twitter
    For Quick Alerts
    ALLOW NOTIFICATIONS  
    For Daily Alerts

    ಶಿವಮೊಗ್ಗದಲ್ಲಿ ಪರಭಾಷಾ ಚಿತ್ರಗಳ ಹಾವಳಿ: ಕನ್ನಡಕ್ಕಿಲ್ಲ ಚಿತ್ರಮಂದಿರ

    |

    ಕರ್ನಾಟಕದಲ್ಲಿ ಹೆಚ್ಚು ಕನ್ನಡ ಮಾತನಾಡುವ ಜನ ಸಿಗುವ ಪ್ರದೇಶ ಮಲೆನಾಡು. ಮಲೆನಾಡಿಗರ ಮೇಲೆ ಪರಭಾಷೆಯವರ ಪ್ರಭಾವ ತೀರಾ ಕಡಿಮೆ. ಪರಿಶುದ್ಧ ಕನ್ನಡ ಮಾತನಾಡುತ್ತ, ಕನ್ನಡ ಸೊಗಡನ್ನು ಬೀರುತ್ತಿರುವ ನಾಡಲ್ಲಿ ಈಗ ಪರಭಾಷಾ ಚಿತ್ರಗಳು ರಾರಾಜಿಸುತ್ತಿವೆ.

    ಹೌದು, ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿ ತಮಿಳು, ತೆಲುಗು ಚಿತ್ರಗಳ ಕಟೌಟ್, ಫ್ಲೆಕ್ಸ್ ರಾಜಾರೋಷವಾಗಿ ತಲೆಎತ್ತಿ ನಿಂತಿವೆ. ಈ ದೃಶ್ಯಗಳನ್ನು ನೋಡಿದ ಜನರು 'ಇದು ಕನ್ನಡ ಚಿತ್ರರಂಗದ ಭವಿಷ್ಯ ಹೇಳುತ್ತಿದೆ' ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಳ್ಳುತ್ತಿದ್ದಾರೆ. ಇದು ಯಾವುದೊ ಗಡಿನಾಡು ಅಥವಾ ಕನ್ನಡ ಮಾತನಾಡದ ಪ್ರದೇಶದ ಸ್ಥಿತಿ ಆಗಿದ್ದರೆ ಅಷ್ಟು ಆಶ್ಚರ್ಯವಾಗುತ್ತಿರಲಿಲ್ಲವೇನೋ. ಇಂತಹ ಸ್ಥಿತಿ ಬಂದಿರುವುದು ಬೇರೆ ಭಾಷೆಯಗಳ ಹಾವಳಿ ಇಲ್ಲದ ನಾಡು ಶಿವಮೊಗ್ಗದಲ್ಲಿ ಎನ್ನುವುದೆ ದುರಂತ. ಮುಂದೆ ಓದಿ..

    ಅಬ್ಬಾ! ನಾಳೆ ಬರೋಬ್ಬರಿ 12 ಕನ್ನಡ ಸಿನಿಮಾಗಳ ಬಿಡುಗಡೆಅಬ್ಬಾ! ನಾಳೆ ಬರೋಬ್ಬರಿ 12 ಕನ್ನಡ ಸಿನಿಮಾಗಳ ಬಿಡುಗಡೆ

     ಶಿವಮೊಗ್ಗದಲ್ಲಿ ಇಲ್ಲ ಕನ್ನಡ ಸಿನಿಮಾ

    ಶಿವಮೊಗ್ಗದಲ್ಲಿ ಇಲ್ಲ ಕನ್ನಡ ಸಿನಿಮಾ

    ಕಳೆದ ಎರಡು ವಾರದಲ್ಲಿ ಕನ್ನಡದಲ್ಲಿ ಸಾಕಷ್ಟು ಸಿನಿಮಾಗಳು ರಿಲೀಸ್ ಆಗಿವೆ. ಒಂದು ವಾರ 11 ಸಿನಿಮಾ ರಿಲೀಸ್ ಆದರೆ, ಕಳೆದ ವಾರ ದಾಖಲೆ ಎನ್ನುವಂತೆ 13 ಸಿನಿಮಾಗಳು ತೆರೆಗೆ ಬಂದಿವೆ. ಆದರೆ ಇದ್ಯಾವ ಸಿನಿಮಾಗಳು ಶಿವಮೊಗ್ಗದಂತಹ ಅಪ್ಪಟ ಕನ್ನಡಿಗರು ಇರುವ ನಾಡಲ್ಲಿ ಕಾಣಸಿಗಲ್ಲ ಎನ್ನುವುದೆ ದುರಂತ.

     ಕನ್ನಡ ಸಿನಿಮಾಗಳಿಗೆ ಚಿತ್ರಮಂದಿರ ಸಮಸ್ಯೆ

    ಕನ್ನಡ ಸಿನಿಮಾಗಳಿಗೆ ಚಿತ್ರಮಂದಿರ ಸಮಸ್ಯೆ

    ಇತ್ತೀಚಿಗೆ ರಿಲೀಸ್ ಸಾಕಷ್ಟು ಕನ್ನಡ ಸಿನಿಮಾಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಆದರೆ ಈ ಅದ್ಭುತ ಸಿನಿಮಾಗಳಿಗೆ ಚಿತ್ರಮಂದಿರಗಳಿಲ್ಲ ಎಂದು ಒದ್ದಾಡುತ್ತಿದ್ದಾರೆ. ಚಿತ್ರಮಂದಿರಗಳನ್ನು ನೀಡಿ ಎಂದು ಕೇಳಿಕೊಳ್ಳುತ್ತಿದ್ದಾರೆ. ಉತ್ತಮ ಸಿನಿಮಾಗಳನ್ನು ಪ್ರೇಕ್ಷಕರು ಕೈ ಬಿಡುವುದಿಲ್ಲ. ಆದರೆ ಕನ್ನಡದ ಅದ್ಭುತ ಸಿನಿಮಾಗಳ ಪ್ರದರ್ಶನಕ್ಕೆ ಚಿತ್ರಮಂದಿರಗಳೆ ಇಲ್ಲದಿದ್ದರೆ ಸಿನಿಮಾ ನೋಡುವುದಾದರು ಹೇಗೆ, ಕನ್ನಡ ಚಿತ್ರರಂಗ ಬೆಳೆಯುವುದಾದರು ಹೇಗೆ?

    ವರ್ಷಾರಂಭದಲ್ಲಿಯೇ 5 ಸುಂದರ ಸಿನಿಮಾಗಳ ಆಗಮನವರ್ಷಾರಂಭದಲ್ಲಿಯೇ 5 ಸುಂದರ ಸಿನಿಮಾಗಳ ಆಗಮನ

     6 ಚಿತ್ರಮಂದಿರಗಳಲ್ಲಿ 5 ಚಿತ್ರಮಂದಿರ ಪರಭಾಷೆಗೆ

    6 ಚಿತ್ರಮಂದಿರಗಳಲ್ಲಿ 5 ಚಿತ್ರಮಂದಿರ ಪರಭಾಷೆಗೆ

    ಶಿವಮೊಗ್ಗದಲ್ಲಿ ಒಟ್ಟು 6 ಚಿತ್ರಮಂದಿಗಳು ಇವೆ. ಐದು ಚಿತ್ರಮಂದಿರಗಳಲ್ಲಿ ತೆಲುಗು ಸಿನಿಮಾಗಳು ಪ್ರದರ್ಶನವಾಗುತ್ತಿವೆ. ಕನ್ನಡ ಚಿತ್ರಗಳು ಪ್ರದರ್ಶನವಾಗುತ್ತಿರುವ ಚಿತ್ರಮಂದಿರಗಳಲ್ಲಿ ಈಗ ಸಂಪೂರ್ಣವಾಗಿ ಪರಭಾಷಾ ಚಿತ್ರಗಳು ಪ್ರದರ್ಶನವಾಗುತ್ತಿವೆ.

     ಈಗಲೆ ಎಚ್ಚೆತ್ತುಕೊಳ್ಳಬೇಕು

    ಈಗಲೆ ಎಚ್ಚೆತ್ತುಕೊಳ್ಳಬೇಕು

    ಈ ಬಗ್ಗೆ ಈಗಾಗಲೆ ಎಚ್ಚೆತ್ತುಕೊಳ್ಳದಿದ್ದರೆ ಮಲೆನಾಡು ಸಹ ತಮಿಳು, ತೆಲುಗುಮಯವಾಗಲಿದೆ. ಮಲೆನಾಡಿನಲ್ಲೂ ಕನ್ನಡಕ್ಕೆ ಹೊರಾಡುವ ಸ್ಥಿತಿ ಬಂದಿದೆ ಎಂದರೆ ಕನ್ನಡ ಚಿತ್ರರಂಗ ಎತ್ತ ಸಾಗುತ್ತಿದೆ ಎನ್ನವುದೆ ದೊಡ್ಡ ಪ್ರಶ್ನೆ.

    English summary
    No Kannada films In Shivamogga Theatres. Telugu, Tamilu films screening in Shivamogga all Theatres.
    Monday, February 17, 2020, 12:08
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X