»   » ಅಮೆರಿಕಾದಲ್ಲಿ 'ಒಂದು ಮೊಟ್ಟೆಯ ಕಥೆ' ಸಿನಿಮಾದ ಹವಾ

ಅಮೆರಿಕಾದಲ್ಲಿ 'ಒಂದು ಮೊಟ್ಟೆಯ ಕಥೆ' ಸಿನಿಮಾದ ಹವಾ

Posted By:
Subscribe to Filmibeat Kannada

'ಒಂದು ಮೊಟ್ಟೆಯ ಕಥೆ' ಸಿನಿಮಾ ನೋಡಿ ಕನ್ನಡಿಗರು ಮೆಚ್ಚಿಕೊಂಡಿದ್ದಾರೆ. ಈ ಸರಳ ಸುಂದರ ಸಿನಿಮಾ ಎಲ್ಲರಿಗೂ ಬಹಳ ಇಷ್ಟ ಆಗಿದೆ. ಇದೀಗ ಕನ್ನಡದ ಈ ಸಿನಿಮಾ ಅಮೆರಿಕಾದಲ್ಲಿಯೂ ಹವಾ ಎಬ್ಬಿಸುವುದಕ್ಕೆ ಸಜ್ಜಾಗಿದೆ.

ಈ ವಾರಾಂತ್ಯದಲ್ಲಿ 'ಒಂದು ಮೊಟ್ಟೆಯ ಕಥೆ' ಸಿನಿಮಾ ಅಮೆರಿಕಾದಲ್ಲಿ ಪ್ರದರ್ಶನವಾಗುತ್ತಿದೆ. ಅಮೇರಿಕಾದ Waterbury ನಗರ ಸೇರಿದಂತೆ ವಿವಿಧ ನಗರಗಳಲ್ಲಿ ಸಿನಿಮಾದ 17ಕ್ಕೂ ಹೆಚ್ಚು ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಜೊತೆಗೆ ಎರಡನೇ ವಾರಾಂತ್ಯದಲ್ಲಿ ಲಾಸ್ ಏಂಜಲೀಸ್ ಸೇರಿದಂತೆ ಕೆಲ ನಗರದಲ್ಲಿ ಸಿನಿಮಾದ ಪ್ರದರ್ಶನ ಮುಂದುವರೆಯಲಿದೆ.

'Ondu Motteya Kathe' screening in united states of america

ಅಂದಹಾಗೆ, 'ಒಂದು ಮೊಟ್ಟೆಯ ಕಥೆ' ಚಿತ್ರ ಈ ಹಿಂದೆ ಲಂಡನ್ ಮತ್ತು ನ್ಯೂಯಾರ್ಕ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಪ್ರದರ್ಶನವಾಗಿತ್ತು. ರಾಜ್ ಬಿ ಶೆಟ್ಟಿ ನಿರ್ದೇಶನದ ಈ ಸಿನಿಮಾವನ್ನು ಪವನ್ ಕುಮಾರ್ ನಿರ್ಮಾಣ ಮಾಡಿದ್ದಾರೆ. ಜುಲೈ 6ಕ್ಕೆ ಬಿಡುಗಡೆಯಾಗಿದ್ದ ಈ ಚಿತ್ರ ಸದ್ಯ ಯಶಸ್ವಿ ಪ್ರದರ್ಶನವನ್ನು ಕಾಣುತ್ತಿದ್ದು, ಬೋಳು ತಲೆಯ ಗೋಳನ್ನು ಸಿನಿಮಾದಲ್ಲಿ ಹಾಸ್ಯ ರೂಪದಲ್ಲಿ ಹೇಳಲಾಗಿದೆ.

English summary
Kannada movie 'Ondu Motteya Kathe' screening in united states of america.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada