»   » 'ಅಯೋಗ್ಯ' ಗ್ರಾಮ ಪಂಚಾಯ್ತಿ ಸದಸ್ಯ ಈ ನೀನಾಸಂ ಸತೀಶ.!

'ಅಯೋಗ್ಯ' ಗ್ರಾಮ ಪಂಚಾಯ್ತಿ ಸದಸ್ಯ ಈ ನೀನಾಸಂ ಸತೀಶ.!

Posted By:
Subscribe to Filmibeat Kannada

''ಅಯೋಗ್ಯ' ಗ್ರಾಮ ಪಂಚಾಯ್ತಿ ಸದಸ್ಯ ಈ ನೀನಾಸಂ ಸತೀಶ'' ಎಂದು ಓದಿದ ಕೂಡಲೆ ಇದೇನಪ್ಪಾ... ನಟ ನೀನಾಸಂ ಸತೀಶ್ ರವರನ್ನ ಅಯೋಗ್ಯ ಅಂತಿದ್ದಾರಲ್ಲ.? ಅಷ್ಟಕ್ಕೂ, ನೀನಾಸಂ ಸತೀಶ್ ಯಾವಾಗ ಗ್ರಾಮ ಪಂಚಾಯ್ತಿ ಸದಸ್ಯ ಆದರು ಅಂತ ಕಣ್ಣು ಬಾಯಿ ಬಿಟ್ಟುಕೊಂಡು ತಲೆ ಕರ್ಕೊಳ್ತಿದ್ದೀರಾ.? ಸ್ವಲ್ಪ ತಾಳಿ...

ಹಾಗೆ, ನೀನಾಸಂ ಸತೀಶ್ ರವರಿಗೆ 'ಅಯೋಗ್ಯ' ಅಂತ ಕರೆದಿರುವುದು ನಾವಲ್ಲ. ಬದಲಾಗಿ ಗಾಂಧಿನಗರ.!

Ninasam Sathish new movie titled as 'Ayogya'

'ಬ್ಯೂಟಿಫುಲ್ ಮನಸ್ಸುಗಳು' ಸಿನಿಮಾದ ಬಳಿಕ 'ಚಂಬಲ್' ಹಾಗೂ 'ಟೈಗರ್ ಗಲ್ಲಿ' ಚಿತ್ರಗಳ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದ ನೀನಾಸಂ ಸತೀಶ್ ಇದೀಗ ಹೊಸ ಸಿನಿಮಾವೊಂದನ್ನ ಒಪ್ಪಿಕೊಂಡಿದ್ದಾರೆ. ಆ ಚಿತ್ರವೇ 'ಅಯೋಗ್ಯ'.

ಎಸ್.ಮಹೇಶ್ ಕುಮಾರ್ ನಿರ್ದೇಶನದ 'ಅಯೋಗ್ಯ' ಚಿತ್ರಕ್ಕೆ 'ಗ್ರಾಮ ಪಂಚಾಯ್ತಿ ಸದಸ್ಯ' ಎಂಬ ಅಡಿ ಬರಹ ನೀಡಲಾಗಿದೆ.

'ಅಯೋಗ್ಯ' ಚಿತ್ರದ ಫಸ್ಟ್ ಲುಕ್ ಪೋಸ್ಟರ್ ನ ಸ್ವತಃ ನೀನಾಸಂ ಸತೀಶ್ ಟ್ವೀಟ್ ಮಾಡಿಕೊಂಡಿದ್ದಾರೆ. 'ಅಯೋಗ್ಯ' ಚಿತ್ರದ ಚಿತ್ರೀಕರಣ ಶೀಘ್ರದಲ್ಲೇ ಆರಂಭವಾಗಲಿದೆ.

Director Pavan Kumar Talk About Loose Mada Yogesh in Lucia | Filmibeat Kannada

'ಅಯೋಗ್ಯ' ಚಿತ್ರಕ್ಕೆ ವಿ.ಹರಿಕೃಷ್ಣ ಸಂಗೀತ ಹಾಗೂ ಯೋಗರಾಜ್ ಭಟ್ ಸಾಹಿತ್ಯ ಇರಲಿದೆ.

English summary
Ninasam Sathish starrer new movie titled as 'Ayogya' directed by Mahesh Kumar.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada