For Quick Alerts
  ALLOW NOTIFICATIONS  
  For Daily Alerts

  "ನನ್ನಷ್ಟು ಬ್ಲ್ಯಾಕ್ ಮಾರ್ಕ್ ಇರೋನು ಯಾರೂ ಇಲ್ಲ..ನನ್ನ ಬ್ಯಾಡ್ ಲಕ್ಕೋ ಏನೋ" ದರ್ಶನ್!

  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ 'ಕ್ರಾಂತಿ' ಸಿನಿಮಾ ರಿಲೀಸ್ ಆಗುವುದನ್ನೇ ಎಲ್ಲರೂ ಎದುರು ನೋಡುತ್ತಿದ್ದಾರೆ. 'ರಾಬರ್ಟ್' ಬಳಿಕ ದರ್ಶನ್ ಹೊಸ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಯಾವ ಮಟ್ಟಿಗೆ 'ಕ್ರಾಂತಿ' ಮಾಡ್ಬಹುದು ಅನ್ನೋ ನಿರೀಕ್ಷೆಯಲ್ಲಿ ಡಿ ಬಾಸ್ ಫ್ಯಾನ್ಸ್ ಎದುರು ನೋಡುತ್ತಿದ್ದಾರೆ.

  ಮೊದಲೇ ಹೇಳಿದ ಹಾಗೆ ದರ್ಶನ್ ಪ್ರತಿಯೊಂದು ಯೂಟ್ಯೂಬ್ ಚಾನೆಲ್‌ಗೂ ಸಂದರ್ಶನ ನೀಡುತ್ತಿದ್ದಾರೆ. ಇನ್ನೇ ಸಿನಿಮಾ ರಿಲೀಸ್‌ಗೆ ಕೆಲವೇ ದಿನಗಳು ಬಾಕಿಯಿವೆ ಅನ್ನುವಾಗಲೇ ಅಭಿಮಾನಿಗಳ ಯೂಟ್ಯೂಬ್ ಚಾನೆಲ್‌ಗೆ ತಮ್ಮ ತೋಟದ ದರ್ಶನ ಮಾಡಿಸಿದ್ದಾರೆ.

  "ಉಪ್ಪಿನಕಾಯಿ ಹಾಕೋದಕ್ಕೆ ಟ್ಯಾಕ್ಸ್ ತಗೋತಾರಾ?": ದರ್ಶನ್ ಹೇಳಿಕೆಗೆ AAP ಪಕ್ಷ ದಿಲ್ ಖುಷ್!

  ಅದೆಷ್ಟೇ ಕೆಲ ಇದ್ದರೂ, ಹೊಸ ಸಿನಿಮಾ ರಿಲೀಸ್‌ಗೆ ರೆಡಿಯಾಗಿದ್ದರೂ ದರ್ಶನ್ ಸಂಕ್ರಾಂತಿ ಹಬ್ಬದ ಆಚರಣೆಯನ್ನು ಮಾತ್ರ ನಿಲ್ಲಿಸುವುದಿಲ್ಲ. ಈ ಹಬ್ಬದ ಸಂದರ್ಶನದ ವೇಳೆನೇ ದರ್ಶನ್ ಅಭಿಮಾನಿಗಳ ಯೂಟ್ಯೂಬ್ ಚಾನೆಲ್ ತೂಗುದೀಪ ಡೈನೆಸ್ಟಿಯಲ್ಲಿ ತೋಟ ಹಾಗೂ ಅಲ್ಲಿರುವ ಪ್ರಾಣಿ, ಪಕ್ಷಿಗಳನ್ನು ಪರಿಚಯಿಸಿದ್ದಾರೆ. ಜೊತೆಗೆ ಬ್ಲ್ಯಾಕ್ ಮಾರ್ಕ್ ಬಗ್ಗೆನೂ ಮಾತಾಡಿದ್ದಾರೆ.

  ದರ್ಶನ್ ತೋಟದಲ್ಲಿ ಸಂದರ್ಶನ

  ದರ್ಶನ್ ತೋಟದಲ್ಲಿ ಸಂದರ್ಶನ

  ಸೆಲೆಬ್ರೆಟಿಗಳು ಸಂದರ್ಶನ ನೀಡುವಾಗ ಮೇಕಪ್ ಮಾಡಿಕೊಂಡು, ದುಬಾರಿ ಕಾಸ್ಟ್ಯೂಮ್ ಹಾಕೊಂಡು ರೆಡಿಯಾಗುತ್ತಾರೆ. ಆದರೆ, ಈ ದರ್ಶನ ಮಾತ್ರ ದರ್ಶನ್ ಅದ್ಯಾವುದನ್ನೂ ಮಾಡದೆ ನೈಜವಾಗಿಯೇ ಕಾಣಿಸಿಕೊಂಡಿದ್ದಾರೆ. ತೋಟದ ಮನೆಯಲ್ಲಿ ವಾಸ್ತವ್ಯ ಹೂಡಿದ್ದ ಚಾಲೆಂಜಿಂಗ್ ಸ್ಟಾರ್ ಫಾರ್ಮ್ ಹೌಸ್ ಪರಿಚಯ ಮಾಡಿಸಿದ್ದಲ್ಲದೆ, ಹಲವು ವಿಷಯಗಳನ್ನು ಇನ್‌ಫಾರ್ಮಲ್ ಆಗಿ ಅಭಿಮಾನಿಗಳೊಂದಿಗೆ ಚರ್ಚಿಸಿದ್ದಾರೆ.ಈ ವೇಳೆ ದರ್ಶನ್ ತನಗೆ ಬ್ಲ್ಯಾಕ್ ಮಾರ್ಕ್ ಇದೆ ಅನ್ನೋದನ್ನು ಚರ್ಚೆ ಮಾಡಿದ್ದಾರೆ.

  'ನನ್ನಷ್ಟು ಬ್ಲ್ಯಾಕ್ ಮಾರ್ಕ್ ಇರೋನು ಯಾರೂ ಇಲ್ಲ'

  'ನನ್ನಷ್ಟು ಬ್ಲ್ಯಾಕ್ ಮಾರ್ಕ್ ಇರೋನು ಯಾರೂ ಇಲ್ಲ'

  ಯೂಟ್ಯೂಬ್‌ ಚಾನೆಲ್‌ ಜೊತೆ ಮಾತಾಡುವಾಗ ದರ್ಶನ್ ತನ್ನ ಮೇಲೆ ಇರುವಷ್ಟು ಬ್ಲ್ಯಾಕ್ ಮಾರ್ಕ್ ಯಾರ ಮೇಲೂ ಇಲ್ಲ ಅಂತ ಹೇಳಿದ್ದಾರೆ. "ಹಿಟ್ ಸಿನಿಮಾ ಕೊಟ್ಟಿದ್ದೀನಿ.ಪ್ಲಾಪ್ ಸಿನಿಮಾಗಳನ್ನು ಕೊಟ್ಟಿದ್ದೀನಿ. ಡಬ್ಬಾ ಸಿನಿಮಾಗಳನ್ನು ಕೊಟ್ಟಿದ್ದೀನಿ. ಒಂದೇನಾಗುತ್ತೆ ಅಂದ್ರೆ.. ಅದಕ್ಕೆ ನನ್ನನ್ನು ನಾನು ನೋಡಿಕೊಳ್ಳುವುದಿಲ್ಲ.ನನ್ನಲ್ಲಿ ಏನು ನೋಡುತ್ತಾರೆ ಅಂತ ನಂಗೆ ಗೊತ್ತಿಲ್ಲವಲ್ಲ. ಆ ಮೇಲೆ ನನ್ನಷ್ಟು ಬ್ಲ್ಯಾಕ್ ಮಾರ್ಕ್ ಇರೋನು ಯಾರೂ ಇಲ್ಲ. ಇದ್ದಾರೆ ಸುಮಾರು ಜನ. ಆದರೆ, ನನ್ನಷ್ಟು ಬ್ಲ್ಯಾಕ್ ಮಾರ್ಕ್ ಇರೋರು ಯಾರು ಇಲ್ಲ. ಅದು ನನ್ನ ಬ್ಯಾಡ್ ಲಕ್‌ ಏನೋ ನನಗೆ ಗೊತ್ತಿಲ್ಲ." ಎಂದು ದರ್ಶನ್ ಹೇಳಿದ್ದಾರೆ.

  ಫ್ಯಾನ್ಸ್ ಹಾಗೂ ದರ್ಶನ್ ನಡುವೆ ಫಿಲ್ಟರ್ ಇಲ್ಲ

  ಫ್ಯಾನ್ಸ್ ಹಾಗೂ ದರ್ಶನ್ ನಡುವೆ ಫಿಲ್ಟರ್ ಇಲ್ಲ

  "ಒಂದು ಏನಂದ್ರೆ, ಸೆಲೆಬ್ರೆಟಿಗಳು(ಅಭಿಮಾನಿಗಳು) ಹಾಗೂ ನನ್ನ ನಡುವೆ ಫಿಲ್ಟರ್ ಇಲ್ಲ. ನಾನು ಹೆಂಗೆ ಇದ್ದಿನೋ ಹಂಗೆ ನೋಡುವುದಕ್ಕೆ ಇಷ್ಟ ಪಡುತ್ತಾರೆ. ಇದನ್ನೇ ಸಂದರ್ಶನ ಅಂತ ಮಾಡಿದ್ದರೆ, ನಾನು ಎದ್ದು ಸ್ನಾನ ಮಾಡಿ, ಕ್ಲೀನ್ ಆಗಿ, ಬ್ರೆಷ್ ಮಾಡಿ ಬರಬೇಕಿತ್ತು. ಈಗ ನೋಡಿ ನಾನು ಬ್ರೆಷ್ ಕೂಡ ಮಾಡಿಲ್ಲ." ಎಂದು ಅಭಿಮಾನಿಗಳ ಯೂಟ್ಯೂಬ್‌ ಚಾನೆಲ್‌ಗೆ ವಿಶೇಷ ಸಂದರ್ಶನ ನೀಡಿದ ವೇಳೆ ದರ್ಶನ್ ಮಾತಾಡಿದ್ದಾರೆ.

  ದರ್ಶನ್ 'ಕ್ರಾಂತಿ' ಹವಾ

  ದರ್ಶನ್ 'ಕ್ರಾಂತಿ' ಹವಾ

  ಚಾಲೆಂಜಿಂಗ್ ಸ್ಟಾರ್ ದರ್ಶನ್ 'ಕ್ರಾಂತಿ' ಸಿನಿಮಾ ಬಗ್ಗೆ ಬಹಳ ನಿರೀಕ್ಷೆಯಿದೆ. ಅಲ್ಲದೆ 2023ಯಲ್ಲಿ ರಿಲೀಸ್ ಆಗುತ್ತಿರುವ ಮೊದಲ ಸೂಪರ್‌ಸ್ಟಾರ್ ಸಿನಿಮಾ. ಹೀಗಾಗಿ ವರ್ಷದ ಆರಂಭದಲ್ಲಿಯೇ ಬಾಕ್ಸಾಫೀಸ್‌ನಲ್ಲಿ ದಾಖಲೆ ಬರೆಯೋದನ್ನು ನೋಡುವುದಕ್ಕೆ ದರ್ಶನ್ ಫ್ಯಾನ್ಸ್ ತುದಿಗಾಲಲ್ಲಿ ನಿಂತಿದ್ದಾರೆ. ಒಂದು ವೇಳೆ 'ಕ್ರಾಂತಿ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಜಾದು ಮಾಡಿದರೆ, ಸಿನಿಮಾ ಹೊಸ ಇತಿಹಾಸವನ್ನೇ ಸೃಷ್ಟಿಸಲಿದೆ.

  English summary
  "No one has a black mark like me. It's my bad luck," says Darshan, Know More.
  Thursday, January 19, 2023, 14:32
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X