For Quick Alerts
  ALLOW NOTIFICATIONS  
  For Daily Alerts

  'ಕಾಲಾ' ಕೋಲಾಹಲ: ಬುಕ್ ಮೈ ಶೋನಲ್ಲಿ 'ಕಾಲಾ' ಹೆಸರೇ ಇಲ್ಲ.!

  By Harshitha
  |

  ಇಂದು ವಿಶ್ವದಾದ್ಯಂತ 'ಕಾಲಾ' ಸಿನಿಮಾ ಬಿಡುಗಡೆ ಆಗಿರಬಹುದು. ಆದ್ರೆ, ಕರ್ನಾಟಕದಲ್ಲಿ ಮಾತ್ರ 'ಕಾಲಾ'ಗೆ ಬಿಡುಗಡೆ ಭಾಗ್ಯ ಸಿಕ್ಕಿಲ್ಲ.

  ಈಗಷ್ಟೇ ರಾಜಕೀಯಕ್ಕೆ ಕಾಲಿಟ್ಟಿರುವ ರಜನಿಕಾಂತ್ ಕಾವೇರಿ ನೀರು ಹಂಚಿಕೆ ಬಗ್ಗೆ ವಿವಾದಾತ್ಮಕ ಹೇಳಿಕೆ ಕೊಟ್ಟ ಕಾರಣ, ಕನ್ನಡ ಪರ ಹೋರಾಟಗಾರರು ಕರ್ನಾಟಕದಲ್ಲಿ 'ಕಾಲಾ' ಚಿತ್ರ ಬಿಡುಗಡೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.

  ಪ್ರತಿಭಟನೆ ಆಗುವ ಸಾಧ್ಯತೆ ಇರುವುದರಿಂದ ರಾಜ್ಯದ ಬಹುತೇಕ ಕಡೆ ಚಿತ್ರಮಂದಿರದ ಮಾಲೀಕರೇ 'ಕಾಲಾ' ಪ್ರದರ್ಶನ ಮಾಡಲು ಹಿಂದೇಟು ಹಾಕಿದ್ದಾರೆ. ಬುಕ್ ಮೈ ಶೋ ವೆಬ್ ತಾಣದಲ್ಲೂ ಪರಿಸ್ಥಿತಿ ವಿಭಿನ್ನವಾಗಿಲ್ಲ.!

  'ಕಾಲಾ' ಕಲಹ : ಕರ್ನಾಟಕದ ಯಾವ ಜಿಲ್ಲೆಗಳಲ್ಲಿ ಹೇಗಿದೆ ಪರಿಸ್ಥಿತಿ ?'ಕಾಲಾ' ಕಲಹ : ಕರ್ನಾಟಕದ ಯಾವ ಜಿಲ್ಲೆಗಳಲ್ಲಿ ಹೇಗಿದೆ ಪರಿಸ್ಥಿತಿ ?

  'ಕಾಲಾ' ಚಿತ್ರವನ್ನ ನೋಡಲು ಟಿಕೆಟ್ ಬುಕ್ ಮಾಡೋಣ ಅಂತ ಕರ್ನಾಟಕದ ಯಾವುದೇ ಭಾಗದಿಂದ ಇಂದು ಬುಕ್ ಮೈ ಶೋ ವೆಬ್ ತಾಣ ತೆಗೆದು ನೋಡಿದರೆ, ಯಾವ ಮೂಲೆಯಲ್ಲೂ ನಿಮಗೆ 'ಕಾಲಾ' ಹೆಸರು ಕಣ್ಣಿಗೆ ಬೀಳಲ್ಲ.! ಯಾಕಂದ್ರೆ, ಕರ್ನಾಟಕದ ಯಾವುದೇ ಚಿತ್ರಮಂದಿರ/ಮಲ್ಟಿಪ್ಲೆಕ್ಸ್ 'ಕಾಲಾ' ಚಿತ್ರಕ್ಕಾಗಿ ಬುಕ್ಕಿಂಗ್ ವ್ಯವಸ್ಥೆ ತೆರೆದಿಲ್ಲ.

  ಕರ್ನಾಟಕದ ಈ ಥಿಯೇಟರ್ ನಲ್ಲಿ 'ಕಾಲಾ' ರಿಲೀಸ್ ಆಗೋಯ್ತು.!ಕರ್ನಾಟಕದ ಈ ಥಿಯೇಟರ್ ನಲ್ಲಿ 'ಕಾಲಾ' ರಿಲೀಸ್ ಆಗೋಯ್ತು.!

  ಬೆಂಗಳೂರಿನ ಬಹುತೇಕ ಸಿಂಗಲ್ ಸ್ಕ್ರೀನ್ ಥಿಯೇಟರ್ ಹಾಗೂ ಮಲ್ಟಿಪ್ಲೆಕ್ಸ್ ನಲ್ಲಿ 'ಕಾಲಾ' ಚಿತ್ರವನ್ನ ಇಲ್ಲಿಯವರೆಗೂ ಪ್ರದರ್ಶನ ಮಾಡಿಲ್ಲ. ಮಂತ್ರಿ ಸ್ಕ್ವೇರ್ ಹಾಗೂ ಒರಾಯನ್ ಮಾಲ್ ಮುಂದೆ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದರಿಂದ, ಚಿತ್ರ ಪ್ರದರ್ಶನ ಮಾಡಲು ಮಾಲ್ ಸಿಬ್ಬಂದಿ ಹಿಂದೇಟು ಹಾಕಿದ್ದಾರೆ.

  English summary
  Amidst Protest against 'Kaala' release, No booking system for 'Kaala' in Book my show.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X