»   » ಮಾರ್ಚ್ 1ರಿಂದ ತಮಿಳುನಾಡಿನಲ್ಲಿ ಯಾವುದೇ ಸಿನಿಮಾ ಬಿಡುಗಡೆಯಾಗಲ್ಲ.!

ಮಾರ್ಚ್ 1ರಿಂದ ತಮಿಳುನಾಡಿನಲ್ಲಿ ಯಾವುದೇ ಸಿನಿಮಾ ಬಿಡುಗಡೆಯಾಗಲ್ಲ.!

Posted By:
Subscribe to Filmibeat Kannada

ಮಾರ್ಚ್ 1 ರಿಂದ ತಮಿಳುನಾಡಿನಲ್ಲಿ ಯಾವುದೇ ಹೊಸ ಸಿನಿಮಾಗಳು ಬಿಡುಗಡೆಯಾಗುವುದಿಲ್ಲ. ಕನ್ನಡ, ತೆಲುಗು, ಮಲಯಾಳಂ ಹಾಗೂ ತಮಿಳು ಚಿತ್ರಗಳು ಸೇರಿದಂತೆ ಇನ್ನಿತರ ಯಾವುದೇ ಭಾಷೆಯ ಚಿತ್ರಗಳು ಕೂಡ ರಿಲೀಸ್ ಆಗುವುದಿಲ್ಲ.

ಹೀಗಂತ ಸ್ವತಃ ತಮಿಳು ಚಲನಚಿತ್ರ ನಿರ್ಮಾಪಕರ ಸಂಘ ತಿಳಿಸಿದೆ. ಹೌದು, ಯುಎಫ್ಓ ಕ್ಯೂಬ್ ಮತ್ತು digital service provider ಸಂಸ್ಥೆಯ ವಿರುದ್ಧ ತಮಿಳುನಾಡಿನಲ್ಲಿ ನಿರ್ಮಾಪಕರ ಸಂಘ ಪ್ರತಿಭಟನೆ ಮಾಡುತ್ತಿದ್ದು, ಬಾಡಿಗೆ ಮೊತ್ತ ಕಡಿಮೆ ಮಾಡಬೇಕು ಎಂದು ಒತ್ತಾಯಿಸುತ್ತಿದೆ. ಹೀಗಾಗಿ, ಮಾರ್ಚ್ 1ರ ನಂತರ ಯಾವುದೇ ಹೊಸ ಸಿನಿಮಾಗಳು ತಮಿಳುನಾಡಿನಲ್ಲಿ ಬಿಡುಗಡೆಯಾಗುವುದಿಲ್ಲ ಎಂದು ಹೇಳಿದೆ.

ಸದ್ಯ, ಪ್ರದರ್ಶನವಾಗುತ್ತಿರುವ ಚಿತ್ರಗಳು ಮಾತ್ರ ಮುಂದುವರೆಯಲಿದ್ದು, ಹೊಸ ಸಿನಿಮಾಗಳು ರಿಲೀಸ್ ಆಗುವುದಿಲ್ಲ. ಇನ್ನು ಮಾರ್ಚ್ 1ರ ನಂತರ ತಮಿಳು ಚಿತ್ರಗಳು ಬೇರೆ ರಾಜ್ಯಗಳಲ್ಲೂ ಬಿಡುಗಡೆಯಾಗುವುದು ಅನುಮಾನವೆನ್ನಲಾಗಿದೆ. ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ ಮತ್ತು ಕೇರಳದಲ್ಲಿರುವ ನಿರ್ಮಾಪಕರ ಜೊತೆಯಲ್ಲೂ ಈ ಬಗ್ಗೆ ಮಾತುಕತೆ ನಡೆಸಲು ಮುಂದಾಗಿದೆ.

No Tamil Films will be released from March 1

ಅಷ್ಟರೊಳಗೆ ಏನಾದರೂ ಸಂಧಾನವಾದರೇ, ಎಂದಿನಂತೆ ಸಿನಿಮಾ ಪ್ರದರ್ಶನವಾಗುವ ಸಾಧ್ಯತೆ ಇದೆ. ಇಲ್ಲವಾದಲ್ಲಿ, ತಮಿಳುನಾಡು ಚಲನಚಿತ್ರೋಧ್ಯಮ ಬೀದಿಗಿಳಿದು ಹೋರಾಟ ಮಾಡುವ ಸಾಧ್ಯತೆ ಇದೆ.

English summary
Tamil Film Producers Council is most likely to strike from March 1, condemning the high rental prices of QUBE and UFO. Now, it has been officially confirmed through a press statement from TFPC.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada