»   » ಕಾಮಿಡಿ ಸಿನಿಮಾಗಳೇ ಕಾಣ್ತಿಲ್ಲ ಗಾಂಧಿನಗರದಲ್ಲಿ

ಕಾಮಿಡಿ ಸಿನಿಮಾಗಳೇ ಕಾಣ್ತಿಲ್ಲ ಗಾಂಧಿನಗರದಲ್ಲಿ

By: ಜೀವನರಸಿಕ
Subscribe to Filmibeat Kannada

ಹೊಸ ವರ್ಷದಿಂದ ಗಾಮಧಿನಗರದ ಮಂದಿಗೆ ನಗು ಮರೆತುಹೋಗಿದೆ. ಇತ್ತೀಚೆಗೆ ಎಲ್ಲಾದ್ರೂ ನೋಡಿದ್ರಾ ಇದನ್ನ ಅಂತ ಹುಡುಕಾಡೋ ಹಾಗಾಗಿದೆ ಚಿತ್ರಪ್ರೇಮಿಗಳು. ಮೊದಲ ಒಂದಿಡೀ ತಿಂಗಳಲ್ಲಿ ಒಂದೂ ಕಾಮಿಡಿ ಸಿನಿಮಾಗಳು ತೆರೆಗೆ ಬಂದಿಲ್ಲ.

ಯಾವಾಗಲು ಮನರಂಜನೆಯಲ್ಲಿ ಸಿಂಹಪಾಲು ಪಡೆಯೋ ನಗು ಇರೋ ಸಿನಿಮಾಗಳು ಬಾರದಿದ್ರೆ ಅದೊಂಥರಾ ಬೇಸರಾನೆ. ಫೆಬ್ರವರಿ ತಿಂಗಳಲ್ಲೂ ಕಂಪ್ಲೀಟ್ ಕಾಮಿಡಿ ಸಿನಿಮಾಗಳು ತೆರೆಗೆ ಬರೋ ಲಕ್ಷಣ ಕಾಣ್ತಿಲ್ಲ. ಕಾಮಿಡಿಯನ್ ಗಳ ಒಂದಷ್ಟು ಸಿನಿಮಾಗಳಿವೆ. ಅದರಲ್ಲಿ ಜಗ್ಗೇಶ್ ಅಭಿನಯ 'ಅಗ್ರಜ' ಹೀರೋಯಿಸಂ ಸಿನಿಮಾ.

Still from movie Karodpati

ಕೋಮಲ್ ಅಭಿನಯದ ಕಾಮಿಡಿ ಸಿನಿಮಾ 'ಕರೋಡ್ ಪತಿ'ಯ "ಸರಸಕೆ ಬಾರೇ ಸರಳ..." ಹಾಡು ಆರು ತಿಂಗಳಿಂದಾ ಅರಚ್ತಾ ಇದ್ರೂ ಸಿನಿಮಾಗೆ ಮಾತ್ರ ಇನ್ನೂ ಬಿಡುಗಡೆಯ ಭಾಗ್ಯ ಬಂದಿಲ್ಲ. 'ಪುಂಗಿದಾಸ' ಯಾವಾಗ ರಿಲೀಸೋ ಗೊತ್ತಿಲ್ಲ. ಶರಣ್ ಅಭಿನಯದ ಲೇಡಿ ಗೆಟಪ್ ಸಿನಿಮಾ 'ಶ್ರೀಮತಿ ಜಯಲಲಿತಾ' ಇಷ್ಟೊತ್ತಿಗಾಗಲೇ ತೆರೆಗೆ ಬರ್ಬೇಕಿತ್ತು. ಆದ್ರೆ ಅದೂ ಕಾಣಿಸ್ತಾ ಇಲ್ಲ.

ರಂಗಾಯಣ ರಘು ಅಭಿನಯ 'ಐಸ್ ಪೈಸ್' ಸಿನಿಮಾ ಶೂಟಿಂಗ್ ಮುಗಿಸಿದ್ರೂ ರಿಲೀಸ್ ಡೇಟ್ ಸಿಗದೆ ಒದ್ದಾಡ್ತಾ ಇದೆ. ಸಾಧು ಕೋಕಿಲ ಅಭಿನಯದ ಔಟ್ ಅಂಡ್ ಔಟ್ ಕಾಮಿಡಿ ಥ್ರಿಲ್ಲರ್ ಸಿನಿಮಾ ಕೂಡ ಯಾವುದೂ ಇಲ್ಲ. ಒಟ್ಟಾರೆ ಹೇಳೋದಾದ್ರೆ ಕಾಮಿಡಿ ಸಿನಿಮಾ ಇಲ್ಲದಿದ್ರೆ ನಗು ಇಲ್ಲ. ನಗು ಇಲ್ಲ ಅಂದ್ರೆ ಮುಖ್ಯ ಮನರಂಜನೇನೇ ಇಲ್ಲ.

English summary
Comedy is the most entertaining element in movies. But last one month no comedy movie released in Kannada. Kannada comedy flicks like Pungi Dasa, Karodpati, Smt Jayalalitha, Ice Pice and Agraja finished their shooting but not released yet. 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada