»   » ಕೇಳ್ರಪ್ಪೋ ಕೇಳಿ...ನಟಿ ನಿಖಿತಾ ಜೊತೆ ದರ್ಶನ್ ದರ್ಶನ.!

ಕೇಳ್ರಪ್ಪೋ ಕೇಳಿ...ನಟಿ ನಿಖಿತಾ ಜೊತೆ ದರ್ಶನ್ ದರ್ಶನ.!

Posted By:
Subscribe to Filmibeat Kannada

ನಟಿ ನಿಖಿತಾ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಡುವೆ ಏನಿತ್ತೋ, ಏನಿಲ್ವೋ ಯಾರಿಗೂ ಗೊತ್ತಿಲ್ಲ. ಆದ್ರೆ, ಅವರಿಬ್ಬರ ಕುರಿತು ಗಾಂಧಿನಗರದಲ್ಲಿ ಏನೇನಾಯ್ತು ಅಂತ ಇಡೀ ಕರ್ನಾಟಕಕ್ಕೆ ಗೊತ್ತು.

ಹಿಂದೊಮ್ಮೆ 'ನಾನೇನು ಮಾಡ್ಲಿಲ್ಲ' ಅಂತ ನಟಿ ನಿಖಿತಾ ಮಾಧ್ಯಮಗಳ ಮುಂದೆ ಸಾರಿ ಸಾರಿ ಹೇಳಿ ಕಣ್ಣೀರಿಟ್ಟಿದ್ದರು. ಅದಾದ ಮೇಲೆ ನಿಖಿತಾ ದರ್ಶನ ಆಗ್ಲಿಲ್ಲ. [ನಟ ದರ್ಶನ್ ನನ್ನ ಬೆಸ್ಟ್ ಫ್ರೆಂಡ್: ನಿಖಿತಾ ತುಕ್ರಲ್]

ಆಗೊಮ್ಮೆ ಈಗೊಮ್ಮೆ ಸಿನಿಮಾಗಳಲ್ಲಿ ನಟಿಸಿದ್ದರೂ, ನಿಖಿತಾ ಮಾತನಾಡುತ್ತಿದ್ದದ್ದೇ ಕಡಿಮೆ. ಈಗ ಎಲ್ಲವನ್ನ ಮರೆತಂತೆ ಕಾಣುವ ನಿಖಿತಾ ಹಾಗೂ ದರ್ಶನ್ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ..!

ಅದು ಎಲ್ಲಿ.? ಯಾಕೆ.? ಹೇಗೆ.?ಎಂಬುದರ ಸಂಪೂರ್ಣ ವಿವರ ಇಲ್ಲಿದೆ. ಕೆಳಗಿರುವ ಫೋಟೋ ಸ್ಲೈಡ್ ಗಳಲ್ಲಿ ಓದಿರಿ.....

ನಿಮಗೆ ಅಚ್ಚರಿ ಆಗಬಹುದು.!

ಸಿನಿಮಾಗಳ ಜೊತೆ ಜೊತೆಗೆ ವಿವಾದಗಳಿಂದಲೂ ಭಾರಿ ಸದ್ದು ಸುದ್ದಿ ಮಾಡಿದ್ದ ನಟ ದರ್ಶನ್ ಹಾಗೂ ನಟಿ ನಿಖಿತಾ ಒಂದೇ ವೇದಿಕೆಯಲ್ಲಿ ಮಿಂಚಿದ್ದಾರೆ. [ನಿಖಿತಾ ತುಕ್ರಾಲ್ ತಲೆಮೇಲೆ ಮತ್ತೆ ವಿವಾದದ ಗೂಬೆ]

ಯಾವುದು ಆ ವೇದಿಕೆ.?

ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಡ್ಯಾನ್ಸ್ ಡ್ಯಾನ್ಸ್' ವೇದಿಕೆಯಲ್ಲಿ ದರ್ಶನ್ ಹಾಗೂ ನಿಖಿತಾ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. [ಮನೆಯಲ್ಲಿ ಒಬ್ಬಳೇ ಕೂತು ಕಣ್ಣೀರಿಟ್ಟರಂತೆ ನಿಖಿತಾ]

ವಿಶೇಷ ಅತಿಥಿಯಾಗಿ ಆಗಮಿಸಿದ ದರ್ಶನ್.!

'ಡ್ಯಾನ್ಸ್ ಡ್ಯಾನ್ಸ್' ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆ ಸಂಚಿಕೆಗೆ ವಿಶೇಷ ಅತಿಥಿಯಾಗಿ ದರ್ಶನ್ ಭಾಗವಹಿಸಿದ್ದಾರೆ. [ರಮ್ಯಾ ಮೇಡಂ ನಿನ್ನೆ ಎಲ್ಲಿದ್ದರು, ಏನ್ ಮಾಡಿದ್ರು? 'ದಾಖಲೆ' ಇಲ್ಲಿದೆ.!]

ನಿಖಿತಾಗೆ ಏನು ಕೆಲಸ.?

'ಡ್ಯಾನ್ಸ್ ಡ್ಯಾನ್ಸ್' ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿದ್ದ ನಟಿ ಶ್ರುತಿ ಹರಿಹರನ್ ಸಿನಿಮಾದಲ್ಲಿ ಬಿಜಿಯಾದ ಮೇಲೆ ಅವರ ಜಾಗಕ್ಕೆ ಆಗಮಿಸಿ, ಜೋಡಿಗಳಿಗೆ ಮಾರ್ಕ್ಸ್ ಕೊಡಲು ಶುರು ಮಾಡಿದ್ದು ನಟಿ ನಿಖಿತಾ.

ರಮ್ಯಾ ಕೂಡ ಬಂದವ್ರೆ.!

'ಡ್ಯಾನ್ಸ್ ಡ್ಯಾನ್ಸ್' ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆ ಎಪಿಸೋಡ್ ನಲ್ಲಿ ನಟ ದರ್ಶನ್ ಜೊತೆ ನಟಿ ರಮ್ಯಾ ಕೂಡ ಭಾಗವಹಿಸಿದ್ದಾರೆ.

ವೇದಿಕೆ ಮೇಲೆ ಕುಣಿದು ಕುಪ್ಪಳಿಸಿದ್ದಾರೆ.!

ನಟ ದರ್ಶನ್, ನಟಿ ರಮ್ಯಾ, ನಿಖಿತಾ, ಶರ್ಮಿಳಾ ಮಾಂಡ್ರೆ 'ಡ್ಯಾನ್ಸ್ ಡ್ಯಾನ್ಸ್' ವೇದಿಕೆ ಮೇಲೆ ಕುಣಿದು ಕುಪ್ಪಳಿಸಿದ್ದಾರೆ.

ಕಾರ್ಯಕ್ರಮ ಪ್ರಸಾರ ಯಾವಾಗ?

ನಾಳೆ (ಬುಧವಾರ) 20/07/2016 ರಿಂದ ಸುವರ್ಣ ವಾಹಿನಿಯಲ್ಲಿ 'ಡ್ಯಾನ್ಸ್ ಡ್ಯಾನ್ಸ್' ಗ್ರ್ಯಾಂಡ್ ಫಿನಾಲೆ ಕಾರ್ಯಕ್ರಮ ಪ್ರಸಾರವಾಗಲಿದೆ.

English summary
Kannada Actress Nikita Thukral, Ramya and Kannada Actor Darshan have come together to Judge Suvarna Channel's 'Dance Dance' Grand Finale episode.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada