For Quick Alerts
  ALLOW NOTIFICATIONS  
  For Daily Alerts

  ನಿಖಿಲ್ ಕುಮಾರಸ್ವಾಮಿ ಹೊಸ ಸಿನಿಮಾದ ಹೆಸರು ಘೋಷಣೆ

  |

  ರಾಜಕೀಯ-ಸಿನಿಮಾ ಎರಡೂ ದೋಣಿಯ ಮೇಲೆ ಕಾಲಿಟ್ಟಿರುವ ನಿಖಿಲ್ ಕುಮಾರಸ್ವಾಮಿ. ಬಹುದಿನದ ರಾಜಕೀಯ ಸಾಂಗತ್ಯದ ಬಳಿಕ ಈಗ ಸಿನಿಮಾ ಕಡೆಗೆ ಮತ್ತೆ ಮುಖ ಮಾಡಿದ್ದಾರೆ.

  ಲೋಕಸಭೆ ಚುನಾವಣೆ ಸ್ಪರ್ಧೆ, ಪ್ರಚಾರ, ಸೋಲು ಅದರ ಬಳಿಕ ಮದುವೆ, ಕೊರೊನಾ ಲಾಕ್‌ಡೌನ್ ಎಲ್ಲವೂ ಮುಗಿಸಿ ಈಗ ಮತ್ತೆ ಸಿನಿಮಾ ಸಿನಿವೃತ್ತಿಯ ಬಗ್ಗೆ ಗಮನವಹಿಸಿದ್ದಾರೆ ನಿಖಿಲ್ ಕುಮಾರಸ್ವಾಮಿ.

  ತೆಲುಗು ಖ್ಯಾತ ನಿರ್ದೇಶಕನಿಂದ ನಿಖಿಲ್ ಕುಮಾರಸ್ವಾಮಿಯ ನಾಲ್ಕನೇ ಸಿನಿಮಾ

  ನಿಖಿಲ್ ಕುಮಾರಸ್ವಾಮಿ ನಟಿಸುತ್ತಿರುವ ಹೊಸ ಸಿನಿಮಾದ ಪೋಸ್ಟರ್ ಹಾಗೂ ಹೆಸರನ್ನು ಇಂದು ಬಿಡುಗಡೆ ಮಾಡಲಾಗಿದ್ದು, ಮೋಷನ್ ಪೋಸ್ಟರ್ ನಲ್ಲಿ ಸಖತ್ ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ ನಿಖಿಲ್.

  ಸಿನಿಮಾಕ್ಕೆ ರೈಡರ್ ಎಂದು ಹೆಸರಿಡಲಾಗಿದೆ

  ಸಿನಿಮಾಕ್ಕೆ ರೈಡರ್ ಎಂದು ಹೆಸರಿಡಲಾಗಿದೆ

  ನಿಖಿಲ್ ಹೊಸ ಸಿನಿಮಾವನ್ನು ತೆಲುಗಿನ ಖ್ಯಾತ ನಿರ್ದೇಶಕ ವಿಜಯ್ ಕುಮಾರ್ ಕೊಂಡ ನಿರ್ದೇಶಿಸಲಿದ್ದಾರೆ. ಈ ಸಿನಿಮಾಕ್ಕೆ 'ರೈಡರ್' ಎಂದು ಹೆಸರಿಡಲಾಗಿದೆ. ಪೋಸ್ಟರ್‌ ಮೂಲಕವೇ ಗೊತ್ತಾಗುತ್ತಿದೆ ಇದೊಂದು ಪಕ್ಕಾ ಆಕ್ಷನ್ ಸಿನಿಮಾ ಎಂದು.

  ನಿಖಿಲ್ ನಟನೆಯ ನಾಲ್ಕನೇ ಸಿನಿಮಾ

  ನಿಖಿಲ್ ನಟನೆಯ ನಾಲ್ಕನೇ ಸಿನಿಮಾ

  ಲಾಕ್‌ಡೌನ್ ಅವಧಿಯಲ್ಲಿ ಕತೆ ಕೇಳಿದ್ದ ನಿಖಿಲ್ ಸಿನಿಮಾಕ್ಕೆ ಓಕೆ ಎಂದಿದ್ದರು. ನಿಖಿಲ್ ನಟಿಸುತ್ತಿರುವ ನಾಲ್ಕನೇ ಸಿನಿಮಾ ಇದಾಗಿದ್ದು, ಸಿನಿಮಾಕ್ಕೆ ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದಾರೆ. ಸಿನಿಮಾದ ನಾಯಕಿ ಯಾರೆಂಬುದು ನಿಶ್ಚಯವಾಗಿಲ್ಲ.

  ಅಂಬಾರಿ ಹೊರುವ 'ಅರ್ಜುನ'ನನ್ನು ಭೇಟಿ ಮಾಡಿದ ನಿಖಿಲ್ ಕುಮಾರ್ ದಂಪತಿ

  ನಿರ್ದೇಶಕರಿಗೆ ಇದು ಮೊದಲ ಕನ್ನಡ ಸಿನಿಮಾ

  ನಿರ್ದೇಶಕರಿಗೆ ಇದು ಮೊದಲ ಕನ್ನಡ ಸಿನಿಮಾ

  ರೈಡರ್ ನಿರ್ದೇಶಕ ವಿಜಯ್ ಕುಮಾರ್ ಕೊಂಡ ಗೆ ಇದು ಮೊದಲ ಕನ್ನಡ ಸಿನಿಮಾ ಆಗಿದೆ. ತೆಲುಗಿನಲ್ಲಿ 'ಗುಂಡೆ ಜಾರಿ ಗಲ್ಲಂಥೈಯಿಂದೇ', 'ಒಕ ಲೈಲಾ ಕೋಸಂ', ಓಯ್ ಬುಜ್ಜಿಗಾ, ಹಾರ್ಟ್ ಅಟ್ಯಾಕ್ 2, ಮ್ಯಾಜಿಕ್ ಲವ್ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ.

  Sanjjana ಗೊಳಾಟಕ್ಕೆ full stop | Filmibeat Kannada
  ರೈತ ಆಗುತ್ತಿದ್ದಾರೆ ನಿಖಿಲ್ ಕುಮಾರಸ್ವಾಮಿ

  ರೈತ ಆಗುತ್ತಿದ್ದಾರೆ ನಿಖಿಲ್ ಕುಮಾರಸ್ವಾಮಿ

  ಕ್ರೀಡೆ ಕುರಿತಾದ ಸಿನಿಮಾ ಒಂದರಲ್ಲಿ ಸಹ ನಿಖಿಲ್ ಕುಮಾರಸ್ವಾಮಿ ಸಹಿ ಹಾಕಿದ್ದು, ಆ ಸಿನಿಮಾ ಸಹ ಶೀಘ್ರದಲ್ಲಿ ಪ್ರಾರಂಭವಾಗಲಿದೆ. ಇದರ ಜೊತೆಗೆ ಹೊಸ ಮನೆ ಕಟ್ಟುತ್ತಿರುವ ನಿಖಿಲ್ ಕುಮಾರಸ್ವಾಮಿ, ತೋಟಗಾರಿಕೆ ಸಹ ಪ್ರಾರಂಭ ಮಾಡಿದ್ದಾರೆ.

  ಕನ್ನಡಿಗರ ಸ್ವಾಭಿಮಾನ, ಸಹನೆ ಕೆಣಕಬೇಡಿ: ನಿಖಿಲ್ ಕುಮಾರಸ್ವಾಮಿ

  English summary
  Actor, Politician Nikhil Kumaraswamy's new movie poster released today. New movie name is 'Raider'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X