»   » ಓಂ 'ಢಿಶುಂ ಢಿಶುಂ' ತಪ್ಪು ಮಾಡಿದ್ರೆ ಹೊಡೀತೀನಿ

ಓಂ 'ಢಿಶುಂ ಢಿಶುಂ' ತಪ್ಪು ಮಾಡಿದ್ರೆ ಹೊಡೀತೀನಿ

Posted By:
Subscribe to Filmibeat Kannada

ಕಾಮಿಡಿ ಲವ್ ಸೆಂಟಿಮೆಂಟ್ ಪಾತ್ರಗಳನ್ನು ನಿರ್ವಹಿಸಿರುವ ಓಂ ಪ್ರಕಾಶ್ ನಾಯಕ್ ಈಗ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುವ ನಾಯಕನಾಗಿ ಪ್ರೇಕ್ಷಕರನ್ನು ರಂಜಿಸಲು ಅಣಿಯಾಗಿದ್ದಾರೆ. ಓಂ ಪ್ರಕಾಶ್ ರವರೇ ನಿರ್ಮಿಸಿ, ನಿರ್ದೇಶಿಸುತ್ತಿರುವ 'ಢಿಶುಂ ಢಿಶುಂ' ಚಿತ್ರದಲ್ಲಿ ತಪ್ಪು ಮಾಡಿದ್ರೆ ಹೊಡೀತೀನಿ ಎನ್ನುವ ಮೆಂಟಲ್ ಸೀನನ ಪಾತ್ರವನ್ನು ಅವರು ನಿರ್ವಹಿಸುತ್ತಿದ್ದಾರೆ.

ಕನ್ನಡದಲ್ಲಿಯೇ ವಿಶೇಷ ಎನ್ನುವಂಥಹ 15 ಸಾಹಸ ದೃಶ್ಯಗಳನ್ನು ಹೊಂದಿರುವ ಈ ಚಿತ್ರದಲ್ಲಿರುವುದು ಒಂದು ಹಾಡು ಮಾತ್ರ ಇರುತ್ತದೆ. ಈಗಾಗಲೇ 10 ಸಾಹಸ ದೃಶ್ಯಗಳೊಂದಿಗೆ ಶೇಕಡ 60 ರಷ್ಟು ಚಿತ್ರೀಕರಣ ಮುಗಿದಿದ್ದು ಉಳಿದ ಭಾಗದ 5 ಫೈಟ್ ಗಳನ್ನು ಚಿತ್ರೀಕರಿಸಲು ಸಿದ್ಧತೆ ನಡೆದಿದೆ. [ಏಕ ವ್ಯಕ್ತಿ ಅಭಿನಯದ 'ನಾನು ಅವಳು ಮತ್ತು ಕನ್ನಡಿ']

Omprakash Naik

ಕವಿತಾ ಪ್ರಕಾಶ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಮಧುರ ಸಾಹಿತ್ಯ ಮತ್ತು ಸಂಗೀತ ಜಗನ್ ಬಾಬು ಛಾಯಾಗ್ರಹಣ, ಓಂ ಪ್ರಕಾಶ್, ಕಥೆ, ಚಿತ್ರಕಥೆ, ಕ್ಲಾಸಿಕ್ ರವಿ ಸಾಹಸ, ಶಿವಕುಮಾರ್ ಸಂಕಲನ, ಕಿಟ್ಟಿ, ಕಪಿಲ್ ನೃತ್ಯ ನಿರ್ದೇಶನವಿದೆ.

ಈ ಹಿಂದೆ ಓಂ ಪ್ರಕಾಶ್ ಅವರು ಒಂದೇ ಒಂದು ಪಾತ್ರವುಳ್ಳ 'ನಾನೂ ಅವಳು ಮತ್ತು ಕನ್ನಡಿ' ಎಂಬ ಪ್ರಯೋಗಾತ್ಮಕ ಚಿತ್ರ ಮಾಡಿದ್ದಾರೆ. ಓಂ ಪ್ರಕಾಶ್ ನಾಯಕ್, ಕೆ.ಸಿ.ಗುಡಿಗೇರಿ, ಸೀನು, ವಿನಯಾ, ಶಶಿಕಲಾ, ಭಾರತಿ, ರೂಪಾಸಿಂಗ್, ಜಗದೀಶ್ ಬಾಬು, ಬಳ್ಳಾರಿ ಮಂಜು, ಪುಂಡಲೀಕ, ಪ್ರಿನ್ಸ್ ತಾರಾ ಬಳಗದಲ್ಲಿದ್ದಾರೆ. (ಒನ್ಇಂಡಿಯಾ ಕನ್ನಡ)

English summary
Actor-director Omprakash Naik is back with yet another action movie called Dishum Dishum. Earlier he made experimental film called 'Naanu Avalu Mattu Kannadi'. Naik himself has written the story, screenplay and direction.
Please Wait while comments are loading...