For Quick Alerts
  ALLOW NOTIFICATIONS  
  For Daily Alerts

  ನಿನ್ನ ಸನಿಹಕೆ ಚಿತ್ರದ ಮೊದಲ ಟಿಕೆಟ್ ಮುಖ್ಯಮಂತ್ರಿ ಬೊಮ್ಮಾಯಿಗೆ

  |

  ಇದೇ ಶುಕ್ರವಾರ ರಾಜ್ಯದಾದ್ಯಂತ ತೆರೆ ಕಾಣ್ತಾ ಇರೋ ಸ್ಯಾಂಡಲ್ ವುಡ್‌ನ ಬಹುನಿರೀಕ್ಷಿತ "ನಿನ್ನ ಸನಿಹಕೆ" ಚಿತ್ರತಂಡ ಇಂದು ಸಿ.ಎಂ ಬಸವರಾಜ ಬೊಮ್ಮಾಯಿ ಅವ್ರನ್ನ ಭೇಟಿಮಾಡಿದೆ. ಇದೇ ಸಂದರ್ಭದಲ್ಲಿ ಸಿ.ಎಂ ಬೊಮ್ಮಾಯಿ ಅವ್ರಿಗೆ ಚಿತ್ರದ ಪ್ರೀಮಿಯರ್ ಶೋಗೆ ಟಿಕೆಟ್ ನೀಡಿ ಆಹ್ವಾನಿಸಿದ್ದಾರೆ. ಚಿತ್ರ ನಿರ್ದೇಶಕ ಹಾಗೂ ಚಿತ್ರನಟ ಸೂರಜ್ ಗೌಡ ಹಾಗೂ ನಾಯಕಿ ಧನ್ಯ ರಾಮ್‌ಕುಮಾರ್‌ ಈ ವೇಳೆ ಹಾಜರಿದ್ದರು. ಚಿತ್ರ ನಿರ್ಮಾಪಕರಾದ ಅಕ್ಷಯ್ ರಾಜಶೇಖರ್ ಮತ್ತು ರಂಗನಾಥ್ ಕೂಡ್ಲಗಿ ಕೂಡ ಈ ಸಂದರ್ಭದಲ್ಲಿ ಸಾಥ್ ನೀಡಿದ್ದರು.

  ಸಿನಿಮಾ ರಿಲೀಸ್ ಗು ಮುನ್ನವೇ ಈ ಚಿತ್ರದ ಹಾಡುಗಳು ಸಿನಿ ಪ್ರೇಕ್ಷಕರ ಮನ ಗೆದ್ದಿದೆ. ದಸರಾ ಸಂಭ್ರಮದ ಮೊದಲ ವಾರದಲ್ಲೆ ನಿನ್ನ ಸನಿಹಕೆ ಚಿತ್ರ ರಾಜ್ಯಾದ್ಯಂತ ಸುಮಾರು 200ಕ್ಕೂ ಹೆಚ್ಚು ಚಿತ್ರಮಂದಿರಕ್ಕೆ ಲಗ್ಗೆ ಇಡ್ತಿದೆ. ಇದೇ ಸಂಭ್ರಮದಲ್ಲಿರೋ ಚಿತ್ರತಂಡ ಸಿ.ಎಂ ಬಸವರಾಜ ಬೊಮ್ಮಾಯಿ ಅವ್ರನ್ನ ಭೇಟಿಯಾಗಿ ಪ್ರೀಮಿಯರ್ ಶೋನ ಮೋದಲ ಟಿಕೆಟ್ ಅನ್ನು ನೀಡಿ ಆಹ್ವಾನಿಸಿದೆ. ಚಿತ್ರದ ಪ್ರೀಮಿಯರ್ ಶೋ ಇದೇ ಗುರುವಾರ ಸಂಜೆ 7 ಗಂಟೆಗೆ ಡಾ ರಾಜ್‌ಕುಮಾರ್ ರಸ್ತೆಯಲ್ಲಿರುವ ಪಿವಿಆರ್ ಓರಾಯನ್ ಮಾಲ್ ನಲ್ಲಿ ಆಯೋಜಿಸಲಾಗಿದೆ.

  "ನಿನ್ನ ಸನಿಹಕೆ" ಚಿತ್ರ ಡಾ ರಾಜ್ ಮೊಮ್ಮಗಳು ಧನ್ಯ ರಾಮ್‌ಕುಮಾರ್‌ ಅವ್ರ ಚೊಚ್ಚಲ ಚಿತ್ರವಾಗಿದ್ದು, ಈಗಾಗ್ಲೇ ಸಾಕಷ್ಟು ನಿರೀಕ್ಷೆಗಳನ್ನ ಹುಟ್ಟುಹಾಕಿದೆ. ಹೀಗಾಗಿ ರಾಜ್ ಕುಟುಂಬದ ಸದಸ್ಯರು ಕೂಡ ಚಿತ್ರವನ್ನ ಕಣ್ತುಂಬಿಕೊಳ್ಳೊದಕ್ಕೆ ಕಾತುರರಾಗಿದ್ದಾರೆ. ಅಷ್ಟೆ ಅಲ್ಲದೇ ಇದೇ ಗುರುವಾರ ನಡೆಯೋ ಪ್ರೀಮಿಯರ್ ಶೊ ನಲ್ಲಿ ಧನ್ಯ ರಾಮ್‌ಕುಮಾರ್ ತಂದೆ ರಾಮ್ಕುಮಾರ್, ತಾಯಿ ಪೂರ್ಣಿಮ, ಸಹೋದರ ಧೀರನ್ ರಾಮ್ ಕುಮಾರ್ ಮತ್ತು ಕುಟುಂಬ ಸದಸ್ಯರಾದ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್,ಪುನೀತ್ ರಾಜ್ ಕುಮಾರ್ ಹಾಗೂ ವಿನಯ್ ರಾಜ್ ಕುಮಾರ್, ಯುವ ರಾಜ್ ಕುಮಾರ್ ಕೂಡ ಸಿ.ಎಂ ಗೆ ಸಾಥ್ ನೀಡಲಿದ್ದಾರೆ.

  ಈಗಾಗ್ಲೇ ಕೊರೋನಾ ಅಲೆಯಿಂದಾಗಿ ಸಿನಿಮಾ ರಂಗ ಸಾಕಷ್ಟು ನಷ್ಟವನ್ನು ಅನುಭವಿಸಿತ್ತು. ಸದ್ಯ ರಾಜ್ಯ ಸರ್ಕಾರ ಚಿತ್ರಮಂದಿರಗಳಲ್ಲಿ ಶೇ.100 ರಷ್ಟು ಆಸನ ಭರ್ತಿಗೆ ಅವಕಾಶ ಮಾಡಿ ಕೊಟ್ಟಿದ್ದು, ಸಾಕಷ್ಟು ಬಹುನೀರಿಕ್ಷೀತ ಸಿನಿಮಾಗಳು ತೆರೆಕಾಣೋಕೆ ರೆಡಿಯಾಗಿವೆ. ಅದ್ರಲ್ಲಿ ಒಂದು "ನಿನ್ನ ಸನಿಹಕೆ" ಚಿತ್ರ. ಈಗಾಗ್ಲೇ ಈ ಸಿನಿಮಾದ ಹಾಡುಗಳು ಮ್ಯೂಸಿಕಲಿ ಹಿಟ್ ಕೂಡ ಆಗಿದೆ. ಇನ್ನು ಈ ಸಿನಿಮಾ ಕಾಮಿಡಿ ರೊಮ್ಯಾಂಟಿಕ್ ಜಾನರ್ ಅನ್ನು ಹೊತ್ತು ಬರ್ತಿದ್ದು, ಚಿತ್ರಕ್ಕೆ ತಕ್ಕಂತೆ ಬ್ಯೂಟಿಫುಲ್ ಮ್ಯೂಸಿಕ್ ನೀಡಿದ್ದಾರೆ ಸಂಗೀತ ನಿರ್ದೇಶಕ ರಘು ದೀಕ್ಷೀತ್.

  English summary
  Suraj Gowda and Dhanya Ramkumar give first ticket of Ninna Sanihake to CM Basavaraj bommai.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X