»   » ಸುದೀಪ್ ಹಾಗೂ ದರ್ಶನ್ ಅಭಿಮಾನಿಗಳ ಮಧ್ಯೆ ಶುರುವಾಗಿದೆ ವಾಕ್ಸಮರ.!

ಸುದೀಪ್ ಹಾಗೂ ದರ್ಶನ್ ಅಭಿಮಾನಿಗಳ ಮಧ್ಯೆ ಶುರುವಾಗಿದೆ ವಾಕ್ಸಮರ.!

Posted By: ಹರಾ
Subscribe to Filmibeat Kannada

ಎಲ್ಲದಕ್ಕೂ ಲಿಮಿಟ್ ಇರಬೇಕು. ಅತಿಯಾದರೆ, ಅಮೃತ ಕೂಡ ವಿಷ ಎನ್ನುತ್ತಾರೆ. ಹಾಗೇ, 'ಅಭಿಮಾನ' ಅತಿರೇಕಕ್ಕೆ ಹೋದರೆ ಉಳಿದವರೆಲ್ಲರೂ 'ವಿಲನ್'ಗಳಂತೆಯೇ ಕಾಣುತ್ತಾರೆ. ಈಗ ಆಗಿರುವುದು ಅದೇ..!

ಕೆಲವೇ ದಿನಗಳ ಹಿಂದೆ ಹೀಗೆ ಇರ್ಲಿಲ್ಲ. ಸುದೀಪ್ ಹಾಗೂ ದರ್ಶನ್ ಎಷ್ಟು ಆಪ್ತರಾಗಿದ್ದರೋ, ಅಷ್ಟೇ ಅನ್ಯೋನ್ಯವಾಗಿದ್ದರು ಇಬ್ಬರ ಅಭಿಮಾನಿಗಳು. ಅಣ್ತಮ್ಮಂದಿರಂತೆ ಇದ್ದ ಸುದೀಪ್-ದರ್ಶನ್ ಅಭಿಮಾನಿಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಪರಸ್ಪರ ವಾಕ್ಸಮರಕ್ಕೆ ಇಳಿದಿದ್ದಾರೆ. [ಅಭಿಮಾನಿಯಾಗಿ ವಿಷ್ಣುದಾದಾ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಸುದೀಪ್]

ಅಷ್ಟಕ್ಕೂ, ಸುದೀಪ್ ಹಾಗೂ ದರ್ಶನ್ ಅಭಿಮಾನಿಗಳ ನಡುವೆ ಮಾತಿನ ಚಕಮಕಿ ನಡೆಯಲು ಕಾರಣ ಏನು ಎಂಬುದರ ಸಂಪೂರ್ಣ ವಿವರ ಇಲ್ಲಿದೆ. ಕೆಳಗಿರುವ ಸ್ಲೈಡ್ ಗಳಲ್ಲಿ ಓದಿರಿ....

ಎಲ್ಲವೂ ಶುರುವಾಗಿದ್ದು 'ನಾಗರಹಾವು' ಸೆಲ್ಫಿ ಕ್ರೇಜ್ ನಿಂದ.!

'ನಾಗರಹಾವು' ಚಿತ್ರದ 3D ಸ್ಟ್ಯಾಂಡ್ ಮುಂದೆ ನಿಂತು ಸ್ಯಾಂಡಲ್ ವುಡ್ ತಾರೆಯರು ಸೆಲ್ಫಿ ಕ್ಲಿಕ್ಕಿಸಿಕೊಂಡು, ಚಿತ್ರಕ್ಕೆ ಶುಭ ಹಾರೈಸುತ್ತಿರುವುದು ನಿಮಗೆ ಗೊತ್ತಿದೆ. ಎಲ್ಲರಂತೆ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ 'ನಾಗರಹಾವು' 3D ಸ್ಟ್ಯಾಂಡ್ ಮುಂದೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡರು. [ವಿಷ್ಣುದಾದಾ' ಜೊತೆ 'ಜಗ್ಗುದಾದಾ', ಗಣಿ, ಪ್ರೇಮ್ ಸೂಪರ್ ಸೆಲ್ಫಿ.!]

ಬರಿಗಾಲಿನಲ್ಲಿ ಇದ್ದ ದರ್ಶನ್.!

'ನಾಗರಹಾವು' 3D ಸ್ಟ್ಯಾಂಡ್ ಮುಂದೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಳ್ಳುವಾಗ ದರ್ಶನ್ ಬರಿಗಾಲಿನಲ್ಲಿ ಇದ್ದರು. ['ನಾಗರಹಾವು' ಚಿತ್ರಕ್ಕೆ ಸ್ಯಾಂಡಲ್ ವುಡ್ ತಾರೆಯರ ಬೆಂಬಲ]

ಹೊಸ ವ್ಯಾಖ್ಯಾನ ಮಾಡಿದ ದರ್ಶನ್ ಅಭಿಮಾನಿಗಳು.!

ಚಪ್ಪಲಿ ಹಾಕದೆ, ಬರಿಗಾಲಿನಲ್ಲಿ ನಿಂತು ದರ್ಶನ್ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ಇದು 'ಸಾಹಸಸಿಂಹ' ಡಾ.ವಿಷ್ಣುವರ್ಧನ್ ರವರಿಗೆ ದರ್ಶನ್ ಸಲ್ಲಿಸಿರುವ ಗೌರವ ಅಂತೆಲ್ಲಾ 'ದಾಸ'ನ ಅಭಿಮಾನಿಗಳು ಟ್ವೀಟ್ ಮಾಡಲು ಶುರು ಮಾಡಿದರು. [ಕಿಚ್ಚ ಸುದೀಪ್ - ದರ್ಶನ್ ನಡುವೆ ಬಿರುಕು? ಟ್ವಿಟ್ಟರ್ ನಲ್ಲಿ ನಡೆದದ್ದೇನು?]

ಅತಿರೇಕಕ್ಕೆ ಹೋಗಿದ್ದು.!

ಇನ್ನೂ ಕೆಲವು ಅಭಿಮಾನಿಗಳು ಅದೇ ಫೋಟೋಗೆ ಬಣ್ಣ ಬಳಿದು, ವೈರಲ್ ಮಾಡಿದ್ದು ಹೀಗೆ....

ತಿರುಗೇಟು ಬಿತ್ತು ನೋಡಿ....

ಇದನ್ನೆಲ್ಲಾ ನೋಡಿದವರು ದರ್ಶನ್ ಸೆಲ್ಫಿ ಅಸಲಿಯತ್ತು ಬಯಲು ಮಾಡಿದರು. ಅಷ್ಟಕ್ಕೂ, ದರ್ಶನ್ ಹಾಗೆ 'ನಾಗರಹಾವು' 3D ಸ್ಟ್ಯಾಂಡ್ ಮುಂದೆ ನಿಂತು ಸೆಲ್ಫಿ ಕ್ಲಿಕ್ ಮಾಡಿದ್ದು ಡಬ್ಬಿಂಗ್ ಸ್ಟುಡಿಯೋ ಒಂದರಲ್ಲಿ. ಡಬ್ಬಿಂಗ್ ಸ್ಟುಡಿಯೋ ಒಳಗೆ ಯಾರೂ ಚಪ್ಪಲಿ ಹಾಕೊಂಡು ಹೋಗಲ್ಲ. ಹಿಂದೆ ಮುಂದೆ ಗೊತ್ತಿಲ್ಲದೇ, ಬಿಲ್ಡಪ್ ಕೊಟ್ಟ ದರ್ಶನ್ ಅಭಿಮಾನಿಗಳಿಗೆ ತಿರುಗೇಟು ಸಿಕ್ಕಿದ ಪರಿ ಇದು.

ಸುದೀಪ್ ಸೆಲ್ಫಿ ಬಂದಾಗ...

ಇತ್ತ ಸುದೀಪ್ ಕೂಡ ಅದೇ 'ನಾಗರಹಾವು' 3D ಸ್ಟ್ಯಾಂಡ್ ಮುಂದೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡರು.

ಯಾವುದಕ್ಕೆ ಯಾವ ಲಿಂಕು.?!

'ನಾಗರಹಾವು' 3D ಸ್ಟ್ಯಾಂಡ್ ಮುಂದೆ ನಿಂತು ಸುದೀಪ್ ಚಪ್ಪಲಿ ಹಾಕೊಂಡು ಸೆಲ್ಫಿ ಕ್ಲಿಕ್ ಮಾಡಿಕೊಂಡಿರೋದನ್ನ ಗಮನಿಸಿದವರು ದರ್ಶನ್ ಗೆ ಹೋಲಿಸಿ, ಸುದೀಪ್ ಅಭಿಮಾನಿಗಳನ್ನ ಕೆಣಕಲು ಶುರು ಮಾಡಿದರು.

ದರ್ಶನ್ ಅಭಿಮಾನಿಗಳ ಏಟಿಗೆ ಸುದೀಪ್ ಫ್ಯಾನ್ಸ್ ಕೊಟ್ಟ ತಿರುಗೇಟು.!

'ಮೊಸರಲ್ಲಿ ಕಲ್ಲು ಹುಡುಕುವ ಬುದ್ಧಿ ಬಿಡುವಂತೆ' ಸುದೀಪ್ ಅಭಿಮಾನಿಗಳು ದರ್ಶನ್ ಫ್ಯಾನ್ಸ್ ಗೆ ತಿರುಗೇಟು ನೀಡಿದ್ದಾರೆ.

English summary
Now its time for Sudeep fans to troll against Darshan in Social Networking sites. But what is the reason? Read the article to know.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada