»   » ನಿಖಿಲ್ ಕುಮಾರ್ ಚೊಚ್ಚಲ ಚಿತ್ರ 'ಜಾಗ್ವಾರ್'ಗೆ ಒಲಿದು ಬಂತು ಪ್ರಶಸ್ತಿ

ನಿಖಿಲ್ ಕುಮಾರ್ ಚೊಚ್ಚಲ ಚಿತ್ರ 'ಜಾಗ್ವಾರ್'ಗೆ ಒಲಿದು ಬಂತು ಪ್ರಶಸ್ತಿ

Posted By:
Subscribe to Filmibeat Kannada

ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರ್ ಅಭಿನಯದ ಚೊಚ್ಚಲ ತೆಲುಗು ಚಿತ್ರಕ್ಕೆ ಟಿ.ಎಸ್.ಆರ್ ಪ್ರಶಸ್ತಿ ಲಭಿಸಿದೆ.[ಹಾಲಿವುಡ್ ಅಂಗಳಕ್ಕೆ ಹಾರಿದ ಕನ್ನಡದ ನಿಖಿಲ್ ಕುಮಾರ್]

'ಜಾಗ್ವಾರ್' ಚಿತ್ರದ ಮೂಲಕ ಕನ್ನಡ ಬೆಳ್ಳಿತೆರೆಗೆ ಕಾಲಿಟ್ಟಿದ್ದ ನಿಖಿಲ್ ಕುಮಾರ್, ಅದೇ ಚಿತ್ರದ ಮೂಲಕ ಟಾಲಿವುಡ್ ಗೂ ಎಂಟ್ರಿ ಕೊಟ್ಟಿದ್ದರು. ತನ್ನ ಅಭಿನಯದಿಂದ ಎರಡು ರಾಜ್ಯಗಳ ಸಿನಿ ಅಭಿಮಾನಿಗಳನ್ನ ಮೆಚ್ಚಿಸಿದ್ದರು. ಅದರ ಪ್ರತಿಫಲವಾಗಿ ನಿಖಿಲ್ ಗೆ ಮೊದಲ ಪ್ರಶಸ್ತಿ ಸಿಕ್ಕಿದೆ. ಮುಂದೆ ಓದಿ.......

ಅತ್ಯುತ್ತುಮ ನವನಟ ನಿಖಿಲ್

ತೆಲುಗು ಚಿತ್ರರಂಗದಲ್ಲಿ ಟಿ ಸುಬ್ಬರಾಮಿ ರೆಡ್ಡಿ ಅವರ ಹೆಸರಿನಲ್ಲಿ ನೀಡಲಾಗುವ ವಾರ್ಷಿಕ ಪ್ರಶಸ್ತಿಯಲ್ಲಿ, 'ಜಾಗ್ವಾರ್' ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ನವ ನಟ ವಿಭಾಗದಲ್ಲಿ ನಿಖಿಲ್ ಕುಮಾರ್ ಗೆ ಈ ಅವಾರ್ಡ್ ಸಿಕ್ಕಿದೆ.[ಟ್ವಿಟ್ಟರ್ ವಿಮರ್ಶೆ: 'ಜಾಗ್ವಾರ್' ಝಗಮಗ ಬಲು ಜೋರು ಗುರು.!]

ಪ್ರಶಸ್ತಿ ನೀಡಿದ ಮೆಗಾಸ್ಟಾರ್

ತೆಲುಗು ಚಿತ್ರಲೋಕದಲ್ಲಿ ಪಡೆದ ಮೊದಲ ಪ್ರಶಸ್ತಿಯನ್ನ ನಿಖಿಲ್ ಕುಮಾರ್ ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಅವರ ಕೈಯಿಂದ ಪಡೆದರು.[ನಂಬಿದ್ರೆ ನಂಬಿ, ತೆಲುಗಿನಲ್ಲಿ ನಿಖಿಲ್ ಕುಮಾರ್ ಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು.! ]

ತೆಲುಗು ನಟ ಬಾಲಕೃಷ್ಣ ಭಾಗಿ

ನಿಖಿಲ್ ಕುಮಾರ್ ಪ್ರಶಸ್ತಿ ಪಡೆಯುವ ಸಂದರ್ಭದಲ್ಲಿ ಟಾಲಿವುಡ್ ಲೆಜೆಂಡ್ ನಟ ಬಾಲಕೃಷ್ಣ ಮತ್ತು ಟಿ ಸುಬ್ಬರಾಮಿ ರೆಡ್ಡಿ ಅವರು ವೇದಿಕೆಯಲ್ಲಿ ಭಾಗಿಯಾಗಿದ್ದರು.[ನಿಖಿಲ್ 'ಜಾಗ್ವಾರ್' ಬಗ್ಗೆ ಜನ ಹೀಗೂ ಯೋಚನೆ ಮಾಡ್ತಿದ್ದಾರೆ ಸ್ವಾಮಿ!]

ಕಳೆದ ವರ್ಷ ತೆರೆಕಂಡಿದ್ದ 'ಜಾಗ್ವಾರ್'

ಅಂದ್ಹಾಗೆ, 'ಜಾಗ್ವಾರ್' ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಏಕಕಾಲದಲ್ಲಿ ತಯಾರಾಗಿತ್ತು. ಮಹದೇವ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ವಿಜಯೇಂದ್ರ ಪ್ರಸಾದ್ ಕಥೆ ಬರೆದಿದ್ದರು. ಹೆಚ್.ಡಿ ಕುಮಾರಸ್ವಾಮಿ ಈ ಚಿತ್ರವನ್ನ ನಿರ್ಮಾಣ ಮಾಡಿದ್ದರು. ಕಳೆದ ವರ್ಷ ಅಕ್ಟೋಬರ್ ನಲ್ಲಿ 'ಜಾಗ್ವಾರ್' ಬಿಡುಗಡೆಯಾಗಿತ್ತು.

English summary
Nikhil Kumar Wins Best Debutatnt Award for his Telugu Debut Film Jaguar in Andra Pradesh.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada