For Quick Alerts
  ALLOW NOTIFICATIONS  
  For Daily Alerts

  'ವಿಂಡೋಸೀಟ್‌'ನಲ್ಲಿ ಕೂತು ಕಥೆ ಹೇಳುತ್ತಿರೋರಿಗೆ ಸಾಥ್ ಕೊಟ್ಟ ಕಿಚ್ಚ ಸುದೀಪ್

  |

  ಬಸ್ ಇರಲಿ, ಟ್ರೈನ್ ಇರಲಿ.. ಪ್ರಯಾಣ ಮಾಡುವವರಿಗೆ ವಿಂಡೋ ಸೀಟ್ ಬೇಕೇ ಬೇಕು. ಕಿಟಿಕಿ ಪಕ್ಕ ಕುಳಿತ ಪ್ರಕೃತಿ ಸೌಂದರ್ಯ ಸವಿಯೋ ಮಂದಿ ಒಂದು ಕಡೆಯಾದರೆ, ಇನ್ನೊಂದು ಕಡೆ ಹಳೆ ನೆನಪುಗಳಿಗೆ ಜಾರುವವರೂ ಇದ್ದಾರೆ. ಪ್ರಯಾಣಿಕರಿಗೆ ಈ ವಿಂಡೋಸೀಟ್ ಅನ್ನುವುದು ಅಷ್ಟೊಂದು ಪ್ರಾಮುಖ್ಯತೆ ಪಡೆದಿದೆ.

  'ವಿಂಡೋಸೀಟ್' ಹಿಡಿದು ಕೂತಿರುವ ನಾಯಕ ಕಥೆಯನ್ನು ಹೇಳುವುದಕ್ಕೆ ನಟಿ, ನಿರೂಪಕಿ ಶೀತಲ್ ಶೆಟ್ಟಿ ಸಜ್ಜಾಗಿ ನಿಂತಿದ್ದಾರೆ. ಎರಡು ಮೂರು ವರ್ಷಗಳ ಹಿಂದಿನೇ ಈ ಸಿನಿಮಾ ಸೆಟ್ಟೇರಿತ್ತು. ಆದರೆ, ಕೊರೊನಾ ಕಾರಣಗಳಿಂದಾಗಿ ಈ ಸಿನಿಮಾ ಶೂಟಿಂಗ್ ನಿಧಾನಗತಿಯಲ್ಲಿ ಸಾಗಿತ್ತು. ಈಗ 'ವಿಂಡೋಸೀಟ್' ಸಿನಿಮಾ ಕಂಪ್ಲೀಟ್ ಆಗಿದ್ದು, ಸಿನಿಮಾ ಬಿಡುಗಡೆಗೆ ಸಜ್ಜಾಗಿ ನಿಂತಿದೆ.

  'ವಿಂಡೋಸೀಟ್‌'ಗೆ ಸಾಥ್ ಕೊಟ್ಟ ಕಿಚ್ಚ ಸುದೀಪ್

  'ವಿಂಡೋಸೀಟ್' ನಟಿ- ನಿರೂಪಕಿ ಶೀತಲ್ ಶೆಟ್ಟಿ ನಿರ್ದೇಶಿಸಿದ ಮೊದಲ ಸಿನಿಮಾ. ಕಥೆ ಹಾಗೂ ಸ್ಕ್ರೀನ್ ಪ್ಲೇ ಕೂಡ ಇವರದ್ದೇ. ವಿಂಡೋಸೀಟ್ ಅಂತ ಹೇಳಿದ ಕೂಡಲೇ ಟ್ರಾವೆಲ್ ಸ್ಟೋರಿ ಅಂತ ಭಾವಿಸಬೇಕಿಲ್ಲ. ಇದೊಂದು ಸಸ್ಪೆನ್ಸ್-ಥ್ರಿಲ್ಲರ್ ಸಿನಿಮಾ. ಟ್ರೈಲರ್ ನೋಡಿದರೆ, ಸಿನಿಮಾ ಬಗ್ಗೆ ಕುತೂಹಲ ಹೆಚ್ಚಾಗುತ್ತೆ. ಈ ವಿಶಿಷ್ಟ ಟ್ರೈಲರ್ ಅನ್ನು ಕಿಚ್ಚ ಸುದೀಪ್ ರಿಲೀಸ್ ಮಾಡಿ ವಿಂಡೋಸೀಟ್ ತಂಡದ ಬೆಂಬಲಕ್ಕೆ ನಿಂತಿದ್ದಾರೆ.

  'ವಿಂಡೋಸೀಟ್' ಟ್ರೈಲರ್ ಸಿಕ್ಕಾಪಟ್ಟೆ ಕುತೂಹಲ ಕೆರಳಿಸಿರುವುದಂತೂ ನಿಜ. ಇದು ಶಿವಮೊಗ್ಗ ಜಿಲ್ಲೆಯ ಸಾಗರದ ಸುತ್ತಮುತ್ತ ನಡೆಯುವ ಕಥೆ. ಹೀಗಾಗಿ ವಿಂಡೋಸೀಟ್, ರೈಲು, ಮಲೆನಾಡು, ಅಲ್ಲಿನ ಜನರು, ಜೀವನ ಶೈಲಿಯ ಜೊತೆ ಜೊತೆಗೆ ಮರ್ಡರ್‌ ಮಿಸ್ಟ್ರಿಯನ್ನು ಹೇಳಲು ಹೊರಟಿರುವ ಸಿನಿಮಾ ಬಿಡುಗಡೆಗೂ ಸಿದ್ಧತೆಗಳನ್ನು ಮಾಡಿಕೊಂಡಿದೆ. ನಿರೂಪ್ ಭಂಡಾರಿ, ತಾಳಗುಪ್ಪದ ರಘು ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

  Nirup Bhandari Starrer Sheetal Shetty Directed Window Seat Movie Trailer Released by Sudeep

  ರಘು ಒಬ್ಬ ಹಾಡುಗಾರ. ಆತನಿಗೆ ವಿಂಡೋಸೀಟ್‌ನ ಮೇಲೆ ವ್ಯಾಮೋಹ. ಈತನ ವಿಂಡೋಸೀಟ್‌ನ ವ್ಯಾಮೋಹವೇ ಈತನನ್ನು ಸಂಕಷ್ಟಕ್ಕೆ ತಳ್ಳುತ್ತದೆ. ಇದರೊಂದಿಗೆ ರಘು ಪಾರಾಗುತ್ತಾನಾ? ಇಲ್ಲಾ, ಕಟ್ಟು ಪಾಡುಗಳಿಗೆ ಸಿಕ್ಕು ಸಂಕಷ್ಟಕ್ಕೆ ಸಿಲುಕುತ್ತಾನಾ? ಅನ್ನೋದು ಸಿನಿಮಾದ ಕಥೆ. ಪ್ರೀತಿ, ಭಾವನೆ, ನೋವು-ನಲಿವಿನ ಜೊತೆಗೆ ಮರ್ಡರ್ ಮಿಸ್ಟ್ರಿ ಹೇಗೆ ಸಾಗುತ್ತೆ ಎನ್ನುವುದೇ ಸಿನಿಮಾ.

  ಮಾಸ್ 'ಬೈರಾಗಿ' ಜೊತೆ ವಿಂಡೋಸೀಟ್ ಹಿಡಿದ ನಿರೂಪ್

  'ವಿಂಡೋಸೀಟ್' ಇಷ್ಟರೊಳಗೆ ರಿಲೀಸ್ ಆಗಬೇಕಿತ್ತು. ಆದರೆ, ಚಿತ್ರೀಕರಣದ ಮಧ್ಯೆ ಕೊರೊನಾ, ಲಾಕ್‌ಡೌನ್ ಅಂತ ಸಿನಿಮಾದ ಚಿತ್ರೀಕರಣ ಕೊಂಚ ತಡವಾಗಿತ್ತು. ಕೊನೆಗೂ ಸಿನಿಮಾ ಶೂಟಿಂಗ್, ಪೋಸ್ಟ್ ಪ್ರೊಡಕ್ಷನ್ ಎಲ್ಲಾ ಮುಗಿಸಿದ್ದು, ಬಿಡುಗಡೆ ಸಜ್ಜಾಗಿದೆ. ಜುಲೈ 1ರಂದು ಸಿನಿಮಾ ಗ್ರ್ಯಾಂಡ್ ಆಗಿ ಬಿಡುಗಡೆಯಾಗುತ್ತಿದೆ. ನಿರೂಪ್ ಭಂಡಾರಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರೆ, ಸಂಜನಾ ಆನಂದ್ ಹಾಗೂ ಅಮೃತಾ ಅಯ್ಯಂಗಾರ್ ಲೀಡ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

  ಅರ್ಜುನ್ ಜನ್ಯ ಸಂಗೀತ ನಿರ್ದೇಶನವಿದ್ದರೆ, ವಿಘ್ನೇಶ್ ರಾಜ್ ಛಾಯಾಗ್ರಹಣವಿದೆ. 'ವಿಂಡೋಸೀಟ್' ಬಿಡುಗಡೆ ದಿನವೇ ಶತಕ ವೀರ ಸೆಂಚುರಿ ಸ್ಟಾರ್ ಅಭಿನಯದ ಶಿವರಾಜ್‌ಕುಮಾರ್ ಅಭಿನಯದ 'ಬೈರಾಗಿ' ಕೂಡ ಬಿಡುಗಡೆಯಾಗುತ್ತಿದೆ. ಹೀಗಾಗಿ ಸಿನಿಮಾ ಅಭಿಮಾನಿಗಳಿಗೆ 'ಬೈರಾಗಿ' ಮತ್ತು 'ವಿಂಡೋಸೀಟ್' ಹೊಸ ಅನುಭವ ನೀಡಲಿದೆ.

  English summary
  Nirup Bhandari Starrer Sheetal Shetty Directed Windowseat Movie Trailer Released by Sudeep, Know More.
  Monday, June 6, 2022, 14:47
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X