»   » ಕನ್ನಡದಲ್ಲಿ ಮಿಂಚಬೇಕಿದ್ದ ನಿಶಾ ಯೋಗೇಶ್ವರ್ ಈಗ ತೆಲುಗಿನಲ್ಲಿ

ಕನ್ನಡದಲ್ಲಿ ಮಿಂಚಬೇಕಿದ್ದ ನಿಶಾ ಯೋಗೇಶ್ವರ್ ಈಗ ತೆಲುಗಿನಲ್ಲಿ

Posted By:
Subscribe to Filmibeat Kannada

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ರಾಜಕಾರಣಿ ಸಿ.ಪಿ.ಯೋಗೇಶ್ವರ್ ಪುತ್ರಿ ನಿಶಾ ಯೋಗೇಶ್ವರ್ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿ ವರ್ಷ ಕಳೆದಿರಬೇಕಿತ್ತು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಅಂಬರೀಶ' ಚಿತ್ರದ ಮೂಲಕ ಚಿತ್ರರಂಗಕ್ಕೆ ನಿಶಾ ಯೋಗೇಶ್ವರ್ ಅಡಿಯಿಡಬೇಕಿತ್ತು.

ಆದ್ರೆ, ಕಾರಣಾಂತರಗಳಿಂದ ಅದು ಸಾಧ್ಯವಾಗ್ಲಿಲ್ಲ. 'ಅಂಬರೀಶ' ಚಿತ್ರ ಸೆಟ್ಟೇರಿದ ಕೆಲವೇ ದಿನಗಳಲ್ಲಿ ನಿಶಾ ಯೋಗೇಶ್ವರ್ ಚಿತ್ರದಿಂದ ಹೊರಬಿದ್ದರು. ಆದ್ರೇನಂತೆ, ಬಳುಕುವ ಬಳ್ಳಿಯಂತಿರುವ ನಿಶಾ ಯೋಗೇಶ್ವರ್ ಗೆ ಟಾಲಿವುಡ್ ಮಣೆ ಹಾಕಿದೆ.['ಅಂಬರೀಶ' ಚಿತ್ರದಿಂದ ನಿಶಾ ಔಟ್; ಕಾರಣ ನಿಗೂಢ]

Nisha Yogeshwar to make her Debut with Telugu film

'ಶ್ರೀರಾಮರಕ್ಷ' ಅನ್ನುವ ತೆಲುಗು ಚಿತ್ರದ ಮೂಲಕ ಕನ್ನಡತಿ ನಿಶಾ ಯೋಗೇಶ್ವರ್ ಬಣ್ಣದ ಜಗತ್ತಿಗೆ ಕಾಲಿಡುತ್ತಿದ್ದಾರೆ. ತೆಲುಗಿನಲ್ಲಿ ಗುರುತಿಸಿಕೊಂಡಿರುವ ಮಲಯಾಳಂ ನಟ ರಜಿತ್ ಮೆನನ್ ಜೊತೆ ಪರದೆ ಹಂಚಿಕೊಳ್ಳಲಿದ್ದಾರೆ ನಿಶಾ ಯೋಗೇಶ್ವರ್.[ನಟ ದರ್ಶನ್ ಚಿತ್ರಕ್ಕೆ ಸಿಪಿ ಯೋಗೀಶ್ವರ್ ಪುತ್ರಿ ನಿಶಾ]

Nisha Yogeshwar to make her Debut with Telugu film

ಔಟ್ ಅಂಡ್ ಲವ್ ಸ್ಟೋರಿಯಾಗಿರುವ 'ಶ್ರೀರಾಮರಕ್ಷ' ಚಿತ್ರಕ್ಕೆ ನಿಶಾ ಯೋಗೇಶ್ವರ್ ಈಗಾಗಲೇ ಸಿದ್ಧತೆ ನಡೆಸುತ್ತಿದ್ದಾರೆ. ಬಾಲಿವುಡ್ ಗೂ ಎಂಟ್ರಿಕೊಡುವ ಬಗ್ಗೆ ಕನಸು ಕಾಣುತ್ತಿರುವ ನಿಶಾ ಯೋಗೇಶ್ವರ್, 2016 ರ ಹೊತ್ತಿಗೆ ಬಿಟೌನ್ ಗೆ ಹಾರುವುದು ಪಕ್ಕಾ ಅಂತಾರೆ.

English summary
Politician C.P.Yogeshwar's daughter Nisha Yogeshwar is all set to make her debut with Telugu film 'Sriramaraksha'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada