»   » ಪವರ್ ಸ್ಟಾರ್ ಚಿತ್ರಕ್ಕೆ ಧ್ವನಿ ನೀಡಿದ ಯಂಗ್ ಟೈಗರ್ NTR

ಪವರ್ ಸ್ಟಾರ್ ಚಿತ್ರಕ್ಕೆ ಧ್ವನಿ ನೀಡಿದ ಯಂಗ್ ಟೈಗರ್ NTR

Posted By:
Subscribe to Filmibeat Kannada

ಅಂತೂ ನಿರ್ಮಾಪಕ ಎನ್.ಕೆ ಲೋಹಿತ್ ಪ್ಲಾನ್ ಮಾಡಿಕೊಂಡಂತೆ ಎಲ್ಲವೂ ಸುಸೂತ್ರವಾಗಿ ನಡೆದಿದೆ. ಕನ್ನಡಕ್ಕೆ ಟಾಲಿವುಡ್ ನ ಮರಿ ಟೈಗರ್ ಜ್ಯೂನಿಯರ್ ಎನ್ ಟಿ ಆರ್ ಕಾಲಿಟ್ಟು ಪುನೀತ್ ಅವರ ಸಿನಿಮಾದ ಹಾಡಿಗೆ ತಮ್ಮ ಧ್ವನಿ ನೀಡಿದ್ದಾರೆ.

ಹೌದು ನಾವು ಈ ಮೊದಲೇ ಫಿಲ್ಮಿಬೀಟಲ್ಲಿ ಹೇಳಿದ ಪ್ರಕಾರ ಜ್ಯೂನಿಯರ್ ಎನ್ ಟಿ ಆರ್, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ 'ಚಕ್ರವ್ಯೂಹ' ಚಿತ್ರದ ಹಾಡೊಂದಕ್ಕೆ ತಮ್ಮ ಧ್ವನಿ ನೀಡಿದ್ದಾರೆ.[ಅಪ್ಪು ಸಿನಿಮಾದಲ್ಲಿ ಯಂಗ್ ಟೈಗರ್ ಜೂ.ಎನ್.ಟಿ.ಆರ್.?]

ತಮ್ಮ 'ನಾನಕು ಪ್ರೇಮತೋ' ಸಿನಿಮಾದ ಶೂಟಿಂಗ್ ಮುಗಿಸಿ ಸ್ಪೈನ್ ನಿಂದ ಸೀದಾ ಹೈದರಾಬಾದ್ ಗೆ ಆಗಮಿಸಿರುವ ಎನ್.ಟಿ ಆರ್ ಅವರು ಕೇವಲ ಎರಡು ಘಂಟೆಗಳಲ್ಲಿ ಹಾಡಿನ ರೆಕಾರ್ಡಿಂಗ್ ಮುಗಿಸಿಕೊಟ್ಟಿದ್ದಾರೆ. ಸಂಗೀತ ಮಾಂತ್ರಿಕ ಎಸ್ ತಮನ್ ಅವರು ಮ್ಯೂಸಿಕ್ ಕಂಪೋಸಿಷನ್ ನಲ್ಲಿ ಯಶಸ್ವಿಯಾಗಿ ಸಾಂಗ್ ರೆಕಾರ್ಡಿಂಗ್ ಮುಗಿದಿದೆ.

ಟಾಲಿವುಡ್ ನಲ್ಲಿ ಮಾಸ್ ನಂಬರ್ಸ್ ಆಗಿರುವ ಜ್ಯೂನಿಯರ್ ಎನ್ ಟಿ ಆರ್ ಅವರು ಈ ಮೊದಲು ತಮ್ಮ ಚಿತ್ರಗಳಾದ 'ಯಮದೊಂಗ', 'ಕಂತ್ರಿ', 'ಅದುರ್ಸ್' ಮತ್ತು 'ರಭಸ' ಚಿತ್ರಗಳ ಹಾಡಿಗೆ ತಮ್ಮದೇ ವಾಯ್ಸ್ ನೀಡಿ ಅಭಿಮಾನಿಗಳನ್ನು ರಂಜಿಸಿದ್ದಾರೆ.[ಬಿಡುಗಡೆಗೆ ಮುನ್ನವೇ ಇತಿಹಾಸ ಸೃಷ್ಟಿಸಿದ 'ಚಕ್ರವ್ಯೂಹ']

ನಂದಮೂರಿ ಕುಟುಂಬಕ್ಕೆ ಮತ್ತು ರಾಜ್ ಫ್ಯಾಮಿಲಿಗೆ ಮೊದಲಿನಿಂದಲೂ ಒಂದು ಅನುಬಂಧ ಇದೆ ಅದೇನೆಂಬುದನ್ನು ನೋಡಲು ಹಾಗೂ ಸ್ಟುಡಿಯೋದಲ್ಲಿ ಎನ್ ಟಿ ಆರ್ ಮತ್ತು ಅಪ್ಪು ಅವರ ಮೋಡಿ ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ..

ರಾಜ್ ಫ್ಯಾಮಿಲಿ ಮತ್ತು ನಂದಮೂರಿ ಫ್ಯಾಮಿಲಿ

ಡಾ. ರಾಜ್ ಇದ್ದ ಕಾಲದಲ್ಲಿ ಮೊದಲಿನಿಂದಲೂ ವರನಟ ರಾಜ್ ಕುಟುಂಬಕ್ಕೂ ತೆಲುಗಿನ ನಂದಮೂರಿ ಕುಟುಂಬಕ್ಕೂ ಒಂದು ಅಪರೂಪವಾದ ಅನುಬಂಧ ಇತ್ತು. ಇದೀಗ ಆ ಬಂಧವನ್ನು ಜ್ಯೂನಿಯರ್ ಟೈಗರ್ ಮತ್ತು ಅಪ್ಪು ಅಲಿಯಾಸ್ ಪವರ್ ಸ್ಟಾರ್ ಮುಂದುವರೆಸುತ್ತಿದ್ದಾರೆ.

ಮರಿ ಟೈಗರ್ ಮತ್ತು ಪವರ್ ಸ್ಟಾರ್

ಚಿತ್ರರಂಗದ ಹಿನ್ನಲೆ ಇರುವ ಎರಡು ದೊಡ್ಡ ಕುಟುಂಬದ ಕುಡಿಗಳು ಒಂದೇ ಫ್ರೇಮ್ ನಲ್ಲಿ. ಎನ್ ಟಿ ಆರ್ ಮತ್ತು ಅಪ್ಪು ರೆಕಾರ್ಡಿಂಗ್ ಆದ ನಂತರ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಪಟ್ಟರು. ಅಂದಹಾಗೆ ಇದೀಗ ಇವರಿಬ್ಬರು ಉತ್ತಮ ಗೆಳೆಯರಾಗಿದ್ದಾರೆ.

ಜಿಮ್ ಮಾಸ್ಟರ್ ಶುಭಕರ್ ಶೆಟ್ಟಿ

ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್ ಅವರ ಜಿಮ್ ಮಾಸ್ಟರ್ ಶುಭಕರ್ ಶೆಟ್ಟಿ ಅಪ್ಪು ಮತ್ತು ಎನ್ ಟಿ ಆರ್ ಅವರ ಫೋಸ್.

ಸಂಗೀತ ನಿರ್ದೇಶಕ ತಮನ್

ಅಂದಹಾಗೆ ಎನ್ ಟಿ ಆರ್ ಹಾಡಿರುವ ಹಾಡಿಗೆ ಸಂಗೀತ ಮಾಂತ್ರಿಕ ತಮನ್ ಅವರು ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ತಮನ್ ಅವರು ಮೂಲತಃ ಕನ್ನಡಿಗರಾಗಿರುವುದರಿಂದ ಸುಲಭವಾಗಿ ಕಂಪೋಸ್ ಮಾಡಿದ್ದಾರೆ. ಹಾಗೂ ಎನ್ ಟಿ ಆರ್ ಅವರು ಕೂಡ ಕನ್ನಡ ಬಲ್ಲವರಾಗಿದ್ದಾರೆ.

ಇಡೀ 'ಚಕ್ರವ್ಯೂಹ' ಚಿತ್ರತಂಡ

ತಮಿಳು ನಿರ್ದೇಶಕ ಎಮ್ ಸರವಣನ್ ಆಕ್ಷನ್-ಕಟ್ ಹೇಳಿರುವ 'ಚಕ್ರವ್ಯೂಹ' ಸಿನಿಮಾದ ಇಡೀ ಚಿತ್ರತಂಡ ರೆಕಾರ್ಡಿಂಗ್ ಮುಗಿಸಿದ ನಂತರ ಟಾಲಿವುಡ್ ನ ಯಂಗ್ ಟೈಗರ್ ಜ್ಯೂನಿಯರ್ ಎನ್ ಟಿ ಆರ್ ಜೊತೆ ಫೋಟೋ ಕ್ಲಿಕ್ಕಿಸಿಕೊಂಡರು.

ಅಪ್ಪು ಮತ್ತು NTR ಮಸ್ತಿ

ಹಾಡಿನ ರೆಕಾರ್ಡಿಂಗ್ ಸಂದರ್ಭದಲ್ಲಿ ಸ್ಟುಡಿಯೋದಲ್ಲಿ ಪವರ್ ಸ್ಟಾರ್ ಪುನೀತ್ ಮತ್ತು 'ಟೆಂಪರ್' ನಾಯಕ ಜ್ಯೂನಿಯರ್ ಎನ್ ಟಿ ಆರ್ ಅವರು ಸಖತ್ ಮೋಜು-ಮಸ್ತಿ ಮಾಡಿಕೊಂಡು ಸಾಂಗ್ ರೆಕಾರ್ಡಿಂಗ್ ಎಂಜಾಯ್ ಮಾಡಿದ್ದಾರೆ ಅನ್ನೋದಕ್ಕೆ ಈ ಫೋಟೋ ಸಾಕ್ಷಿ.

ಎಸ್ ಐ ದಯಾ ಫೋಸ್

'ಟೆಂಪರ್' ಚಿತ್ರದಲ್ಲಿ ಸ್ಪೆಷಲ್ ಆಫೀಸರ್ ದಯಾ ಎಂಬ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಮಿಂಚಿದ್ದ ಟಾಲಿವುಡ್ ಯಂಗ್ ಟೈಗರ್ ಎನ್ ಟಿ ಆರ್ ಅವರು ರೆಕಾರ್ಡಿಂಗ್ ಗು ಮುನ್ನ ನೀಡಿದ ಫೋಸ್

ನಿರ್ಮಾಪಕ ಲೋಹಿತ್

ಅಂದಹಾಗೆ ಅಪ್ಪು ಜೊತೆ ಮಾತ್ರವಲ್ಲದೇ 'ಚಕ್ರವ್ಯೂಹ' ನಿರ್ಮಾಪಕ ಲೋಹಿತ್ ಅವರ ಜೊತೆ ಟಾಲಿವುಡ್ ನ ಮರಿಟೈಗರ್ ಉತ್ತಮ ಸ್ನೇಹವನ್ನು ಹೊಂದಿದ್ದಾರೆ. ಇದೀಗ ಲೋಹಿತ್ ಅವರಿಂದಾಗಿಯೇ ಎನ್ ಟಿ ಆರ್ ಅವರು ಅಪ್ಪು ಅವರ ಬಹುನಿರೀಕ್ಷಿತ ಸಿನಿಮಾಕ್ಕೆ ತಮ್ಮ ವಾಯ್ಸ್ ನೀಡಿದ್ದಾರೆ.

ಅಪ್ಪು " ಚಕ್ರವ್ಯೂಹದಲ್ಲಿ " ಬಂಧಿಯಾದ Jr. NTR ಗಾಯನ #Kannada #Chakravyuha Puneeth Rajkumar Jr NTR Kannada movies

Posted by Kannada Filmibeat on Thursday, December 24, 2015

ರೆಕಾರ್ಡಿಂಗ್ ವಿಡಿಯೋ ಇಲ್ಲಿದೆ

'ಪವರ್' ಟೈಟಲ್ ಸಾಂಗ್ ಬರೆದಿರುವ ಗೀತರಚನೆಕಾರ ಚಂದನ್ ಶೆಟ್ಟಿ ಅವರು ಬರೆದಿರುವ ಸಾಹಿತ್ಯಕ್ಕೆ ಯಂಗ್ ಟೈಗರ್ ಎನ್ ಟಿ ಆರ್ ಅವರು ಧ್ವನಿಗೂಡಿಸಿರುವ ವಿಡಿಯೋದ ಸಣ್ಣ ತುಣುಕು ಇಲ್ಲಿದೆ ನೋಡಿ.

English summary
Telugu Actor NTR Soon after coming back from Spain and settling down the issues of Nannaku Prematho release date, NTR spared his time for team Chakravyuha. NTR finished the recording of the song in less than two hours, which happened in the supervision of music director Thaman, in Hyderabad.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada