»   » ಅಯ್ಯೋ...! ಯಾಕೋ ಈ ವರ್ಷ ರಾಗಿಣಿ ದ್ವಿವೇದಿ ಹಣೆ ಬರಹ ಸರಿ ಇಲ್ಲ ಬಿಡಿ

ಅಯ್ಯೋ...! ಯಾಕೋ ಈ ವರ್ಷ ರಾಗಿಣಿ ದ್ವಿವೇದಿ ಹಣೆ ಬರಹ ಸರಿ ಇಲ್ಲ ಬಿಡಿ

Posted By:
Subscribe to Filmibeat Kannada

ಸದ್ಯ ಕನ್ನಡದ ಟಾಪ್ ನಟಿಯರ ಪಟ್ಟಿ ಮಾಡುತ್ತಾ ಬಂದರೆ ಅಲ್ಲಿ ರಾಗಿಣಿ ದ್ವಿವೇದಿ ಅವರ ಹೆಸರು ಬಂದೆ ಬರುತ್ತದೆ. 'ವೀರ ಮದಕರಿ'ಯ ರಾಣಿಯಾಗಿ ಚಿತ್ರರಂಗಕ್ಕೆ ಬಂದ ಈ ಹುಡುಗಿ ಮುಂದೆ ತುಪ್ಪದ ಬೆಡಗಿ ಅಂತ್ತಾನೆ ಫೇಮಸ್ ಆದರು.

ಅದೇನೇ ಇದ್ದರೂ ಈಗ ಯಾಕೋ ರಾಗಿಣಿ ಟೈಂ ಸರಿ ಇಲ್ಲ ಎನಿಸುತ್ತಿದೆ. ಯಾಕಂದರೆ ಒಂದು ಕಾಲದಲ್ಲಿ ರಾಗಿಣಿ ಅವರ ಮೂರು ನಾಲ್ಕು ಸಿನಿಮಾಗಳು ವರ್ಷಕ್ಕೆ ಬಿಡುಗಡೆಯಾಗುತ್ತಿತ್ತು. ಆದರೆ ಈ ವರ್ಷ ರಾಗಿಣಿ ಅವರ ಒಂದೇ ಒಂದು ಸಿನಿಮಾವೂ ರಿಲೀಸ್ ಆಗಿಲ್ಲ. ಹಾಗಂತ ರಾಗಿಣಿಗೆ ಸಿನಿಮಾ ಆಫರ್ ಇಲ್ಲ ಅಂತ ಅಲ್ಲ. ರಾಗಿಣಿ ಕೈ ತುಂಬ ಅವಕಾಶಗಳು ಇದೆ. ಆದರೆ ಅವರ ಸಿನಿಮಾಗಳಿಗೆ ಮಾತ್ರ ರಿಲೀಸ್ ಭಾಗ್ಯವೇ ಸಿಗುತ್ತಿಲ್ಲ.

ಅಂದಹಾಗೆ ಇನ್ನು ಬಿಡುಗಡೆಗೆ ಎಣಗಾಡುತ್ತಿರುವ ರಾಗಿಣಿ ಅವರ ಸಿನಿಮಾಗಳು ಪಟ್ಟಿ ಮುಂದಿದೆ ಓದಿ..

'ರಣಚಂಡಿ'

ರಾಗಿಣಿ ಅವರ 'ರಣಚಂಡಿ' ಸಿನಿಮಾದ ಆಡಿಯೋ ಬಿಡುಗಡೆಯಾಗಿ ವರ್ಷಗಳೆ ಕಳೆಯಿತು. ಆದರೆ ಇದುವರೆಗೂ ಸಿನಿಮಾ ರಿಲೀಸ್ ಬಗ್ಗೆ ಚಿತ್ರತಂಡ ತುಟುಕ್ ಪಿಟುಕ್ ಎಂದಿಲ್ಲ.

ನಾನೇ ನೆಕ್ಟ್ ಸಿಎಂ

'ನಾನೇ ನೆಕ್ಟ್ ಸಿಎಂ' ಸಿನಿಮಾ ಕೂಡ ರಿಲೀಸ್ ಗೆ ರೆಡಿ ಇದೆ. ಮುಸ್ಸಂಜೆ ಮಹೇಶ್ ಆಕ್ಷನ್ ಕಟ್ ಹೇಳಿರುವ ಈ ಚಿತ್ರ ಕೂಡ ರಿಲೀಸ್ ಗೆ ಒದ್ದಾಟ ನಡೆಸಿದೆ.

ಗಾಂಧಿಗಿರಿ

ಜೋಗಿ ಪ್ರೇಮ್ ನಟನೆಯ 'ಗಾಂಧಿಗಿರಿ' ಸಿನಿಮಾದಲ್ಲಿ ರಾಗಿಣಿ ಟೀಚರ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಚಿತ್ರೀಕರಣ ಕೂಡ ಶುರುವಾಗಿ ಹತ್ತಿರತ್ತಿರ ವರ್ಷವೇ ಕಳೆಯಿತು.

'ಕಿಚ್ಚು'

'ಕಿಚ್ಚು' ಎನ್ನುವ ವಿಭಿನ್ನ ಸಿನಿಮಾದಲ್ಲಿ ರಾಗಿಣಿ ನಟಿಸಿದ್ದರು. ಆದರೆ ಈ ಚಿತ್ರದ ಶೂಟಿಂಗ್ ಎಲ್ಲಿಗೆ ಬಂತು ಎನ್ನುವುದು ದೇವರಿಗೆ ಗೊತ್ತು.

'ಅಮ್ಮ'

ಈ ಹಿಂದೆಯೇ ಶುರುವಾಗಿದ್ದ ರಾಗಿಣಿ ನಟನೆಯ 'ಅಮ್ಮ' ಸಿನಿಮಾ ಚಿತ್ರೀಕರಣಕ್ಕೆ ಇನ್ನು ಚಾಲನೆಯೇ ಸಿಕಿಲ್ಲ.

ಒಂದೇ ದಿನ 3 ಚಿತ್ರಗಳು ಸೆಟ್ಟೇರಿತ್ತು

ಇವುಗಳ ಜೊತೆಗೆ ಒಂದೇ ದಿನ ರಾಗಿಣಿ ಅವರ ಮೂರು ಹೊಸ ಸಿನಿಮಾಗಳು ಸೆಟ್ಟೇರಿತ್ತು. ಇವುಗಳ ಪೈಕಿ ಮುಸ್ಸಂಜೆ ಮಹೇಶ್ ಎರಡು ಚಿತ್ರಗಳನ್ನು ನಿರ್ದೇಶನ ಮಾಡುತ್ತಿದ್ದಾರೆ. ಆದರೆ ಈ ಚಿತ್ರದ ಶೂಟಿಂಗ್ ಬಗ್ಗೆಯೂ ಯಾವುದೇ ಸುದ್ದಿ ಕೇಳಿ ಬಂದಿಲ್ಲ.

ಕೊನೆಯದಾಗಿ ನಟಿಸಿದ್ದು

ರಾಗಿಣಿ ನಟನೆಯಲ್ಲಿ ಈ ವರ್ಷ ಯಾವುದು ಚಿತ್ರ ಬಿಡುಗಡೆಯಾಗಿಲ್ಲ. ಕೊನೆಯದಾಗಿ ಕಳೆದ ವರ್ಷ 'ಪರಪಂಚ' ಚಿತ್ರದಲ್ಲಿ ರಾಗಿಣಿ ಅಭಿನಯಿಸಿದ್ದರು.

English summary
None of 'Ragini Dwivedi' films has been released this year
Please Wait while comments are loading...