twitter
    For Quick Alerts
    ALLOW NOTIFICATIONS  
    For Daily Alerts

    ಈ ಕಾರಣದಿಂದಲೇ 'ಕರ್ನಾಟಕ ರತ್ನ' ಕಾರ್ಯಕ್ರಮಕ್ಕೆ ಹೋಗಲ್ಲ ಎಂದು ಮುಂಚೆಯೇ ತಿಳಿಸಿದ್ರು ಸಿದ್ದರಾಮಯ್ಯ!

    |

    ಇಂದು ( ನವೆಂಬರ್ 1 ) ಬೆಂಗಳೂರಿನ ಭವ್ಯ ವಿಧಾನ ಸೌಧದ ಮುಂದೆ ಪುನೀತ್ ರಾಜ್‌ಕುಮಾರ್ ಅವರಿಗೆ ಪ್ರತಿಷ್ಠಿತ ಕರ್ನಾಟಕ ರತ್ನ ಪ್ರಶಸ್ತಿಯನ್ನು ಮರಣೋತ್ತರವಾಗಿ ಪ್ರದಾನ ಮಾಡಲಾಯಿತು. ಈ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಗಳನ್ನಾಗಿ ತೆಲುಗು ನಟ ಜೂನಿಯರ್ ಎನ್‌ಟಿಆರ್ ಹಾಗೂ ತಮಿಳು ಚಿತ್ರರಂಗದ ನಟ ರಜನಿಕಾಂತ್ ಹಾಗೂ ಸುಧಾ ಮೂರ್ತಿ ಆಗಮಿಸಿದ್ದರು.

    ಇನ್ನು ರಾಜ್ಯ ಸರ್ಕಾರದ ಹಲವು ಪ್ರಮುಖರು ಹಾಗೂ ಪುನೀತ್ ರಾಜ್‌ಕುಮಾರ್ ಕುಟುಂಬಸ್ಥರ ಸಮ್ಮುಖದಲ್ಲಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಪುನೀತ್ ರಾಜ್‌ಕುಮಾರ್ ಅವರಿಗೆ ಘೋಷಿಸಿದ್ದ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಪುನೀತ್ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಪ್ರಶಸ್ತಿಯನ್ನು ಸ್ವೀಕರಿಸಿದರು.

    ಕಾರ್ಯಕ್ರಮಕ್ಕೆ ಆಗಮಿಸಿದ್ದ ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್, ರಜನಿಕಾಂತ್, ಎನ್‌ಟಿಆರ್, ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವರು ಪುನೀತ್ ರಾಜ್‌ಕುಮಾರ್ ಕುರಿತು, ಕಾರ್ಯಕ್ರಮದ ಕುರಿತು ಮಾತನಾಡಿದರು. ಇನ್ನು ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳನ್ನಾಗಿ ವಿರೋಧ
    ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಲಾಗಿತ್ತು. ಆದರೆ ಸಿದ್ದರಾಮಯ್ಯ ಮಾತ್ರ ಈ ಕಾರ್ಯಕ್ರಮಕ್ಕೆ ಬರಲೇ ಇಲ್ಲ, ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ತಮ್ಮ ಹೆಸರನ್ನು ಹಾಕಿದ್ದರೂ ಸಹ ಸಿದ್ದರಾಮಯ್ಯ ಯಾಕೆ ಕಾರ್ಯಕ್ರಮಕ್ಕೆ ಆಗಮಿಸಲಿಲ್ಲ ಎಂಬ ಪ್ರಶ್ನೆ ಎದ್ದಿದ್ದು, ಸಿದ್ದರಾಮಯ್ಯ ಮುಂಚೆಯೇ ಈ ಕುರಿತಾಗಿ ಉತ್ತರವನ್ನು ನೀಡಿದ್ದರು.

    ಕಾರ್ಯಕ್ರಮಕ್ಕೆ ಬರದಿರಲು ಕಾರಣ ನೀಡಿದ ಸಿದ್ದರಾಮಯ್ಯ

    ಕಾರ್ಯಕ್ರಮಕ್ಕೆ ಬರದಿರಲು ಕಾರಣ ನೀಡಿದ ಸಿದ್ದರಾಮಯ್ಯ

    ಕಾರ್ಯಕ್ರಮ ನಡೆಯುವ ಮುನ್ನ ಮಧ್ಯಾಹ್ನದ ವೇಳೆ ಮಾಧ್ಯಮದವರ ಜತೆ ಮಾತನಾಡಿದ ಸಿದ್ದರಾಮಯ್ಯ ನಾನು ಕಾರ್ಯಕ್ರಮವನ್ನು ಅಟೆಂಡ್ ಮಾಡ್ತಿಲ್ಲ ಎಂದು ಹೇಳಿದರು. ತನಗೂ ಆಮಂತ್ರಣ ಬಂದಿದೆ, ಅದರಲ್ಲಿ ಅತಿಥಿ ಎಂದು ತನ್ನ ಹೆಸರನ್ನೂ ನಮೂದಿಸಿದ್ದಾರೆ, ಆದರೆ ಯಾರೂ ಸಹ ತನ್ನನ್ನು ಆಹ್ವಾನಿಸಿಲ್ಲ, ಆಮಂತ್ರಣ ಮುದ್ರಿಸುವ ಮುನ್ನ ತಮ್ಮ ಜತೆ ಚರ್ಚಸಿಲ್ಲ, ವಿಪಕ್ಷ ನಾಯಕನಾಗಿ ತಮಗೂ ಪ್ರೊಟೊಕಾಲ್ ಇರುತ್ತವೆಯಲ್ವ ಎಂದು ಸಿದ್ದರಾಮಯ್ಯ ತಿಳಿಸಿದರು.

    ಅಪ್ಪು ಕರ್ನಾಟಕ ರತ್ನ ಪಡೆಯಲು ಅರ್ಹ, ಕರೆದಿದ್ದರೆ ಹೋಗ್ತಿದ್ದೆ

    ಅಪ್ಪು ಕರ್ನಾಟಕ ರತ್ನ ಪಡೆಯಲು ಅರ್ಹ, ಕರೆದಿದ್ದರೆ ಹೋಗ್ತಿದ್ದೆ

    ಇನ್ನು ಇದೇ ವೇಳೆ ಪುನೀತ್ ರಾಜ್‌ಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡುತ್ತಿರುವುದ ಕುರಿತು ತಮಗೆ ಸಂತಸವಿದೆ ಹಾಗೂ ಆ ಮಹತ್ವದ ಪ್ರಶಸ್ತಿ ಪಡೆಯಲು ಅವರು ಅರ್ಹರು, ಅದನ್ನು ಸ್ವಾಗತಿಸುತ್ತೇನೆ ಎಂದೂ ಸಹ ಸಿದ್ದರಾಮಯ್ಯ ತಿಳಿಸಿದರು. ಅಷ್ಟೇ ಅಲ್ಲದೇ ಮೊದಲೇ ತಿಳಿಸಿದ್ದರೆ ಖಂಡಿತ ಕಾರ್ಯಕ್ರಮಕ್ಕೆ ಹೋಗುತ್ತಿದ್ದೆ ಎಂದು ಸಿದ್ದರಾಮಯ್ಯ ತಿಳಿಸಿದರು.

    ಕಾರ್ಯಕ್ರಮದ ಅತಿಥಿಗಳ ಪಟ್ಟಿ ಹೀಗಿತ್ತು

    ಕಾರ್ಯಕ್ರಮದ ಅತಿಥಿಗಳ ಪಟ್ಟಿ ಹೀಗಿತ್ತು

    ಪ್ರಶಸ್ತಿ ಪ್ರದಾನ: ಬಸವರಾಜ ಬೊಮ್ಮಾಯಿ, ಸನ್ಮಾನ್ಯ ಮುಖ್ಯಮಂತ್ರಿ

    ಗೌರವ ಉಪಸ್ಥಿತಿ: ಶ್ರೀ ರಘುನಾಥ್ ರಾವ್ ಮಲ್ಕಾಪುರೆ ( ಕರ್ನಾಟಕ ವಿಧಾನ ಪರಿಷತ್ ಸಭಾಪತಿಗಳು ), ವಿಶ್ವೇಶ್ವರ ಹೆಗಡೆ ಕಾಗೇರಿ ( ವಿಧಾನಸಭೆ ಸಭಾಧ್ಯಕ್ಷರು )

    ವಿಶೇಷ ಆಹ್ವಾನಿತರು: ತಮಿಳು ನಟ ರಜಿನಿಕಾಂತ್, ತೆಲುಗು ನಟ ಜೂನಿಯರ್ ಎನ್‌ಟಿಆರ್ ಹಾಗೂ ಡಾ. ಸುಧಾ ಮೂರ್ತಿ

    ಘನ ಉಪಸ್ಥಿತಿ: ಕಂದಾನ ಸಚಿವ ಆರ್ ಅಶೋಕ್, ಇಂಧನ ಸಚಿವ ವಿ ಸುನೀಲ್ ಕುಮಾರ್.

    ಮುಖ್ಯ ಅತಿಥಿಗಳು: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಬಿ.ಕೆ ಹರಿಪ್ರಸಾದ್ ಹಾಗೂ ಸಂಸದ ಪಿ.ಸಿ. ಮೋಹನ್.

    ಅಧ್ಯಕ್ಷತೆ: ರಿಜ್ವಾನ್ ಅರ್ಷದ್, ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಶಾಸಕರು

    ಸಂಜೆ 4 ಗಂಟೆಗೆ ಗಾಯಕ ವಿಜಯ್ ಪ್ರಕಾಶ್ ಮತ್ತು ತಂಡದವರಿಂದ ಸಾಂಸ್ಕೃತಿಕ ಕಾರ್ಯಕ್ರಮ

    English summary
    No one invited me so I am not attending Puneeth's Katnataka Ratna event says Siddaramaiah. Read on
    Tuesday, November 1, 2022, 19:58
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X