»   » 'ಕಿರಿಕ್' ಹುಡುಗಿ ಔಟ್, ಸಂಯುಕ್ತ ಜಾಗಕ್ಕೆ ಬಂದಳು ಹೊಸ ಚೆಲುವೆ!

'ಕಿರಿಕ್' ಹುಡುಗಿ ಔಟ್, ಸಂಯುಕ್ತ ಜಾಗಕ್ಕೆ ಬಂದಳು ಹೊಸ ಚೆಲುವೆ!

Posted By: Naveen
Subscribe to Filmibeat Kannada

ತಮಿಳು ಸಿನಿಮಾ ಆಫರ್ ಬಂದಿದೆ ಎನ್ನುವ ಕಾರಣಕ್ಕೆ ಕನ್ನಡದ ಎರಡು ಸಿನಿಮಾಗಳನ್ನ ನಿರಾಕರಿಸಿ ನಟಿ ಸಂಯುಕ್ತ ಹೆಗಡೆ ಕಿರಿಕ್ ಮಾಡಿಕೊಂಡ ವಿಚಾರ ನಿನ್ನೆ ಗಾಂಧಿನಗರದಲ್ಲಿ ದೊಡ್ಡ ನ್ಯೂಸ್ ಆಗಿತ್ತು.

'ಕಾಲೇಜ್ ಕುಮಾರ್' ಚಿತ್ರದ ನಿರ್ಮಾಪಕ ಪದ್ಮನಾಭ ನಿರ್ಮಾಪಕರ ಸಂಘದ ಮೆಟ್ಟಿಲೇರಿದ್ಮೇಲೆ, ''ಸಿನಿಮಾದಲ್ಲಿ ಅಭಿನಯಿಸುತ್ತೇನೆ'' ಎಂದು ಸಂಯುಕ್ತ ಒಪ್ಪಿಕೊಂಡಿದ್ದರು. ಅಲ್ಲಿಗೆ, ವಿವಾದ ತಣ್ಣಗಾಯ್ತು ಎಂದು ಎಲ್ಲರೂ ಭಾವಿಸಿರಬಹುದು.

ಆದರೆ, ತಮಿಳು ಸಿನಿಮಾಗಾಗಿ ಕನ್ನಡ ಚಿತ್ರವೊಂದಕ್ಕೆ ನಟಿ ಸಂಯುಕ್ತ ಅಕ್ಷರಶಃ ಕೈ ಎತ್ತಿರುವ ವಿಚಾರ ಅನೇಕರ ಗಮನಕ್ಕೆ ಬಂದಿಲ್ಲ. 'ವಾಸು.. ನಾನ್ ಪಕ್ಕಾ ಕಮರ್ಶಿಯಲ್' ಎಂಬ ಸಿನಿಮಾದಿಂದ ನಟಿ ಸಂಯುಕ್ತ ಹೆಗಡೆ ಹೊರಬಂದಿದ್ದಾರೆ.

'ಒಲ್ಲದ ಮನಸ್ಸಿನಿಂದ ಆಕೆ ನಟಿಸುವುದು ಬೇಡ' ಎಂದು ಸಂಯುಕ್ತಗೆ ಗೇಟ್ ಪಾಸ್ ಕೊಟ್ಟು ಹೊಸ ಹುಡುಗಿಗೆ 'ವಾಸು' ಅಂಡ್ ಟೀಮ್ ಬುಲಾವ್ ನೀಡಿದೆ. ಮುಂದೆ ಓದಿ....

ಕೈ ಕೊಟ್ಟ ಸಂಯುಕ್ತ

ತಮಿಳಿನಲ್ಲಿ ಪ್ರಭುದೇವ ಜೊತೆ ಹೆಜ್ಜೆ ಹಾಕುವ ಅವಕಾಶ ಸಿಕ್ಕಿದ್ದಕ್ಕೆ ಕನ್ನಡ ಚಿತ್ರವನ್ನ ನಟಿ ಸಂಯುಕ್ತ ರಿಜೆಕ್ಟ್ ಮಾಡಿದ್ದಾರೆ. 'ವಾಸು.. ನಾನ್ ಪಕ್ಕಾ ಕಮರ್ಶಿಯಲ್' ಸಿನಿಮಾದಿಂದ ನಟಿ ಸಂಯುಕ್ತ ಔಟ್ ಆಗಿರುವ ಸುದ್ದಿ ಈಗ ಹೊರ ಬಿದ್ದಿದೆ.

ಸಂಯುಕ್ತ ಔಟ್, ನಿಶ್ವಿಕಾ ಇನ್

ಸಿನಿಮಾ ಮಾಡಲು ನಿರಾಕರಿಸಿದ ಸಂಯುಕ್ತ ನಿರ್ಧಾರವನ್ನ 'ವಾಸು.. ನಾನ್ ಪಕ್ಕಾ ಕಮರ್ಶಿಯಲ್' ಚಿತ್ರತಂಡ ಬೇಸರದಿಂದ ಒಪ್ಪಿಕೊಂಡಿದೆ. ಹೀಗಾಗಿ ಸಂಯುಕ್ತ ಜಾಗಕ್ಕೆ ನಿಶ್ವಿಕಾ ನಾಯ್ಡು ಎಂಬ ಹೊಸ ಹುಡುಗಿ ಎಂಟ್ರಿಕೊಟ್ಟಿದ್ದಾರೆ.

ಯಾರೇ ನೀನು ಚೆಲುವೆ.?

'ನಿಶ್ವಿಕಾ ನಾಯ್ಡು' ಕನ್ನಡದ ಹುಡುಗಿ. ಬೆಂಗಳೂರಿನಲ್ಲಿಯೇ ಹುಟ್ಟಿ ಬೆಳೆದ ಬೆಡಗಿ. ನೋಡಲು ಸಖತ್ ಕ್ಯೂಟ್ ಆಗಿರುವ ಈಕೆ ಈಗಾಗಲೇ ಅನೇಕ ಜಾಹಿರಾತುಗಳಲ್ಲಿ ಕಾಣಿಸಿಕೊಂಡಿದ್ದಾಳೆ.

ಪಾತ್ರಕ್ಕೆ ಸೂಟ್ ಆಗುತ್ತಾರೆ.!

ಮುಂಬೈನಲ್ಲಿ ನಟನೆ ತರಬೇತಿ ಮುಗಿಸಿರುವ ನಿಶ್ವಿಕಾ ನಾಯ್ಡು ಈಗ ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಸಿನಿಮಾದ ಪಾತ್ರಕ್ಕೆ ಚೆನ್ನಾಗಿ ಸೂಟ್ ಆಗುತ್ತಾರೆ ಅಂತ ಚಿತ್ರತಂಡ ಈಕೆಯನ್ನ ಸೆಲೆಕ್ಟ್ ಮಾಡಿದೆ.

ಚಿತ್ರೀಕರಣ ನಡೆಯುತ್ತಿದೆ

'ವಾಸು.. ನಾನ್ ಪಕ್ಕಾ ಕಮರ್ಶಿಯಲ್' ಸಿನಿಮಾದ ಶೂಟಿಂಗ್ ಈಗಾಗಲೇ ಶುರುವಾಗಿದೆ. ಕೆಳೆದ ಮೂರು ದಿನಗಳಿಂದ ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಯುತ್ತಿದೆ.

ಚಿತ್ರತಂಡದ ಸ್ಪಷ್ಟನೆ

'ಸಿನಿಮಾದ ನಾಯಕಿ ಬದಲಾಗಿರುವ ವಿಷಯದಲ್ಲಿ ತಮ್ಮ ತಪ್ಪಿಲ್ಲ, ಸಂಯುಕ್ತ ತಾವೇ ಈ ಚಿತ್ರದಿಂದ ಹೊರಗೆ ಹೋಗಿದ್ದಾರೆ' ಅಂತ ಚಿತ್ರತಂಡ ಸ್ಪಷ್ಟನೆ ನೀಡಿದೆ.

English summary
'Nishvika naidu' to replace Samyuktha Hegde opposite Kannada Actor Anish Tejeshwar in 'Vasu.. naan pakka commercial' movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada