗೆ ಮಾಂಗಲ್ಯ ಧಾರಣೆ ಮಾಡಿದ್ದಾರೆ. ಸಂಪ್ರದಾಯಬದ್ದವಾಗಿ ನಡೆದ ಮದುವೆ ಸಮಾರಂಭದಲ್ಲಿ ಕುಟುಂಬಂಸ್ಥರು ಮಾತ್ರ ಹಾಜರಿದ್ದು ವಧುವರರಿಗೆ ಆಶೀರ್ವದಿಸಿದರು. ನಿಖಿಲ್ ಬಿಳಿ ಬಣ್ಣದ ಪಂಚೆ ಶೈಲ್ಯ ಧರಿಸಿ ದೇಸಿ ಸ್ಟೈಲ್ ನಲ್ಲಿ ಮಿಂಚಿದ್ರೆ, ರೇವತಿ ಗೋಲ್ಡನ್ ಬಣ್ಣದ ಸೀರೆಗೆ ಕೆಂಪು ಬಣ್ಣದ ಬಾರ್ಡರ್ ನ ರೇಶ್ಮೆ ಸೀರಿಯಲ್ಲಿ ಕಂಗೊಳಿಸುತ್ತಿದ್ದಾರೆ.

  ದೊಡ್ಡ ಗೌಡರ ಕುಟುಂಬ ಮಾತ್ರ ಭಾಗಿ

  ದೊಡ್ಡ ಗೌಡರ ಕುಟುಂಬ ಮಾತ್ರ ಭಾಗಿ

  ದೊಡ್ಡ ಗೌಡರ ಮನೆಯ ಮದುವೆ ಸಮಾರಂಭದಲ್ಲಿ ಕೇವಲ ದೇವೆಗೌಡರ ಕುಟುಂಬದವರು ಮಾತ್ರ ಭಾಗಿಯಾಗಿದ್ದಾರೆ. ಮಾಜಿ ಪ್ರಧಾನಿ ದೇವೆಗೌಡ ದಂಪತಿ ಸೇರಿದಂತೆ ಕುಟುಂಬದ ಕೆಲವು ಸದಸ್ಯರು ಮಾತ್ರ ಫೋಟೋದಲ್ಲಿ ಕಾಣಿಸುದ್ದಿದ್ದಾರೆ. ಪಾಸ್ ಪಡೆದ ವಿವಿಐಪಿಗಳಿಗೆ ಮಾತ್ರ ಮದುವೆ ಅವಕಾಶ ಕಲ್ಪಿಸಲಾಗಿದೆ. ಆದರೆ ರಾಜಕೀಯ ಗಣ್ಯರಾಗಲಿ, ಚಿತ್ರರಂಗದ ಗಣ್ಯರ್ಯಾರು ಮದುವೆ ಸಮಾರಂಭದಲ್ಲಿ ಭಾಗಿಯಾಗಿಲ್ಲ.

  ಸರಳವಾಗಿ ಮದುವೆಯಾದರೂ ಅದ್ದೂರಿಯಾಗಿತ್ತು ಮಂಟಪ

  ಸರಳವಾಗಿ ಮದುವೆಯಾದರೂ ಅದ್ದೂರಿಯಾಗಿತ್ತು ಮಂಟಪ

  ನಿಖಿಲ್ ಮತ್ತು ರೇವತಿ ಮದುವೆ ಸರಳವಾಗಿ ನಡೆದರು ಮದುವೆ ಮಂಟಪದ ಡೆಕೊರೇಷನ್ ಅದ್ದೂರಿಯಾಗಿಯೆ ಇದೆ. ನಿಖಿಲ್ ಮತ್ತು ರೇವತಿ ಮಾಂಗಲ್ಯ ಧಾರಣೆಗೆ ಗೋಲ್ಡನ್ ಬಣ್ಣದ ಮಂಟಪ ತಯಾರಾಗಿದೆ. ಮಂಟಪದ ಸುತ್ತ ಹೂವುಗಳಿಂದ ಅಲಂಕಾರ ಮಾಡಲಾಗಿದ್ದು, ಮಂಟಪ ಸುಂದರವಾಗಿ ಕಂಗೊಳಿಸುತ್ತಿದೆ.

  ಮದುವೆಯಲ್ಲಿ ಸಾಮಾಜಿಕ ಅಂತರ

  ಮದುವೆಯಲ್ಲಿ ಸಾಮಾಜಿಕ ಅಂತರ

  ಕೊರೊನಾ ಹಾವಳಿ ಪರಿಣಾಮ ಸಾಮಾಜಿಕ ಅಂತರ ಬಹುಮುಖ್ಯ. ನಿಖಿಲ್ ಮತ್ತು ರೇವತಿ ಮದುವೆಯಲ್ಲಿಯೂ ಸಾಮಾಜಿಕ ಅಂತರ ಕಾಯ್ದುಕೊಂಡಿದ್ದಾರೆ. ಮದುವೆಯಲ್ಲಿ ಅತಿಥಿಗಳಿಗೆ ಸಿದ್ಧಪಡಿಸಿದ ಆಸನಗಳನ್ನು ದೂರ ದೂರ ಇಡುವ ಮೂಲಕ ಸಾಮಾಜಿಕ ಅಂತರದ ಮಹತ್ವ ಸಾರಿದ್ದಾರೆ.

  ಫಾರ್ಮ್ ಹೌಸ್ ನಲ್ಲಿ ಅತಿಥಿಗಳಿಗೆ ಊಟದ ವ್ಯವಸ್ಥೆ

  ಫಾರ್ಮ್ ಹೌಸ್ ನಲ್ಲಿ ಅತಿಥಿಗಳಿಗೆ ಊಟದ ವ್ಯವಸ್ಥೆ

  ರಾಮನಗರದ ಎಚ್ ಡಿ ಕೆ ಫಾರ್ಮ್ ಹೌಸ್ ನಲ್ಲಿ ನಿಖಲ್ ಮದುವೆ ಸರಳವಾಗಿ ನಡೆದಿದ್ದು, ತೀರಾ ಆತ್ಮೀಯರು ಮಾತ್ರ ಸಮಾರಂಭಕ್ಕೆ ಹಾಜರಾಗಿದ್ದಾರೆ. ಇನ್ನೂ ಮದುವೆಗೆ ಆಗಮಿಸಿದ ಅತಿಥಿಗಳಿಗೆ ಫಾರ್ಮ್ ಹೌಸ್ ನಲ್ಲಿ ಊಟದ ವ್ಯವಸ್ಥೆ ಕೂಡ ಮಾಡಲಾಗಿದೆ. ನಂತರ ವರನ ನಿವಾಸಕ್ಕೆ ವಾಪಸ್ ಆಗಲಿದ್ದು, ಸೊಸೆಯನ್ನು ಮನೆ ತುಂಬಿಸಿಕೊಳ್ಳುವ ಶಾಸ್ತ್ರ ನಡೆಯಲಿದೆ.

  English summary
  Kannada Actor Come politician Nikhil Kumar tie the knot Revathi on April 17th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X