For Quick Alerts
  ALLOW NOTIFICATIONS  
  For Daily Alerts

  ಓಂ ಪ್ರಕಾಶ್ ರಾವ್ ಆಕ್ಷನ್ ಕಟ್ ನಲ್ಲಿ ಮತ್ತೊಮ್ಮೆ ಹುಚ್ಚ

  By Rajendra
  |

  ಅಭಿನಯ ಚಕ್ರವರ್ತಿ ಸುದೀಪ್ ಅಭಿನಯಿಸಿದ್ದ 'ಹುಚ್ಚ' ಚಿತ್ರದ ಟೈಟಲನ್ನು ಮತ್ತೊಮ್ಮೆ ಕೈಗೆತ್ತಿಕೊಂಡಿದ್ದಾರೆ ಮಾಸ್ ನಿರ್ದೇಶಕ ಓಂ ಪ್ರಕಾಶ್ ರಾವ್. ಚಿತ್ರದ ಟೈಟಲ್ ಮಾತ್ರ ಹಳೆಯದು ಆದರೆ ಕಥೆ ಮಾತ್ರ ಹೊಸದಾಗಿರುತ್ತದೆ ಎಂಬ ಮಾತುಗಳು ಕೇಳಿಬಂದಿವೆ.

  ಇದೇ ಓಂ ಪ್ರಕಾಶ್ ರಾವ್ ಅವರು ಹತ್ತು ವರ್ಷಗಳ ಹಿಂದೆ, ಅಂದರೆ 2001ರಲ್ಲಿ ಸುದೀಪ್ ಅವರ 'ಹುಚ್ಚ' ಚಿತ್ರ ನಿರ್ದೇಶಿಸಿದ್ದರು. ಈಗ ಮತ್ತೊಮ್ಮೆ ತಮ್ಮ ಚಿತ್ರಕ್ಕೆ ಹುಚ್ಚ ಎಂದು ಹೆಸರಿಟ್ಟಿದ್ದಾರೆ. ಆದರೆ ಈ ಬಾರಿ ನಾಯಕ ನಟನಾಗಿ ಸುದೀಪ್ ಇರುವುದಿಲ್ಲ.

  2001ರಲ್ಲಿ ತೆರೆಕಂಡಿದ್ದ 'ಹುಚ್ಚ' ಚಿತ್ರದಲ್ಲಿ ಸುದೀಪ್ ಜೊತೆ ಜಿಂಕೆಮರಿ ರೇಖಾ ವೇದವ್ಯಾಸ್ ಅಭಿನಯಿಸಿದ್ದರು. ತಮಿಳಿನ 'ಸೇತು' ಚಿತ್ರದ ರೀಮೇಕ್ ಆಗಿದ್ದ ಈ ಚಿತ್ರ ಬಾಕ್ಸ್ ಆಫೀಸಲ್ಲಿ ಭಾರಿ ಸದ್ದು ಮಾಡಿತ್ತು. ಸುದೀಪ್ ಅವರ ವೃತ್ತಿಜೀವನದಲ್ಲಿ ಮಹತ್ತರ ತಿರುವು ನೀಡಿದ ಚಿತ್ರ ಇದಾಗಿದೆ.

  ಈ ಚಿತ್ರದಲ್ಲಿನ ಅಭಿನಯಕ್ಕಾಗಿ ಸುದೀಪ್ ಅವರಿಗೆ ಚೊಚ್ಚಲ ಫಿಲಂಫೇರ್ ಅತ್ಯುತ್ತಮ ನಟ ಪ್ರಶಸ್ತಿ ಬಂದಿದೆ. ಹತ್ತು ವರ್ಷಗಳ ಹಳೆಯ ಶೀರ್ಷಿಕೆಯನ್ನು ಬಳಸಿಕೊಳ್ಳುವ ಅವಕಾಶ ಕನ್ನಡ ಚಿತ್ರರಂಗದಲ್ಲಿದೆ. ಈ ಸದಾವಕಾಶವನ್ನು ಓಂ ಪ್ರಕಾಶ್ ರಾವ್ ಬಳಸಿಕೊಳ್ಳುತ್ತಿದ್ದಾರೆ ಅಷ್ಟೇ.

  ಅಂದಹಾಗೆ ಈ ಚಿತ್ರವೂ ರೀಮೇಕಾ ಅಥವಾ ಸ್ವಮೇಕಾ ಎಂದರೆ, ಚಿತ್ರಕತೆ ಬಗ್ಗೆ ತಾವೀಗಲೆ ಏನೋ ಹೇಳುವುದಿಲ್ಲ. ಆದರೆ ಚಿತ್ರಕಥೆ ಹಗೂ ಸಂಭಾಷಣೆಯನ್ನು 'ಮಠ' ಖ್ಯಾತಿಯ ಗುರುಪ್ರಸಾದ್ ಹೆಣೆಯುತ್ತಿದ್ದಾರೆ ಎಂಬ ವಿವರಗಳನ್ನು ಓಂ ನೀಡಿದ್ದಾರೆ.

  ತಮ್ಮ 'ಹುಚ್ಚ' ಚಿತ್ರಕ್ಕೆ ಹೊಸ ಮುಖವನ್ನು ಪರಿಚಯಿಸಲಿದ್ದಾರೆ ಓಂ. ಬಹುಶಃ ಅವರ ತಲೆಯಲ್ಲಿ ಗುರುಪ್ರಸಾದ್ ಅವರ 'ಡೈರೆಕ್ಟರ್ಸ್ ಸ್ಪೆಷಲ್' ಚಿತ್ರದ ಹೀರೋ ಧನಂಜಯ ಅವರಿದ್ದಾರಂತೆ. ನಾಯಕಿಯಾಗಿ ಲಕ್ಷ್ಮಿ ಮೆನನ್ ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ. ಚಿತ್ರದ ಗಮನಾರ್ಹ ಪಾತ್ರದಲ್ಲಿ ರವಿಶಂಕರ್ ಕಾಣಿಸಲಿದ್ದಾರೆ. ಅನೂಪ್ ಸೀಳಿನ್ ಸಂಗೀತ ಇರುವ 'ಹುಚ್ಚ' ಚಿತ್ರ ನವೆಂಬರ್ 22ಕ್ಕೆ ಸೆಟ್ಟೇರಲಿದೆ. (ಏಜೆನ್ಸೀಸ್)

  English summary
  Kannada films mass director Om Prakash Rao's upcoming film titled as Huchcha. The director had used 10 years ago for his blockbuster film that starred actor Sudeep in the lead. The film will go on floors on 22nd November.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X