'ಮೈತ್ರಿ' ವಿತರಣೆ ಹಕ್ಕುಗಳು ಕೊಂಡುಕೊಳ್ಳೊರೇ ಇರಲಿಲ್ಲ!
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಿನಿಮಾ ಬರುತ್ತೆ ಅಂದ್ರೆ ಸಾಕು ವಿತರಕರು ಸ್ಪರ್ಧೆಗೆ ಬಿದ್ದು ಸಿನಿಮಾ ಕೊಂಡುಕೊಳ್ತಾರೆ. ಥಿಯೇಟರ್ ಮಾಲೀಕರು ಮುಗಿಬಿದ್ದು ಥಿಯೇಟರ್ ಕೊಡ್ತಾರೆ. ಯಾಕಂದ್ರೆ ಪುನೀತ್ ಸಿನಿಮಾ ಅಂದ್ರೆ ಬಾಕ್ಸಾಫೀಸ್ ಚಿಂದಿಯಾಗೋದ್ರಲ್ಲಿ ಅನುಮಾನವಿಲ್ಲ.
ಆದ್ರೆ ಅಂತಹಾ ಪುನೀತ್ ಸಿನಿಮಾಗೇನೇ ಥಿಯೇಟರ್ ಇಲ್ಲದಿರೋ ಪರಿಸ್ಥಿತಿ ಬಂದಿತ್ತಂತೆ. ಈಗ ಚಿತ್ರ ರಿಲೀಸಾಗಿದೆ. ಚಿತ್ರ ಎಲ್ಲ ಕಡೆಗಳಲ್ಲೂ ಭರ್ಜರಿ ಯಶಸ್ಸು ಪಡ್ಕೋತಿದೆ. ಆದರೂ ಮಲ್ಟಿಪ್ಲೆಕ್ಸ್ ಗಳಲ್ಲಿ ಮಾತ್ರ 'ಮೈತ್ರಿ' ಸಿನಿಮಾ ಸೇಫ್. [ಮೈತ್ರಿ ಚಿತ್ರ ವಿಮರ್ಶೆ]

ಅಚ್ಚರಿಯ ವಿಚಾರ ಅಂದ್ರೆ ಸಿನಿಮಾ ಸಕ್ಸಸ್ ಪಡ್ಕೊಳ್ತಿದ್ರೂ ಚಿತ್ರಮಂದಿರಗಳನ್ನ ಹೆಚ್ಚಿಸಿಕೊಳ್ತಿಲ್ಲ ಚಿತ್ರತಂಡ. ಮುಂದಿನ ದಿನಗಳಲ್ಲಿ ಚಿತ್ರಮಂದಿರಗಳನ್ನ ಕಡಿಮೆ ಮಾಡಿಕೊಳ್ತಿದೆ. ಹಾಗಾಗಿ 'ಮೈತ್ರಿ' ಸಿನಿಮಾ ಚೆನ್ನಾಗಿದೆ ಅಂತ ನೀವು ಸಿನಿಮಾ ನೋಡೋಕೆ ಥಿಯೇಟರ್ ಗೆ ಹೊರಟ್ರೆ ನಿಮ್ಮ ಏರಿಯಾದಲ್ಲಿ ಆ ಸಿನಿಮಾ ಇದೆಯಾ ಅನ್ನೋದನ್ನ ನೋಡಿಕೊಂಡು ಹೋಗಿ.
More from Filmibeat
English summary
Even super star movies are facing theatre problem in Sandalwood. Power Star Puneeth Rajkumar and the complete actor Mohanlal lead movie 'Mythri' is facing theatre problem in Bengaluru and all over the state. But the movie is safe in multiplex theatres.


Click it and Unblock the Notifications











