»   » ಹಾಫ್ ಸೆಂಚುರಿ ಬಾರಿಸಿದ 'ಒಂದು ಮೊಟ್ಟೆಯ ಕಥೆ' ಸಿನಿಮಾ

ಹಾಫ್ ಸೆಂಚುರಿ ಬಾರಿಸಿದ 'ಒಂದು ಮೊಟ್ಟೆಯ ಕಥೆ' ಸಿನಿಮಾ

Posted By:
Subscribe to Filmibeat Kannada

'ಒಂದು ಮೊಟ್ಟೆಯ ಕಥೆ' ಸಿನಿಮಾ ಹಾಫ್ ಸೆಂಚುರಿ ಬಾರಿಸಿದೆ. ಅಬ್ಬರ ಅಡಂಬರ ಇಲ್ಲದ ಒಂದು ಸರಳ ಸುಂದರ ಸಿನಿಮಾ ಗೆಲ್ಲುವುದರ ಜೊತೆಗೆ ಅನೇಕ ಪ್ರಯೋಗಾತ್ಮಕ ಸಿನಿಮಾಗಳಿಗೆ ಈ ಚಿತ್ರ ಸ್ಪೂರ್ತಿ ನೀಡಿದೆ.

ಕನ್ನಡ ಚಿತ್ರರಂಗಕ್ಕೆ 'ಒಂದು ಮೊಟ್ಟೆಯ ಕಥೆ' ಹೇಳಿದ ಪಾಠ ಇದು

ಜುಲೈ 7ಕ್ಕೆ ಬಿಡುಗಡೆಯಾಗಿದ್ದ ಈ ಸಿನಿಮಾ ಕಳೆದ ಶುಕ್ರವಾರ ಅಂದರೆ ಆಗಸ್ಟ್ 25ಕ್ಕೆ ಸರಿಯಾಗಿ 50 ದಿನಗಳನ್ನು ಪೂರೈಸಿದೆ. ಬೆಂಗಳೂರಿನ ಕೆಲ ಮಲ್ಟಿಪ್ಲೆಕ್ಸ್ ಸೇರಿದಂತೆ ಅನೇಕ ಕಡೆ ಇನ್ನೂ 'ಒಂದು ಮೊಟ್ಟೆಯ ಕಥೆ' ಚಿತ್ರದ ಪ್ರದರ್ಶನ ಮುಂದುವರೆದಿದೆ.

'Ondu Motteya Kathe' movie completed 50 days.

ಕನ್ನಡ ಸಿನಿಮಾಗಳಿಗೆ ಚಿತ್ರಮಂದಿರದ ಕೊರತೆ ಎನ್ನುವ ಮಾತು ಕೇಳಿ ಕೇಳಿ ಸಾಕಾಗಿ ಹೋಗಿದೆ. ಆದರೆ ಯಾವುದೇ ಸ್ಟಾರ್ ಇಲ್ಲದ 'ಒಂದು ಮೊಟ್ಟೆಯ ಕಥೆ' ಸಿನಿಮಾ ಈಗ 50 ದಿನಗಳನ್ನು ಪೂರೈಸಿ ಮುನ್ನುಗ್ಗುತ್ತಿದೆ.

ಬರಿ ಕರ್ನಾಟಕದಲ್ಲಿ ಮಾತ್ರವಲ್ಲದೆ ಅಮೇರಿಕಾದಲ್ಲಿಯೂ 'ಒಂದು ಮೊಟ್ಟೆಯ ಕಥೆ' ಸಿನಿಮಾ ತೆರೆ ಕಂಡಿತ್ತು. ಜೊತೆಗೆ ಲಂಡನ್ ಹಾಗೂ ನ್ಯೂಯಾರ್ಕ ಫಿಲ್ಮ್ ಫೆಸ್ಟಿವಲ್ ನಲ್ಲಿ ಸಿನಿಮಾ ಪ್ರದರ್ಶನವಾಗಿತ್ತು. ಅಂದಹಾಗೆ, ರಾಜ್ ಬಿ ಶೆಟ್ಟಿ ನಿರ್ದೇಶನದ ಈ ಸಿನಿಮಾವನ್ನು ಪವನ್ ಕುಮಾರ್ ನಿರ್ಮಾಣ ಮಾಡಿದ್ದರು.

English summary
kannada movie 'Ondu Motteya Kathe' completed 50 days. the movie is directed by Raj B Shetty, and produced by Pawan Kumar.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada