»   » ಕರ್ನಾಟಕದಲ್ಲಿ 'ಕಬಾಲಿ' ಗಿಂತ 'ನಾಗರಹಾವು' ಟ್ರೆಂಡಿಂಗ್.!

ಕರ್ನಾಟಕದಲ್ಲಿ 'ಕಬಾಲಿ' ಗಿಂತ 'ನಾಗರಹಾವು' ಟ್ರೆಂಡಿಂಗ್.!

Posted By:
Subscribe to Filmibeat Kannada

ಸೂಪರ್ ಸ್ಟಾರ್ ರಜನಿಕಾಂತ್ ಸಿನಿಮಾ ಬಿಡುಗಡೆ ಆಗುತ್ತೆ ಅಂದ್ರೆ, ಕಾಲಿವುಡ್ ನಲ್ಲಿ ಅಕ್ಷರಶಃ 'ಪೊಂಗಲ್' ಹಬ್ಬ ಆಚರಿಸಿದ ಹಾಗೆ.

'ತಲೈವಾ' ಚಿತ್ರಕ್ಕಾಗಿ ಬಕಪಕ್ಷಿಗಳಂತೆ ಕಾಯುವ ಅಭಿಮಾನಿಗಳು ಬರೀ ತಮಿಳುನಾಡಿನಲ್ಲಿ ಮಾತ್ರ ಅಲ್ಲ. ಇಡೀ ಭಾರತದಲ್ಲಿ, ಅಷ್ಟೇ ಯಾಕೆ ವಿದೇಶಗಳಲ್ಲೂ ರಜನಿ 'ಭಕ್ತ'ರು ಇದ್ದಾರೆ.


ಸದ್ಯದಲ್ಲೇ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ಸಿನಿಮಾ 'ಕಬಾಲಿ' ಬಿಡುಗಡೆ ಆಗಲಿದೆ. 'ಕಬಾಲಿ' ಚಿತ್ರವನ್ನು ಕಣ್ತುಂಬಿಕೊಳ್ಳುವುದಕ್ಕೆ ಎಲ್ಲೆಡೆ ಪ್ರೇಕ್ಷಕರು ತುದಿಗಾಲಲ್ಲಿ ನಿಂತಿರಬಹುದು. ಆದ್ರೆ, ಕರ್ನಾಟಕದಲ್ಲಿ 'ಕಬಾಲಿ' ಚಿತ್ರಕ್ಕಿಂತ 'ನಾಗರಹಾವು' ಸಿನಿಮಾಗೆ ಪ್ರೇಕ್ಷಕರು ಹೆಚ್ಚು ಒಲವು ತೋರಿದ್ದಾರೆ ಅಂದ್ರೆ ನೀವು ನಂಬಲೇಬೇಕು. ['ಬಾಹುಬಲಿ' ಚಿತ್ರಕ್ಕೆ ಸವಾಲ್ ಹಾಕಿದ ಕನ್ನಡದ 'ನಾಗರಹಾವು'.!]


ಸಾಮಾಜಿಕ ಜಾಲತಾಣ ಹಾಗೂ ಆನ್ ಲೈನ್ ನಲ್ಲಿ ನಡೆದಿರುವ ಸಮೀಕ್ಷೆಯೊಂದರ ಪ್ರಕಾರ ಕರ್ನಾಟಕದ ಜನತೆ 'ಕಬಾಲಿ' ಚಿತ್ರಕ್ಕಿಂತ 'ನಾಗರಹಾವು' ಚಿತ್ರವನ್ನು ವೀಕ್ಷಿಸುವುದಕ್ಕೆ ಹೆಚ್ಚು ಉತ್ಸುಕರಾಗಿದ್ದಾರೆ. ಮುಂದೆ ಓದಿ....


ಬುಕ್ ಮೈ ಶೋ ನಲ್ಲೂ ಟ್ರೆಂಡಿಂಗ್.!

'ಕಬಾಲಿ' ಚಿತ್ರದ ಬಿಡುಗಡೆ ಜುಲೈ 15ಕ್ಕೆ ನಿಗದಿ ಆಗಿದೆ. ಸಹಜವಾಗಿ 'ಬುಕ್ ಮೈ ಶೋ' ವೆಬ್ ತಾಣದಲ್ಲಿ 'ಕಬಾಲಿ' ಚಿತ್ರ ಟ್ರೆಂಡಿಂಗ್ ನಲ್ಲಿದೆ. ಇಲ್ಲಿ ಇನ್ನೊಂದು ಆಶ್ಚರ್ಯಕರ ವಿಚಾರ ನಿಮಗೆ ಹೇಳಲೇಬೇಕು. 'ನಾಗರಹಾವು' ಚಿತ್ರದ ಬಿಡುಗಡೆ ದಿನಾಂಕ ಇನ್ನೂ ನಿಗದಿ ಆಗಿಲ್ಲ. ಹಾಗಿದ್ದರೂ, 'ಬುಕ್ ಮೈ ಶೋ'ನಲ್ಲಿ 'ನಾಗರಹಾವು' ಕೂಡ ಟ್ರೆಂಡಿಂಗ್ ಲಿಸ್ಟ್ ನಲ್ಲಿದೆ. [ಡಾ.ವಿಷ್ಣು 'ನಾಗರಹಾವು' ನೋಡಲು ತುದಿಗಾಲಲ್ಲಿ ನಿಂತಿರುವ 'ಸಿಂಗಂ' ಸೂರ್ಯ]


ಕಾರಣ ಏನಿರಬಹದು.?

'ನಾಗರಹಾವು' ಸಿನಿಮಾ ಬಗ್ಗೆ ಪ್ರೇಕ್ಷಕರಲ್ಲಿ ಅಪಾರ ಆಸಕ್ತಿ ಮೂಡಲು ಏಕೈಕ ಕಾರಣ ಅಂದ್ರೆ ಅದು ಡಾ.ವಿಷ್ಣುವರ್ಧನ್. ಆರುವರೆ ವರ್ಷಗಳ ಹಿಂದೆ ಕೊನೆಯುಸಿರೆಳೆದಿದ್ದ ಡಾ.ವಿಷ್ಣುವರ್ಧನ್ ರನ್ನ ಗ್ರಾಫಿಕ್ಸ್ ಬಳಕೆಯಿಂದ 'ನಾಗರಹಾವು' ಚಿತ್ರದ ಮೂಲಕ ತೆರೆಮೇಲೆ ತರುವ ಪ್ರಯತ್ನ ಮಾಡಲಾಗಿದೆ. [ವಿಷ್ಣುದಾದಾ 201ನೇ ಚಿತ್ರದಲ್ಲಿ 120 ಅಡಿ ನಾಗಿಣಿಯಾದ ರಮ್ಯಾ]


ತೆರೆಮೇಲೆ ವಿಷ್ಣು ಹೇಗೆ ಕಾಣಿಸಬಹುದು.?

'ನಾಗರಹಾವು' ಚಿತ್ರದಲ್ಲಿ ಡಾ.ವಿಷ್ಣುವರ್ಧನ್ ಬೃಹತ್ ಹಾವಿನ ರೂಪದಲ್ಲಿ ಪ್ರೇಕ್ಷಕರಿಗೆ ದರ್ಶನ ನೀಡಲಿದ್ದಾರೆ. ಆ ಪಾತ್ರ ಹೇಗೆ ಮೂಡಿಬಂದಿರಬಹುದು ಎಂಬ ಕುತೂಹಲ ಸಹಜವಾಗಿ ಪ್ರೇಕ್ಷಕರಲ್ಲಿದೆ. [ಬುಸುಗುಡುವ 'ನಾಗರಹಾವು' ಟೀಸರ್ ಸೂಪರ್ರೋ ಸೂಪರ್.!]


ವಿಷ್ಣುದಾದಾ ಅಭಿಮಾನಿಗಳ ಸಂಖ್ಯೆ ಹೆಚ್ಚು.!

ಕರ್ನಾಟಕದಲ್ಲಿ 'ಕಬಾಲಿ'ಗಿಂತ 'ನಾಗರಹಾವು' ಚಿತ್ರಕ್ಕೆ ಕ್ರೇಜ್ ಹೆಚ್ಚು ಅಂತ ಆನ್ ಲೈನ್ ಸಮೀಕ್ಷೆಯಲ್ಲಿ ಸಾಬೀತಾಗಲು ವಿಷ್ಣು ದಾದಾ ಅಭಿಮಾನಿಗಳು ಕೂಡ ಕಾರಣ. ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಸಕ್ರಿಯರಾಗಿರುವ ವಿಷ್ಣು ಫ್ಯಾನ್ಸ್ 'ನಾಗರಹಾವು' ಚಿತ್ರವನ್ನ ಸದಾ ಟ್ರೆಂಡಿಂಗ್ ನಲ್ಲಿರುವಂತೆ ನೋಡಿಕೊಳ್ಳುತ್ತಿದ್ದಾರೆ. ['ನಾಗರಹಾವು' ಬಗ್ಗೆ 'ನಾಗಿಣಿ' ರಮ್ಯಾ ಉದುರಿಸಿದ ಮಾತಿನ ಮುತ್ತು]


ಟೀಸರ್ ಲಾಂಚ್ ನಲ್ಲೂ ಅಭಿಮಾನಿಗಳ ದಂಡು.!

'ನಾಗರಹಾವು' ಚಿತ್ರದ ಟೀಸರ್ ಬಿಡುಗಡೆ ಸಮಾರಂಭಕ್ಕೂ ಸಾವಿರಾರು ವಿಷ್ಣು ಅಭಿಮಾನಿಗಳು ಸಾಕ್ಷಿಯಾಗಿದ್ದರು. ಅಂದ್ಮೇಲೆ, ಕರ್ನಾಟಕದಲ್ಲಿ 'ನಾಗರಹಾವು' ಬುಸುಗುಡುವ ಸದ್ದೇ ಹೆಚ್ಚು ಅಲ್ಲವೇ.!


ರಮ್ಯಾ ಅಭಿಮಾನಿಗಳೂ ಕೂಡ.!

ಇನ್ನೂ 'ನಾಗರಹಾವು' ಚಿತ್ರಕ್ಕೆ ರಮ್ಯಾ ಅಭಿಮಾನಿಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸಪೋರ್ಟ್ ಮಾಡುತ್ತಿದ್ದಾರೆ.


ಕೆಲವೆಡೆ ಮಾತ್ರ ರಜನಿ ಅಭಿಮಾನಿಗಳ ದಂಡು.!

ಬೆಂಗಳೂರು ಮತ್ತು ಕರ್ನಾಟಕದ ಕೆಲ ಕಡೆ ಮಾತ್ರ ರಜನಿ ಭಕ್ತರ ಸಂಖ್ಯೆ ಹೆಚ್ಚಿದೆ. ಉಳಿದೆಡೆ ಕನ್ನಡ ಚಿತ್ರ ಪ್ರಿಯರೇ ಇರಬಹುದಲ್ವಾ.?


ಸೂರ್ಯ ಕೂಡ ಟ್ವೀಟ್ ಮಾಡಿದ್ದರು.!

'ನಾಗರಹಾವು' ಚಿತ್ರವನ್ನು ನೋಡಲು ಕಾಯುತ್ತಿದ್ದೇನೆ ಅಂತ ಖುದ್ದು ತಮಿಳು ನಟ ಸೂರ್ಯ ಕೂಡ ಟ್ವೀಟ್ ಮಾಡಿದ್ದರು.


ಒಳ್ಳೆ ಕನ್ನಡ ಚಿತ್ರ ಬಂದ್ರೆ ಯಾರು ತಾನೆ ಪ್ರೋತ್ಸಾಹ ಕೊಡಲ್ಲ.?

ಪರಭಾಷೆಯ ಚಿತ್ರಗಳಿಗೆ ಪ್ರಚಾರ ಕೊಟ್ಟರೆ ಮುನಿಸಿಕೊಳ್ಳುವ ಕನ್ನಡಿಗರು ಉತ್ತಮ ಕನ್ನಡ ಚಿತ್ರಗಳು ಬಂದ್ರೆ ಸುಮ್ಮನೆ ಇರ್ತಾರಾ.? ತಪ್ಪದೇ ವೀಕ್ಷಿಸುತ್ತಾರೆ.! ಅದಕ್ಕೆ ಇತ್ತೀಚಿನ 'ಯು ಟರ್ನ್', 'ಗೋಧಿ ಬಣ್ಣ ಸಾಧಾರಣ ಮೈಕಟ್ಟು', 'ರಂಗಿತರಂಗ' ಚಿತ್ರಗಳೇ ಸಾಕ್ಷಿ. ಹೀಗಾಗಿ, 'ನಾಗರಹಾವು' ಚಿತ್ರದ ಮೇಲೆ ಕನ್ನಡಿಗರ ಕಣ್ಣು ನೆಟ್ಟಿದೆ.


'ನಾಗರಹಾವು' ಚಿತ್ರದ ಕುರಿತು....

ತೆಲುಗಿನ ಖ್ಯಾತ ನಿರ್ದೇಶಕ ಕೋಡಿ ರಾಮಕೃಷ್ಣ ಆಕ್ಷನ್ ಕಟ್ ಹೇಳಿರುವ ರಮ್ಯಾ, ದಿಗಂತ್ ಮುಖ್ಯ ಭೂಮಿಕೆಯಲ್ಲಿ ಇರುವ ಸಿನಿಮಾ 'ನಾಗರಹಾವು'.


English summary
According to an Online and Social Media Survey, Legendary Actor Dr.Vishnuvardhan's CGI version created 'Nagarahavu' movie is trending in Karnataka than Super Star Rajnikanth starrer 'Kabali'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada