»   » ಈ ವರ್ಷದ ಗಣೇಶ್ ವಿವಾಹ ವಾರ್ಷಿಕೋತ್ಸವ ತುಂಬ ಸ್ಪೆಷಲ್

ಈ ವರ್ಷದ ಗಣೇಶ್ ವಿವಾಹ ವಾರ್ಷಿಕೋತ್ಸವ ತುಂಬ ಸ್ಪೆಷಲ್

Posted By:
Subscribe to Filmibeat Kannada

ಗಣೇಶ್ ಅಭಿನಯದ 'ಚಮಕ್' ಸಿನಿಮಾ ಹಿಟ್ ಆಗಿದೆ. ಈ ಚಿತ್ರದ ನಂತರ ಅವರು ಯಾವ ಸಿನಿಮಾ ಮಾಡುತ್ತಾರೆ ಎನ್ನುವ ನಿರೀಕ್ಷೆ ಹುಟ್ಟಿಕೊಂಡಿದೆ. ಅದರ ಜೊತೆಗೆ ಈ ಹಿಂದೆಯೇ ಒಪ್ಪಿಕೊಂಡಿದ್ದ 'ಆರೆಂಜ್' ಸಿನಿಮಾ ಯಾವಾಗ ಶುರು ಎಂಬ ಪ್ರಶ್ನೆ ಕೂಡ ಮೂಡಿದೆ. ಆದರೆ ಅದೆಲ್ಲದಕ್ಕೂ ಈಗ ಉತ್ತರ ಸಿಕ್ಕಿದೆ.

ಈಕೆಯನ್ನ ನೋಡಿ ಕನ್ ಫ್ಯೂಸ್ ಆದವರೇ ಹೆಚ್ಚು.! ಇವ್ರು ಶಿಲ್ಪಾ ಗಣೇಶ್ ಅಲ್ಲ.!

ಗಣೇಶ್ 'ಆರೆಂಜ್' ಸಿನಿಮಾ ಶುರು ಆಗುವ ಸಮಯ ಈಗ ಬಂದಿದೆ. ಫೆಬ್ರವರಿ 11ರಂದು ಈ ಸಿನಿಮಾದ ಮುಹೂರ್ತ ನೆರವೇರಲಿದೆ. ವಿಶೇಷ ಅಂದರೆ ಅದೇ ದಿನ ಗಣೇಶ್ ಮತ್ತು ಶಿಲ್ಪಾ ಗಣೇಶ್ ಅವರ 10ನೇ ವರ್ಷದ ವಿವಾಹ ವಾರ್ಷಿಕೋತ್ಸವ ಇದೆ. ಈ ವಿಶೇಷವಾಗಿಯೇ ಅಂದು 'ಆರೆಂಜ್' ಸಿನಿಮಾ ಲಾಂಚ್ ಆಗಲಿದೆ. ಗಣೇಶ್ ಕಳೆದ ಹುಟ್ಟುಹಬ್ಬಕ್ಕೆ ಈ ಚಿತ್ರದ ಟೈಟಲ್ ಬಿಡುಗಡೆ ಮಾಡಲಾಗಿತ್ತು. ಇನ್ನು 'ಆರೆಂಜ್' ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಈಗಾಗಲೇ ರಿಲೀಸ್ ಆಗಿದ್ದು, ಸಖತ್ ಸ್ಟೈಲಿಷ್ ಆಗಿದೆ.

'Orange' Movie Will Be Launch On Ganesh marriage anniversary

'ಜೂಮ್' ಸಿನಿಮಾದ ನಂತರ ನಿರ್ದೇಶಕ ಪ್ರಶಾಂತ್ ರಾಜ್ ಮತ್ತೆ ಗಣೇಶ್ ಜೊತೆಗೆ ಸಿನಿಮಾ ಮಾಡುತ್ತಿದ್ದಾರೆ. 'ಬಹದ್ದೂರ್' ಚೇತನ್ ಮತ್ತು ನಟರಾಜ್ ಚಿತ್ರಕ್ಕೆ ಸಂಭಾಷಣೆ ಬರೆಯಲಿದ್ದಾರೆ. ಸಂತೋಷ್ ಪಾತಾಜಿ ಕ್ಯಾಮರಾ ಕೈಚಳಕ, ರವಿವರ್ಮ ಸಾಹಸ ಚಿತ್ರದಲ್ಲಿ ಇರಲಿದೆ. ನಾಯಕಿ ಆಯ್ಕೆ ಇನ್ನು ಆಗಿಲ್ಲ. ಅಂದಹಾಗೆ, 'ಜೂಮ್' ಚಿತ್ರದ ರೀತಿ ಇಲ್ಲಿಯೂ ಗಣೇಶ್ ಬೇರೆಯ ಲುಕ್ ನಲ್ಲಿ ಸ್ಟೈಲಿಶ್ ಆಗಿ ಕಾಣಿಸಿಕೊಳ್ಳಲಿದ್ದಾರಂತೆ.

English summary
'Orange' kannada movie Will Be Launch On Ganesh and Shilpa Ganesh's marriage anniversary (February 11). The movie is directed by Prashanth Raj.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X