»   » 'ಗಾಂಧಿ'ಯಾಗಿ ಬದಲಾದ ಜೋಗಿ ಪ್ರೇಮ್ 'ಹಿಟ್ಲರ್'

'ಗಾಂಧಿ'ಯಾಗಿ ಬದಲಾದ ಜೋಗಿ ಪ್ರೇಮ್ 'ಹಿಟ್ಲರ್'

Posted By:
Subscribe to Filmibeat Kannada

ಅಂತೂ ಗಾಂಧಿನಗರದಲ್ಲಿ ಟೈಟಲ್ ಸಮಸ್ಯೆ ಒಂದಕ್ಕೆ ಮುಕ್ತಿ ಸಿಕ್ಕಿದೆ. ನಿರ್ದೇಶಕ ಪ್ರೇಮ್ 'ಹಿಟ್ಲರ್' ನಂತೆ ಹಠ ಮಾಡದೆ, 'ಗಾಂಧಿ' ತತ್ವ ಅನುಸರಿಸಿದ್ದಾರೆ. ಅರ್ಥಾತ್, 'ಹಿಟ್ಲರ್' ಟೈಟಲ್ ಬಿಟ್ಟುಕೊಟ್ಟು 'ಗಾಂಧಿಗಿರಿ' ಶೀರ್ಷಿಕೆ ಫಿಕ್ಸ್ ಮಾಡಿದ್ದಾರೆ.

ನಿಮಗೆಲ್ಲರಿಗೂ ನಾವೇ ಹೇಳಿದ ಹಾಗೆ, ರಘು ಹಾಸನ್ ನಿರ್ದೇಶನದಲ್ಲಿ 'ಜೋಗಿ' ಪ್ರೇಮ್ ಅಭಿನಯಿಸಲಿರುವ ಹೊಸ ಸಿನಿಮಾ 'ಹಿಟ್ಲರ್'. ಆದ್ರೆ, ವರ್ಷಗಳ ಹಿಂದೆ 'ಹಿಟ್ಲರ್' ಅನ್ನುವ ಶೀರ್ಷಿಕೆ ರಿಜಿಸ್ಟರ್ ಮಾಡಿಸಿ, ಸುದೀಪ್ ಕೈಲಿ ಚಿತ್ರ ಮಾಡಿಸಬೇಕು ಅಂತ ಟೇಶಿ ವೆಂಕಟೇಶ್ ಸಿದ್ದತೆ ನಡೆಸುತ್ತಿದ್ದರು. [ಪ್ರೇಮ್ 'ಹಿಟ್ಲರ್'ಗೆ ಜತೆಯಾದ ಶರ್ಮಿಳಾ ಮಾಂಡ್ರೆ]


Not Hitler, Gandhigiri for Jogi Prem

ಇತ್ತ ಪ್ರೇಮ್ 'ಹಿಟ್ಲರ್' ಅನೌನ್ಸ್ ಮಾಡ್ತಿದ್ದಂತೆ ವಾಣಿಜ್ಯ ಮಂಡಳಿ ಮೆಟ್ಟಿಲೇರಿದ ವೆಂಕಟೇಶ್, ಟೈಟಲ್ ಬಿಟ್ಟುಕೊಡುವುದಿಲ್ಲ ಪಟ್ಟು ಹಿಡಿದರು. ಇಬ್ಬರ ಮಧ್ಯೆ ಸಂಧಾನ ಮಾತುಕತೆ ಕೂಡ ಯಶಸ್ವಿ ಆಗಲಿಲ್ಲ. ಅತ್ತ ವಾಣಿಜ್ಯ ಮಂಡಳಿ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಾರದ ಕಾರಣ ಈಗ ಪ್ರೇಮ್ ಅಭಿನಯಿಸಲಿರುವ ಚಿತ್ರಕ್ಕೆ ಹೊಸ ಶೀರ್ಷಿಕೆ ಇಡಲಾಗಿದೆ. ಅದೇ 'ಗಾಂಧಿಗಿರಿ'. [ಸುದೀಪ್ Vs ಪ್ರೇಮ್ ಸ್ಯಾಂಡಲ್ ವುಡ್ 'ಹಿಟ್ಲರ್' ಯಾರು?]


'ಹಿಟ್ಲರ್' ಗೂ...'ಗಾಂಧಿಗಿರಿ'...ಗೂ ಎಲ್ಲಿಗೆಲ್ಲಿಯ ಸಂಬಂಧ ಅಂತ ನೀವು ಕೇಳಬಹುದು. ಇದೇ ಪ್ರಶ್ನೆಯನ್ನ ನಾವು ನಿರ್ದೇಶಕ ರಘು ಹಾಸನ್ ಮುಂದೆ ಇಟ್ಟಾಗ, ''ಸಿನಿಮಾದಲ್ಲಿ ಹಿಟ್ಲರ್ ವಾದವೂ ಇದೆ, ಗಾಂಧಿಗಿರಿ ತತ್ವವೂ ಇದೆ. ಹಿಂಸೆ ನೀಡಿದವರು ಶಾಂತರಾಗಲ್ಲ, ಅಹಿಂಸಾ ತತ್ವ ಪಾಲಿಸಲ್ಲ ಅಂತ ಏನೂ ಇಲ್ಲವಲ್ಲ. ನಮ್ಮ ಹೀರೋನೂ ಹಾಗೆ. ಅದಕ್ಕೆ ಈ ಟೈಟಲ್ ಫಿಕ್ಸ್ ಮಾಡಿದ್ದೀವಿ'' ಅಂತ ಉತ್ತರ ಕೊಟ್ಟರು.


Not Hitler, Gandhigiri for Jogi Prem

ಈಗಾಗಲೇ ರಿಲೀಸ್ ಆಗಿರುವ ಪೋಸ್ಟರ್ ಗಳಲ್ಲಿ ಪ್ರೇಮ್ 'ಹಿಟ್ಲರ್' ಸ್ಟೈಲ್ ನಲ್ಲಿ ಖಡಕ್ ಆಗಿ ಪೋಸ್ ಕೊಟ್ಟಿದ್ದಾರೆ. ಇದೇ ತಿಂಗಳ 20 ರಂದು ಚಿತ್ರದ ಮುಹೂರ್ತ ನೆರವೇರಲಿದ್ದು, ಮೇ 1 ರಿಂದ ಶೂಟಿಂಗ್ ಶುರುವಾಗಲಿದೆ. ['ಜೋಗಿ'ಗೆ ಮತ್ತೆ ಅಮ್ಮನಾದ ಅರುಂಧತಿ ನಾಗ್..!]


ಪ್ರೇಮ್ ಜೊತೆ ಶರ್ಮಿಳಾ ಮಾಂಡ್ರೆ ನಾಯಕಿಯಾಗಿ ಕಾಣಿಸಿಕೊಂಡರೆ, ತಾಯಿ ಪಾತ್ರದಲ್ಲಿ ಅರುಂಧತಿ ನಾಗ್ ಅಭಿನಯಿಸಲಿದ್ದಾರೆ. ಅಲ್ಲಿಗೆ, ಗಾಂಧಿನಗರದಲ್ಲಿ ಮೇ ತಿಂಗಳಿನಿಂದ ಹೊಸ ಗಾಂಧಿಗಿರಿ ಹವಾ ಶುರು. (ಫಿಲ್ಮಿಬೀಟ್ ಕನ್ನಡ)

English summary
'Jogi' Prem starrer upcoming movie 'Hitler' created a title controversy. Now the team has changed the title from 'Hitler' to 'Gandhigiri'. Director Raghu Hassan confirms this news to 'Filmibeat Kannada'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada