»   » ಪ್ರಿಯಾ ವಾರಿಯರ್ ಹೆಸರನ್ನು ಈ ರೀತಿ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ!

ಪ್ರಿಯಾ ವಾರಿಯರ್ ಹೆಸರನ್ನು ಈ ರೀತಿ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ!

Posted By:
Subscribe to Filmibeat Kannada
ಪ್ರಿಯ ಪ್ರಕಾಶ್ ವಾರಿಯರ್ ಹೆಸರು ಸೋಶಿಯಲ್ ಮೀಡಿಯಾದಲ್ಲಿ ದುರುಪಯೋಗ | Filmibeat Kananda

ಮಲೆಯಾಳಂ ಯುವ ನಟಿ ಪ್ರಿಯಾ ವಾರಿಯರ್ ಒಂದು ದಿನದಲ್ಲಿ ಸ್ಟಾರ್ ಮಟ್ಟದ ಜನಪ್ರಿಯತೆ ಗಳಿಸಿದ ಹುಡುಗಿ. ಆಕೆಯ ಒಂದೇ ಒಂದು ಲುಕ್ ನೋಡಿ ಹುಡುಗರು ಕಿಕ್ ಏರಿಸಿಕೊಂಡಿದ್ದಾರೆ. ಈ ಮಲೆಯಾಳಿ ಹುಡುಗಿಯ ಕಣ್ ನೋಟ ದೊಡ್ಡ ಸಂಚಲನವನ್ನು ಹುಟ್ಟು ಹಾಕಿದೆ.

ಇವುಗಳ ಜೊತೆಗೆ ಪ್ರಿಯಾ ವಾರಿಯರ್ ಅವರ ಈ ಮಟ್ಟದ ಜನಪ್ರಿಯತೆಯನ್ನು ಅನೇಕರು ಸಾಮಾಜಿಕ ಜಾಲತಾಣದಲ್ಲಿ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಫೇಸ್ ಬುಕ್, ಇನ್ಟಾಗ್ರಾಮ್, ಟ್ವಿಟ್ಟರ್ ನಲ್ಲಿ ಪ್ರಿಯಾ ವಾರಿಯರ್ ಅವರ ಹೆಸರಿನ ಸಾಕಷ್ಟು ಫೇಕ್ ಅಕೌಂಟ್ ಗಳು ಶುರುವಾಗಿದೆ. ಅಲ್ಲದೆ ಪ್ರಿಯಾ ಅಭಿಮಾನಿಗಳಿಗೆ ಆಕೆಯ ರಿಯಲ್ ಅಕೌಂಟ್ ಯಾವುದು ಫೇಕ್ ಅಕೌಂಟ್ ಯಾವುದು ಅಂತ ತಿಳಿಯದಾಗಿದೆ. ಮುಂದೆ ಓದಿ...

80ಕ್ಕೂ ಹೆಚ್ಚು ಫೇಕ್ ಪ್ರೊಫೈಲ್

ನಟಿ ಪ್ರಿಯಾ ವಾರಿಯರ್ ಹೆಸರಿನಲ್ಲಿ ಈಗ ಇನ್ಟಾಗ್ರಾಮ್ ನಲ್ಲಿ ಬರೊಬ್ಬರಿ 80ಕ್ಕೂ ಹೆಚ್ಚು ಫೇಕ್ ಅಕೌಂಟ್ ಗಳು ಸೃಷ್ಟಿಯಾಗಿದೆ. ಆ ಅಕೌಂಟ್ ಗಳನ್ನು ಎಷ್ಟೊ ಅಭಿಮಾನಿಗಳು ಫಾಲೋ ಮಾಡುತ್ತಿದ್ದಾರೆ.

40ಕ್ಕೂ ಹೆಚ್ಚು ಫೇಕ್ ಪೇಜ್

ಪ್ರಿಯಾ ವಿಡಿಯೋ ಎಲ್ಲೆಡೆ ಫೇಮಸ್ ಆಗುತ್ತಿದ್ದ ಹಾಗೆ ಆಕೆಯ ಹೆಸರಿನಲ್ಲಿ ಅನೇಕರು ಫೇಸ್ ಬುಕ್ ನಲ್ಲಿ 40ಕ್ಕೂ ಹೆಚ್ಚು ಫೇಕ್ ಪೇಜ್ ಗಳನ್ನು ಓಪನ್ ಮಾಡಿದ್ದಾರೆ.

50ಕ್ಕೂ ಹೆಚ್ಚು ನಕಲಿ ಖಾತೆಗಳು

ಪೇಜ್ ಗಳ ಜೊತೆಗೆ ಫೇಸ್ ಬುಕ್ ನಲ್ಲಿ 50ಕ್ಕೂ ಹೆಚ್ಚು ಪ್ರಿಯಾ ವಾರಿಯರ್ ಅವರ ನಕಲಿ ಖಾತೆಗಳು ಈಗ ಶುರುವಾಗಿದೆ.

ಕಣ್ಣಲ್ಲೇ ಕೊಲ್ಲುತ್ತಿರುವ ಈ ಹುಡುಗಿ ಬಗ್ಗೆ ಎಲ್ಲಿಯೂ ರಿವೀಲ್ ಆಗದ ಸಂಗತಿಗಳು!

20 ಟ್ವಿಟ್ಟರ್ ನಕಲಿ ಅಕೌಂಟ್ ಗಳು

ಫೇಸ್ ಬುಕ್, ಇನ್ಟಾಗ್ರಾಮ್ ಮಾತ್ರವಲ್ಲದೆ ಟ್ವಿಟ್ಟರ್ ನಲ್ಲಿ ಕೂಡ ಪ್ರಿಯಾ ಅವರ 20 ಹೆಚ್ಚು ಫೇಕ್ ಅಕೌಂಟ್ ಗಳು ಸದ್ಯ ಚಾಲ್ತಿಯಲ್ಲಿದೆ.

ಪ್ರಿಯಾ ವಾರಿಯರ್ ಕಣ್ಣಿನ ನೋಟಕ್ಕೆ ಹಿಂದೆ ಬಿದ್ದ ಹುಡುಗರ ಸಂಖ್ಯೆ ಅಪಾರ

ರಿಯಲ್ ಅಕೌಂಟ್ ನಲ್ಲಿ

ಸದ್ಯ ಪ್ರಿಯಾ ಅವರ ರಿಯಲ್ ಫೇಸ್ ಬುಕ್ ಅಕೌಂಟ್ ಅನ್ನು 65 ಸಾವಿರ ಜನರು ಲೈಕ್ ಮಾಡಿದ್ದಾರೆ. ಇನ್ಟಾಗ್ರಾಮ್ ಖಾತೆಯಲ್ಲಿ 1.8 ಮಿಲಿಯನ್ ಜನರು ಫಾಲೋ ಮಾಡುತ್ತಿದ್ದಾರೆ.

ಅಫೀಷಿಯಲ್ ಅಕೌಂಟ್ ಗಳನ್ನು ಫಾಲೋ ಮಾಡಿ

ಈಗಾಗಲೇ ಫೇಸ್ ಬುಕ್ ಲೈವ್ ನಲ್ಲಿ ಮಾತನಾಡಿರುವ ಪ್ರಿಯಾ ''ಎಲ್ಲರೂ ನಮ್ಮ ಸಿನಿಮಾದ ಹಾಡನ್ನು ನೋಡಿ ಇಷ್ಟ ಪಟ್ಟಿದಕ್ಕೆ ಥ್ಯಾಂಕ್ಯು. ಈಗಾಗಲೇ ನನ್ನ ಅನೇಕ ಫೇಕ್ ಅಕೌಂಟ್ ಗಳು ಫೇಸ್ ಬುಕ್ ನಲ್ಲಿ ಬಂದಿದೆ. ಆದರೆ ಇದು ನನ್ನ ಅಫೀಷಿಯಲ್ ಫೇಸ್ ಬುಕ್ ಪೇಜ್. ಎಲ್ಲರೂ ಈ ಪೇಜ್ ಅನ್ನು ಫಾಲೋ ಮಾಡಿ. ನಿಮ್ಮ ಪ್ರೀತಿ, ಸಪೋರ್ಟ್ ಗೆ ಥ್ಯಾಂಕ್ಯು.'' ಎಂದು ಹೇಳಿದ್ದಾರೆ.

ಪ್ರಿಯಾ ಪ್ರಕಾಶ್ ವಾರಿಯರ್ ಬಗ್ಗೆ

ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹಾಟ್ ಟಾಪಿಕ್ ಆಗಿರುವ ಈ ಹುಡುಗಿಯ ಹೆಸರು ಪ್ರಿಯಾ ಪ್ರಕಾಶ್ ವಾರಿಯರ್. 18 ವರ್ಷದ ಈ ಹುಡುಗಿ ಕೇರಳದ ತ್ರಿಶೂರ್ ನಲ್ಲಿರುವ ವಿಮಲ್ ಕಾಲೇಜಿನಲ್ಲಿ ಬಿ.ಕಾಂ ಓದುತ್ತಿದ್ದಾಳೆ. ಪ್ರಿಯಾ ಪ್ರಕಾಶ್ ವಾರಿಯರ್ 'ಒರು ಅಡಾರ್ ಲವ್' (Ooru adaar love) ಎಂಬ ಮಲೆಯಾಳಂ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಪ್ರಿಯಾ ಮೊದಲ ಸಿನಿಮಾದ ಮೊದಲ ಹಾಡಿನ ದೃಶ್ಯದಿಂದಲೇ ಈಗ ಸಖತ್ ಫೇಮಸ್ ಆಗಿದ್ದಾರೆ.

English summary
Numerous fake accounts created in the name of Malayalam young actress Priya Prakash Varrier. Prakash Varrier is the new internet sensation and her video viral in social media.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada