twitter
    For Quick Alerts
    ALLOW NOTIFICATIONS  
    For Daily Alerts

    ಸಂಕಷ್ಟದಲ್ಲಿರುವ ಸಿನಿಮಾ ಕಾರ್ಮಿಕರ ನೆರವಿಗೆ ಧಾವಿಸಿದ ನಿಖಿಲ್ ಕುಮಾರಸ್ವಾಮಿ

    |

    ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ತೆಗೆದುಕೊಂಡಿರುವ ಲಾಕ್ ಡೌನ್ ಕ್ರಮದಿಂದಾಗಿ ಚಿತ್ರರಂಗವನ್ನು ನಂಬಿ ಬದುಕು ಸಾಗಿಸುತ್ತಿರುವ ಸಾಮಾನ್ಯ ಕಾರ್ಮಿಕ ಬದುಕು ಬೀದಿಗೆ ಬಂದಿದೆ.

    Recommended Video

    ಶಿವಣ್ಣ ದಯವಿಟ್ಟು ಹೀಗೆ ಮಾಡ್ಬೇಡಿ ಅಂದಿದ್ದೇಕೆ | Shivanna | Stay Home stay Safe | Filmibeat kannada

    ಮಹಾಮಾರಿ ಕೊರೊನಾ ದಾಳಿಯಿಂದ ಇಡೀ ದೇಶವೇ ಲಾಕ್ ಡೌನ್ ಸ್ಥಿತಿಗೆ ತಲುಪಿರುವುದರಿಂದ, ಎಲ್ಲಾ ಉದ್ಯಮಗಳು ಸ್ಥಗಿತವಾಗಿ, ಜನರು ಕೆಲಸ ಇಲ್ಲದೇ ದುಡಿಮೆಯಿಲ್ಲದೇ ಮನೆಯಲ್ಲೇ ಕೂರಬೇಕಾಗಿದೆ. ಅದೇ ರೀತಿ ಸಿನಿಮಾ ಉದ್ಯಮ ಕೂಡ ಸಂಪೂರ್ಣ ಬಂದ್ ಆಗಿರುವ ಕಾರಣ ದಿನಗೂಲಿ ನಂಬಿ ಬದುಕುತ್ತಿದ್ದ ಸಿನಿಮಾ ಕಾರ್ಮಿಕ ವರ್ಗ ಕಂಗಾಲಾಗಿದೆ.

    ಸಂಕಷ್ಟದಲ್ಲಿರುವವರಿಗೆ ಪಕ್ಕದ ಚಿತ್ರರಂಗದಲ್ಲಿ ಕೋಟಿ ಕೋಟಿ ನೆರವು: ನಮ್ಮ 'ಸ್ಟಾರ್'ಗಳೆಲ್ಲಿ?ಸಂಕಷ್ಟದಲ್ಲಿರುವವರಿಗೆ ಪಕ್ಕದ ಚಿತ್ರರಂಗದಲ್ಲಿ ಕೋಟಿ ಕೋಟಿ ನೆರವು: ನಮ್ಮ 'ಸ್ಟಾರ್'ಗಳೆಲ್ಲಿ?

    ದಿನ ನಿತ್ಯವೂ ಚಿತ್ರೀಕರಣ ಸೇರಿದಂತೆ ಚಿತ್ರೋದ್ಯಮದ ಇತರೆ ಚಟುವಟಿಕೆಗಳಲ್ಲಿ ಭಾಗವಹಿಸಿದರೆ ಮಾತ್ರ ಅವರಿಗೆ ಆ ದಿನದ ಸಂಬಳ, ಊಟ ಸಿಗುವುದು ಎನ್ನುವ ಪರಿಸ್ಥಿತಿಯಲ್ಲಿರುವ ಕಾರ್ಮಿಕರು ಕೂಡ ಚಿತ್ರರಂಗದಲ್ಲಿದ್ದಾರೆ. ಅವರೆಲ್ಲ ಈಗ ದುಡಿಮೆ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.

    ಮೂರು ಸಾವಿರ ಸಿನಿಮಾ ಕಾರ್ಮಿಕರಿಗೆ ನೆರವು

    ಮೂರು ಸಾವಿರ ಸಿನಿಮಾ ಕಾರ್ಮಿಕರಿಗೆ ನೆರವು

    ಹೀಗೆ ಕಷ್ಟದಲ್ಲಿರುವ ಕಾರ್ಮಿಕರಿಗೆ ನೆರವು ನೀಡಲು ನಟ ನಿಖಿಲ್ ಕುಮಾರಸ್ವಾಮಿ ಮುಂದಾಗಿದ್ದಾರೆ. ಸಿನಿಮಾ ಕಾರ್ಮಿಕರಾದ ಲೈಟ್ಸ್ ಬಾಯ್ಸ್ ಅಸೋಸಿಯೇಷನ್, ಯುನಿಟ್ ಬಾಯ್ಸ್ ಅಸೋಸಿಯೇಷನ್, ಪ್ರೊಡಕ್ಷನ್ ಅಸೋಸಿಯೇಷನ್, ಫೈಟರ್ಸ್ ಅಸೋಸಿಯೇಷನ್, ಮೇಕಪ್ ಮೆನ್ ಹಾಗೂ ಇತ್ಯಾದಿ ಸುಮಾರು 3 ಸಾವಿರ ಸಿನಿಮಾ ಕಾರ್ಮಿಕರ ಖಾತೆಗಳಿಗೆ ನೇರವಾಗಿ ಧನ ಸಹಾಯ ಮಾಡಲು ತೀರ್ಮಾನಿಸಿದ್ದಾರೆ.

    ಇನ್ನೂ ಒಂದು ತಿಂಗಳು ಕಷ್ಟ

    ಇನ್ನೂ ಒಂದು ತಿಂಗಳು ಕಷ್ಟ

    ಏಪ್ರಿಲ್ 14ರವರೆಗೂ ಸಂಪೂರ್ಣ ದೇಶ ಲಾಕ್‌ಡೌನ್ ಆಗಿರಲಿದೆ. ಹೀಗಾಗಿ ಅಲ್ಲಿವರೆಗೂ ಸಿನಿಮಾ ರಂಗದ ಚಟುವಟಿಕೆಗಳು ನಡೆಯುವುದಿಲ್ಲ. ಅದರ ನಂತರವೂ ಸ್ಥಿತಿ ಸಹಜಗೊಳ್ಳುವವರೆಗೂ ಚಿತ್ರರಂಗ ಸ್ತಬ್ಧವಾಗಿಯೇ ಇರಲಿದೆ. ಹೀಗಾಗಿ ಇನ್ನೂ ಕನಿಷ್ಠ ಒಂದು ತಿಂಗಳವರೆಗೆ ಅವರ ಜೀವನ ತೀವ್ರ ಕಷ್ಟದಲ್ಲಿರಲಿದೆ.

    ಕೊರೊನಾ ವಿರುದ್ಧ ಹೋರಾಟಕ್ಕೆ ತೆಲುಗು ನಟರ ಧನ ಸಹಾಯ: ರಾಮ್, ಪವನ್, ಚಿರು ನಂತರ ಪ್ರಭಾಸ್ ದೇಣಿಗೆಕೊರೊನಾ ವಿರುದ್ಧ ಹೋರಾಟಕ್ಕೆ ತೆಲುಗು ನಟರ ಧನ ಸಹಾಯ: ರಾಮ್, ಪವನ್, ಚಿರು ನಂತರ ಪ್ರಭಾಸ್ ದೇಣಿಗೆ

    ಶನಿವಾರದ ಕಾರ್ಯಕ್ರಮ ಮುಂದೂಡಿಕೆ

    ಶನಿವಾರದ ಕಾರ್ಯಕ್ರಮ ಮುಂದೂಡಿಕೆ

    ಕಾರ್ಮಿಕರಿಗೆ ಅಗತ್ಯ ಪಡಿತರಗಳನ್ನು ಒದಗಿಸಲು ನಿಖಿಲ್ ಕುಮಾರಸ್ವಾಮಿ ಬಯಸಿದ್ದರು. ಗಾಂಧಿನಗರದ ಕರ್ನಾಟಕ ಚಲನಚಿತ್ರ ಕಾರ್ಮಿಕರ ಒಕ್ಕೂಟದ ಆವರಣದಲ್ಲಿ ಶನಿವಾರ ಬೆಳಿಗ್ಗೆ ಚಲನಚಿತ್ರ ಕಾರ್ಮಿಕರಿಗೆ ಪಡಿತರಗಳನ್ನು ವಿತರಿಸಲು ತೀರ್ಮಾನಿಸಲಾಗಿತ್ತು. ಆದರೆ ಲಾಕ್‌ಡೌನ್ ಕಾರಣದಿಂದ ಈ ಕಾರ್ಯಕ್ರಮವನ್ನು ಮುಂದೂಡಲಾಗಿದೆ.

    ನಿಖಿಲ್‌ಗೆ ಕೃತಜ್ಞತೆ

    ನಿಖಿಲ್‌ಗೆ ಕೃತಜ್ಞತೆ

    ಲಾಕ್‌ಡೌನ್ ನಿಯಮ ಪಾಲಿಸಬೇಕಾಗಿರುವುದು ನಮ್ಮ ಕರ್ತವ್ಯ. ಅದರೆ ಈ ಸಂದರ್ಭದಲ್ಲಿ ಕಾರ್ಮಿಕ ವರ್ಗ ಕೆಲಸವಿಲ್ಲದೆ ತುಂಬಾ ಕಷ್ಟ ಪಡುತ್ತಿದೆ. ಚಲನಚಿತ್ರ ಕಾರ್ಮಿಕರು ಈ ಸಮಸ್ಯೆಗೆ ಹೊರತಲ್ಲ. ಅವರಿಗೆ ನೆರವು ನೀಡಲು ಮುಂದಾಗಿರುವ ನಿಖಿಲ್ ಕುಮಾರಸ್ವಾಮಿ ಅವರಿಗೆ ಕಾರ್ಮಿಕರು ಧನ್ಯವಾದ ಸಲ್ಲಿಸಿದ್ದಾರೆ.

    English summary
    Actor Nikhil Kumar ready to help daily wagers and other labourers of film industry in this coronavirus pandemic situation.
    Friday, March 27, 2020, 19:19
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X