»   » ರಾಜ ಸಿಂಹನಿಗೆ ಸಿಂಹಿಣಿಯಾಗಿ ನಿಖಿತಾ ತುಕ್ರಲ್

ರಾಜ ಸಿಂಹನಿಗೆ ಸಿಂಹಿಣಿಯಾಗಿ ನಿಖಿತಾ ತುಕ್ರಲ್

Posted By:
Subscribe to Filmibeat Kannada

ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ಅಳಿಯ ಅನಿರುದ್ಧ್ ನಟನೆಯ ರಾಜಸಿಂಹ ಚಿತ್ರಕ್ಕೆ ಸಿಂಹಿಣಿ ಸಿಕ್ಕಿದ್ದಾಳೆ. ಕನ್ನಡ ಚಿತ್ರರಂಗದಿಂದ ಕೆಲ ಕಾಲ ಮರೆಯಾಗಿದ್ದ ನಿಖಿತಾ ಮತ್ತೊಮ್ಮೆ ಬಣ್ಣ ಹಚ್ಚಿಕೊಂಡು ಹೊಸ 'ಸಿಂಹ' ದ ಜೊತೆ ಕುಣಿಯಲಿದ್ದಾಳೆ.

ಫೆಬ್ರವರಿ ತಿಂಗಳಿನಲ್ಲಿ ಸೆಟ್ಟೇರಲಿದ್ದು, ಇದು ಪಕ್ಕಾ ಕಮರ್ಷಿಯಲ್ ಚಿತ್ರ ಎಂದು ನಿರ್ದೇಶಕ ರಾಜ ಹೇಳಿದ್ದಾರೆ. ಇಜ್ಜೋಡು ಎಂಬ ಕಲಾತ್ಮಕ ಚಿತ್ರದಲ್ಲಿ ನಟಿಸಿದ್ದ ಅನಿರುದ್ಧ್ ನಂತರ ಕಲಬೆರೆಕೆ, ಶಬರಿಮಲೆ ಯಾತ್ರೆ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಈಗ ರಾಜಸಿಂಹ ನಾಗಿ ಘರ್ಜಿಸಲು ಬಂದಿದ್ದಾರೆ.

ನಿಖಿತಾ ತುಕ್ರಲ್ ಅವರನ್ನು ಚಿತ್ರತಂಡ ಆಯ್ಕೆ ಮಾಡಿದ್ದು, ಇದಕ್ಕೆ ನಿಖಿತಾ ಕೂಡಾ ಓಕೆ ಎಂದಿದ್ದಾರೆ. ಅನಿರುಧ್, ನಿಖಿತಾ ಅಲ್ಲದೆ, ಡಾ. ಭಾರತಿ ವಿಷ್ಣುವರ್ಧನ್, ಬುಲೆಟ್ ಪ್ರಕಾಶ್ ಮುಂತಾದವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜೆಸ್ಸಿ ಗಿಫ್ಟ್ ಸಂಗೀತ ನೀಡಲಿದ್ದು, ಡಾ. ವಿಷ್ಣುವರ್ಧನ್ ಅವರ ಪರಂಪರೆ ಉಳಿಸಿ ಬೆಳೆಸುವ ಚಿತ್ರ ಇದಾಗಲಿದೆಯಂತೆ.

Nikitha Thukral heroine for Raja Simha Aniruddh

ಪಕ್ಕಾ ಕಮರ್ಷಿಯಲ್ ಚಿತ್ರವಾದರು ಮನೆಮಂದಿಯೆಲ್ಲಾ ಕೂತು ನೋಡುವಂಥ ಚಿತ್ರ ಇದು, ಮೊದಲ ಬಾರಿಗೆ ಅನಿರುಧ್ ಕೂಡಾ ಸಾಹಸಭರಿತ ಚಿತ್ರದಲ್ಲಿ ಪೂರ್ಣ ಪ್ರಮಾಣವಾಗಿ ನಟಿಸುತ್ತಿದ್ದು ಥ್ರಿಲ್ ಆಗಿದ್ದಾರೆ. ಸಾಹಸಸಿಂಹನ ಅಳಿಯ ಎಂಬ ಹೆಸರು ಉಳಿಸುವ ಜವಾಬ್ದಾರಿ ತಮ್ಮ ಮೇಲಿದೆ ಎಂಬ ಅರಿವು ಅನಿರುದ್ಧ್ ಗಿದೆ. ನಾಟಕ ರಂಗದಿಂದ ಬೆಳೆದು ಬಂದ ಈ ಪ್ರತಿಭೆ ಹೊಸ ವೇಷದಲ್ಲಿ ಯಾವ ರೀತಿ ಕಾಣಿಸುತ್ತಾರೋ ಕಾದು ನೋಡಬೇಕಿದೆ.

ಇನ್ನು 'ಸಾಫ್ಟ್ ವೇಡ್ ಗಂಡ' ಜಗ್ಗೇಶ್ ಜೊತೆ ನಾಯಕಿಯಾಗಿ ನಟಿಸಿದ್ದ ನಿಖಿತಾ ಹೆಚ್ಚಿನ ಅವಕಾಶಗಳಿಗಾಗಿ ಕಾದಿದ್ದಾರೆ. ದೊಡ್ಡ ಬ್ಯಾನರ್ ಚಿತ್ರಗಳು ಸಿಗುತ್ತಿಲ್ಲ. ಟಾಪ್ ನಾಯಕರ ಚಿತ್ರಗಳಲ್ಲಿ ಕುಣಿದಾಡಿದ್ದ ನಿಖಿತಾಗೂ ಒಂದು ಒಳ್ಳೆ ಬ್ರೇಕ್ ಬೇಕಿದೆ.

English summary
Actress Nikitha Thukral will play heroine role for Aniruddh in a new film called 'Raja Simha' which is all set to go on floors in the month of February.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada