Don't Miss!
- Sports
IND vs NZ: ಮುಂದಿನ 2 ಪಂದ್ಯಗಳು ಈತನಿಗೆ ನಿರ್ಣಾಯಕ; ದಿನೇಶ್ ಕಾರ್ತಿಕ್ ಎಚ್ಚರಿಕೆ
- News
Breaking; ನಂದಿ ಹಿಲ್ಸ್ನಲ್ಲಿ ಸಿಲುಕಿದ್ದ ಇಬ್ಬರನ್ನು ರಕ್ಷಿಸಿದ 112 ತಂಡ
- Lifestyle
ಫೆಬ್ರವರಿ 2023: ಈ ಮಾಸದಲ್ಲಿರುವ ಪ್ರಮುಖ ಹಬ್ಬಗಳು ಹಾಗೂ ವ್ರತಗಳ ಪಟ್ಟಿ
- Technology
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- Finance
7th Pay Commission update news: ಕೇಂದ್ರ ಬಜೆಟ್ನಲ್ಲಿ 8ನೇ ವೇತನ ಆಯೋಗದ ಬಗ್ಗೆ ಘೋಷಣೆ?
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
"ನಮ್ಮಪ್ಪನ ಸಂಭಾವನೆ 10 ಸಾವಿರ ಅಷ್ಟೇ.. ವಿಲನ್‌ಗಳ ಮಕ್ಕಳಿಗೆ ಬೇರೆ ಯಾರೂ ಸಪೋರ್ಟ್ ಮಾಡಿಲ್ಲ"-ದರ್ಶನ್
ಚಾಲೆಂಜಿಂಗ್ ಸ್ಟಾರ್ ದರ್ಶನ್ 'ಕ್ರಾಂತಿ' ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾ ಬಿಡುಗಡೆಗೆ ಇನ್ನೂ ಎರಡು ತಿಂಗಳು ಬಾಕಿ ಉಳಿದಿದೆ. ಆಗಲೇ 'ಕ್ರಾಂತಿ' ಸಿನಿಮಾಗೆ ಪ್ರಚಾರ ಕೊಡಲು ಮುಂದಾಗಿದ್ದಾರೆ. ಇದೇ ತಮ್ಮ ಬದುಕಿನ ಕೆಲವು ಅಮೂಲ್ಯ ಘಟನೆಗಳನ್ನೂ ಹಂಚಿಕೊಳ್ಳುತ್ತಿದ್ದಾರೆ.
ಖಳನಾಯಕ ಮಕ್ಕಳು ಬೆಳೆಯಬೇಕು ಅನ್ನೋದು ದರ್ಶನ್ ವಾದ. ಹೀಗಾಗಿ 'ನವಗ್ರಹ'ದಂತಹ ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ವಿಲನ್‌ಗಳ ಮಕ್ಕಳ ಜೊತೆನೇ ಸಿನಿಮಾ ಮಾಡಿದ್ದರು. ಈಗಲೂ ತಮ್ಮ ಸಿನಿಮಾಗಳಲ್ಲಿ ಕನ್ನಡದ ವಿಲನ್ ಮಕ್ಕಳೊಂದಿಗೆ ಕೆಲಸ ಮಾಡುತ್ತಿದ್ದಾರೆ.
'ದಾಸ'
ದರ್ಶನ್
10ನೇ
ಕ್ಲಾಸ್ನಲ್ಲಿ
ಪಡೆದ
ಅಂಕ
ಎಷ್ಟು?
ಎಲ್ಲಾ
ವಿಷಯದಲ್ಲೂ
ಒಂದೇ
ಮಾರ್ಕ್ಸ್!
ಇತ್ತೀಚೆಗೆ ದರ್ಶನ್ ಫಿಲ್ಮ್ ಕಂಪಾನಿಯನ್ ಯೂಟ್ಯೂಬ್ ಚಾನೆಲ್‌ಗೆ ಸಂದರ್ಶನ ನೀಡಿದ್ದಾರೆ. ಈ ವೇಳೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಖಳನಾಯಕ ಮಕ್ಕಳಿಗೆ ಸಪೋರ್ಟ್ ಮಾಡುವುದು ಯಾಕೆ? ತಂದೆ ತೂಗುದೀಪ ಶ್ರೀವಾಸ್ ಪಡೆಯುತ್ತಿದ್ದ ಸಂಭಾವನೆ ಎಷ್ಟು ಅನ್ನೋದನ್ನು ರಿವೀಲ್ ಮಾಡಿದ್ದಾರೆ. ಅಲ್ಲದೆ ಖಳನಾಯಕ ಮಕ್ಕಳನ್ನು ಯಾರೂ ಬೆಳೆಸಿಲ್ಲ ಅನ್ನೋದನ್ನು ಹೇಳಿದ್ದಾರೆ. ಹೀಗೆ ಹೇಳಿದ್ದೇಕೆ ಅನ್ನೋದನ್ನು ತಿಳಿಯಲು ಮುಂದೆ ಓದಿ.

'ನಮಗೆ ಬೇರೆ ಯಾರೂ ಸಪೋರ್ಟ್ ಮಾಡಿಲ್ಲ'
ಸಿನಿಮಾ ಇಂಡಸ್ಟ್ರೀಯಲ್ಲಿ ಬೆಳೆಯಬೇಕು ಅಂದ್ರೆ ಸಿಕ್ಕಾಪಟ್ಟೆ ಕಷ್ಟ ಪಡೆಬೇಕು. ಎಲ್ಲರಿಗೂ ಇಲ್ಲಿ ಅವಕಾಶಗಳು ಸಿಗೋದಿಲ್ಲ ಅನ್ನೋ ರಹಸ್ಯವೇನು ಅಲ್ಲ. ಕಷ್ಟ ಪಟ್ಟವರಿಗೆ, ಅದೃಷ್ಟ ಇದ್ದರಿಗೆ ಬೆಂಬಲ ಸಿಕ್ಕೇ ಸಿಗುತ್ತೆ. ದರ್ಶನ್ ತಂದೆ ತೂಗುದೀಪ ಶ್ರೀ ನಿವಾಸ್ ಸೇರಿದಂತೆ ಅಂದಿನ ಕಾಲದ ಖಳನಾಯಕರ ಮಕ್ಕಳು ಚಿತ್ರರಂಗದಲ್ಲಿ ನೆಲೆಯೂರಲು ಪರದಾಡಿದ್ದನ್ನು ದರ್ಶನ್ ನೆನಪಿಸಿಕೊಂಡಿದ್ದಾರೆ. "ಹಳೇ ವಿಲನ್‌ಗಳು ಅಂದರೆ ನೀವು ಏನು ಅಂದುಕೊಂಡಿದ್ದೀರಾ? ಎಲ್ಲರೂ ಅರೋಡ್ಪತೀಸ್ ಕರೋಡ್ಬತೀಸ್. ಇಲ್ಲ ಅವರದ್ದು, ಮಧ್ಯಮ ವರ್ಗದಲ್ಲಿಯೇ ಮಧ್ಯಮ ವರ್ಗದ ಕುಟುಂಬಗಳು. ತರುಣ ಆಗಬಹುದು. ನಾನು ಆಗಬಹುದು ಎಲ್ಲಾರೂ ಮಧ್ಯವರ್ಗದವರೇ. ಅದಕ್ಕೆ ನಮ್ಮನ್ನು ನಾವು ಎತ್ಕೊಳ್ಬೇಕು. ನಾವು ನಾವೇ ಕೈ ಹಿಡ್ಕೊಂಡು ನಮ್ ನಮ್ಮ ಕೈಗಳನ್ನು ಇಟ್ಕೊಂಡು ಸಪೋರ್ಟ್ ಕೊಡುತ್ತಿರೋದು. ಬೇರೆ ಯಾರೂ ಸಪೋರ್ಟ್ ಕೊಡಲಿಲ್ಲ ನಮಗೆ." ಎಂದು ಸಂದರ್ಶನದ ವೇಳೆ ದರ್ಶನ್ ಹೇಳಿದ್ದಾರೆ.

'ಕಲಾವಿದರ ಮಕ್ಕಳಿಗೆ ಸಪೋರ್ಟ್ ಮಾಡೋಣ'
ಇನ್ನು ಕಲಾವಿದರ ಮಕ್ಕಳು ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ ಅಂದ್ರೆ ಒತ್ತಡ ಹೆಚ್ಚಿರುತ್ತೆ. ಅಮ್ಮ ಅಥವಾ ಅಮ್ಮ ಕಲಾವಿದರಾಗಿದ್ದರೆ, ಅವರನ್ನೂ ಮೀರಿಸುವಂತಹ ಕೆಲಸ ಮಾಡಬೇಕು. ಆ ಒತ್ತಡ ಎಲ್ಲಾ ಕಲಾವಿದರ ಮಕ್ಕಳಿಗೂ ಇದ್ದೇ ಇರುತ್ತೆ. ಇದನ್ನೇ ಸಂದರ್ಶನದಲ್ಲಿ ಬಿಡಿಸಿ ಹೇಳಿದ್ದಾರೆ. "ಕಲಾವಿದರ ಮಕ್ಕಳು ಕಲಾವಿದರು ಆಗ್ತಿದ್ದಾರೆ ಅಂದರೆ ಸಪೋರ್ಟ್ ಮಾಡೋಣ. ನಮ್ಮದೆಲ್ಲ ಮೈನಸ್ ಅದೇನೆ. ನಾವೆಲ್ಲ ಹೊಸದಾಗಿ ಬಂದಾಗ, ನಮ್ಮ ಹಿಂದೆ ನಮ್ಮ ತಂದೆಯನ್ನು ನೋಡಿದ್ರು. ಅವರು ಕಲೆಯನ್ನು ಮೀರಿಸಿ ನಾವು ಮುಂದೆ ಬರಬೇಕಿತ್ತು. ತಂದೆಯನ್ನು ಮೀರಿಸೋ ಮಗ ಅಂತ ಎಲ್ಲೂ ಹೇಳಲ್ಲ. ಈ ಇಂಡಸ್ಟ್ರಿಯಲ್ಲಿ ಮಾತ್ರ ಹೇಳುತ್ತಾರೆ." ಎಂದಿದ್ದಾರೆ ದರ್ಶನ್.

ನಮ್ಮ ಅಪ್ಪನ ಸಂಭಾವನೆ 10 ಸಾವಿರ ರೂ.
ಸಿನಿಮಾ ಸೂಟು ಬೂಟು ಹಾಕೊಂಡು ಬರೋ ಕಲಾವಿದರು ಸಂಭಾವನೆ ದೊಡ್ಡದಿರುತ್ತೆ. ಐಶಾರಾಮಿ ಜೀವನ ನಡೆಸುತ್ತಿರುತ್ತಾರೆ ಎಂದು ಎಲ್ಲರೂ ಭಾವಿಸುತ್ತಾರೆ. ಆದರೆ, ಅಂದು ಸ್ಟಾರ್ ನಟರನ್ನು ಬಿಟ್ಟು ಉಳಿದವರಿಗೆ ಸಿಗುವ ಸಂಭಾವನೆ ಕಡಿಮೆ ಇರುತ್ತಿತ್ತು. ಈ ವಿಷಯವನ್ನು ಪ್ರಸ್ತಾಪ ಮಾಡುತ್ತಲೇ ದರ್ಶನ್ ತಮ್ಮ ತಂದೆ ಪಡೆಯುತ್ತಿದ್ದ ಸಂಭಾವನೆಯನ್ನೂ ರಿವೀಲ್ ಮಾಡಿದ್ದಾರೆ. "ಒಂದು ಸಿನಿಮಾ ಸರ್.. 10 ಸಾವಿರ ರೂಪಾಯಿ ಸಂಭಾವನೆ. ಎಲ್ಲಿಗೆ ಆಗುತ್ತೆ. ಮೂರು ಜನ ಮಕ್ಕಳು, ಹೆಂಡ್ತಿ, ಅವರ ಖರ್ಚು ಎಲ್ಲಾ ಇತ್ತು. ನೀವು ಸಿನಿಮಾದಲ್ಲಷ್ಟೇ ಸೂಟ್ ಎಲ್ಲಾ ಹಾಕೊಂಡು ಸಖತ್ತಾಗಿ ಇರುತ್ತಾರೆ ಅಂದ್ಕೊಂಡಿರಬಹುದು. ಪಾಪಾ ಮನೆಯಲ್ಲಿ ಅವರ ಪರಿಸ್ಥಿತಿ ಅವರಿಗೆ ತಾನೇ ಗೊತ್ತು. " ಎಂದು ಸಂದರ್ಶನದಲ್ಲಿ ಮಾಹಿತಿ ನೀಡಿದ್ದಾರೆ.

ದರ್ಶನ್ ಅಕ್ಷರ 'ಕ್ರಾಂತಿ'
ಚಾಲೆಂಜಿಸ್ಟಾರ್ ದರ್ಶನ್ ಸಿನಿಮಾ ಬಹಳ ದಿನಗಳ ಬಳಿಕ ರಿಲೀಸ್ ಆಗುತ್ತಿದೆ. ಹೀಗಾಗಿ ದರ್ಶನ್ ಕೂಡ 'ಕ್ರಾಂತಿ' ಸಿನಿಮಾ ಪ್ರಚಾರವನ್ನು ಭರ್ಜರಿಯಾಗಿಯೇ ಮಾಡುತ್ತಿದ್ದಾರೆ. ಸಂಗೀತ ನಿರ್ದೇಶಕ ವಿ. ಹರಿಕೃಷ್ಣ ಅಕ್ಷನ್ ಕಟ್ ಹೇಳಿರೋ ಈ ಸಿನಿಮಾ ಈಗಾಗಲೇ ಕುತೂಹಲವನ್ನು ಕೆರಳಿಸುತ್ತಿದೆ. ಅಲ್ಲದೆ. ಮೊದಲು ಹಾಡು ಇನ್ನೇನು ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿದೆ. ಜನವರಿ 26ರಂದು 'ಕ್ರಾಂತಿ' ಸಿನಿಮಾ ರಿಲೀಸ್ ಆಗುತ್ತಿದ್ದು, ಬಾಕ್ಸಾಫೀಸ್‌ನಲ್ಲಿಸ ರೆಸ್ಪಾನ್ಸ್ ಹೇಗಿರುತ್ತೆ ಅನ್ನೋದನ್ನು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.