TRENDING ON ONEINDIA
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
'ಒಂದ್ ಕಥೆ ಹೇಳ್ಲಾ' : ಹೊಸ ಹುಡುಗರು, ಹೊಸದೊಂದು ಪ್ರಯತ್ನ
ಒಂದು ಸಿನಿಮಾ ಮಾಡಬೇಕು ಎನ್ನುವುದು ಅದೆಷ್ಟೋ ಜನರ ಕನಸಾಗಿರುತ್ತದೆ. ಅದರಲ್ಲಿಯೂ ಒಂದು ಒಳ್ಳೆಯ ಸಿನಿಮಾ ಮಾಡುವುದು ಒಂದು ಸಾರ್ಥಕ ಭಾವ. ಈಗ ಅದೇ ರೀತಿಯ ಖುಷಿಯಲ್ಲಿ ಇದೆ 'ಒಂದ್ ಕಥೆ ಹೇಳ್ಲಾ' ಚಿತ್ರತಂಡ.
ನೀವಿನ್ನು ಈ ಸಿನಿಮಾದ ಟ್ರೇಲರ್ ನೋಡಿಲ್ಲ ಎಂದರೆ ಒಮ್ಮೆ ನೋಡಿ. ಈ ಚಿತ್ರದ ಮೇಕಿಂಗ್ ನಿಜಕ್ಕೂ ಯಾವ ದೊಡ್ಡ ಸಿನಿಮಾಗಳಿಗೂ ಕಡಿಮೆ ಇಲ್ಲ. ಯಾವುದೇ ನಿರ್ದೇಶಕರ ಜೊತೆಗೆ ಕೆಲಸ ಮಾಡದೆ ಇದ್ದರೂ, ಬರೀ ಶಾರ್ಟ್ ಮೂವಿಗಳನ್ನು ಮಾಡಿ ಸಿನಿಮಾ ಭಾಷೆ ಕಲಿತ ಗಿರೀಶ್ ಜಿ ಅವರ ಒಂದೊಳ್ಳೆ ಪ್ರಯತ್ನ ಇದಾಗಿದೆ.
ಅಪ್ಪು ಲೈಫ್ ನಲ್ಲಿ ಫಸ್ಟ್ ಟೈಮ್ ಹೀಗಾಗ್ತಿರೋದು
'ಒಂದ್ ಕಥೆ ಹೇಳ್ಲಾ' ಹಾರರ್ ಐತಾಲಾಜಿ ಸಿನಿಮಾ. ಚಿತ್ರದಲ್ಲಿ ಐದು ಕಥೆಗಳು ಇದ್ದು, ಒಬ್ಬೊಬ್ಬರು ಒಂದೊಂದು ಕಥೆಯನ್ನು ಹೇಳುತ್ತಾರೆ. ಸಿನಿಮಾ ನೋಡುತ್ತಿದ್ದರೆ ಫ್ರೆಂಡ್ಸ್ ಗಳು ಸೇರಿ ಮಾತನಾಡುತ್ತಿರುವ ಹಾಗೆ ಇರುತ್ತದೆ ಎನ್ನುತ್ತಾರೆ ನಿರ್ದೇಶಕರು.
ಚಿತ್ರದಲ್ಲಿ ಉಪ ಕಥೆಗಳು ಇದ್ದು, ಬೇರೆ ಬೇರೆ ಹಿನ್ನಲೆಯಲ್ಲಿ ಇವು ನಡೆಯುತ್ತದೆ. ಅದರಲ್ಲಿ ಬರುವ ಭಕ್ತ ಪ್ರಹ್ಲಾದ ಕಥೆಯಲ್ಲಿ ನಿರ್ದೇಶಕ ಗಿರೀಶ್ ಅವರೇ ನಟಿಸಿದ್ದಾರೆ. 'ಜೋಡಿ ಹಕ್ಕಿ' ಧಾರಾವಾಹಿ ಖ್ಯಾತಿಯ ತಾಂಡವ್ ರಾಮ್ ಸೇರಿದಂತೆ ಐದು ಪಾತ್ರಗಳು ಮುಖ್ಯವಾಗಿರುತ್ತದೆ.
ಕಲಾವಿದ ಹಾಗೂ ತಾಂತ್ರಿಕ ವರ್ಗದಲ್ಲಿ ಎಲ್ಲ ಹೊಸಬರೇ ಇದ್ದಾರೆ. ರೋಣದ ಬಕ್ಕೇಶ್ ಮ್ಯೂಸಿಕ್, ಪ್ರತೀಕ್ ಎಡಿಟಿಂಗ್ ಹಾಗೂ ಕೀರ್ತನ್ ಪೂಜಾರಿ ಕ್ಯಾಮರಾ ವರ್ಕ್ ಮಾಡಿದ್ದಾರೆ. ಇದು ಕ್ರೌಂಡ್ ಫಂಡಿಂಗ್ ಸಿನಿಮಾ ಆಗಿದ್ದು, ದೀಪಕ್ ಗಂಗಾಧರ್ ಮೂವಿಸ್ ಸಿನಿಮಾವನ್ನ ಹಂಚಿಕೆ ಮಾಡುತ್ತಿದೆ. ಮಾರ್ಚ್ ತಿಂಗಳಿನಲ್ಲಿ ಸಿನಿಮಾ ಬಿಡುಗಡೆ ಮಾಡುವ ಪ್ಲಾನ್ ಚಿತ್ರತಂಡದಾಗಿದೆ.