For Quick Alerts
  ALLOW NOTIFICATIONS  
  For Daily Alerts

  ಯಶ್, ದರ್ಶನ್, ಸುದೀಪ್: ಜೂನ್‌ನಲ್ಲಿ ಯಾರು ಕನ್ನಡದ ಟಾಪ್ ನಟ?

  |

  ಕನ್ನಡ ಚಿತ್ರರಂಗದಲ್ಲಿ ಒಬ್ಬರಿಗಿಂತ ಒಬ್ಬರು ಅದ್ಭುತ ನಟರಿದ್ದಾರೆ. ಪ್ರತಿಯೊಬ್ಬರಿಗೂ ದೊಡ್ಡ ಸಂಖ್ಯೆಯ ಅಭಿಮಾನಿಗಳ ಬಳಗವಿದೆ.

  ಶಿವರಾಜ್ ಕುಮಾರ್, ಸುದೀಪ್, ದರ್ಶನ್, ಯಶ್ ಅವರುಗಳಂತೂ ಕೋಟಿ-ಕೋಟಿ ಬಾಚುವ ಸ್ಟಾರ್ ನಟರು. ಇವರು ಮಾತ್ರವೇ ಅಲ್ಲ ಇನ್ನೂ ಹಲವು ನಟರು ಸ್ಟಾರ್ ಪಟ್ಟಕ್ಕೆ ಇತ್ತೀಚಿನ ದಿನಗಳಲ್ಲಿ ಏರಿದ್ದಾರೆ. ಏರುವ ಹಂತದಲ್ಲಿದ್ದಾರೆ.

  ಆದರೆ ಈ ಸ್ಟಾರ್ ಗಿರಿ ಅಥವಾ ಜನಪ್ರಿಯತೆ ಎಂಬುದು ಮಾಯಾ ಕುದುರೆ, ಕಾಲ-ಕಾಲಕ್ಕೆ ಇದು ಬದಲಾಗುತ್ತಿರುತ್ತದೆ. ಅಂತೆಯೇ ಇದೀಗ ಜೂನ್ ತಿಂಗಳಲ್ಲಿ ಕನ್ನಡದ ಅತಿ ಜನಪ್ರಿಯ ಸ್ಟಾರ್‌ಗಳ್ಯಾರು ಎಂಬುದನ್ನು ಒರ್ಮ್ಯಾಕ್ಸ್ ಮೀಡಿಯಾ ಸಂಸ್ಥೆ ಬಿಚ್ಚಿಟ್ಟಿದೆ. ಇಲ್ಲಿದೆ ನೋಡಿ ಪಟ್ಟಿ. ಆದರೆ ಈ ಪಟ್ಟಿ ಜೂನ್ ತಿಂಗಳದ್ದು ಮಾತ್ರವೇ ಆಗಿದೆ.

  ಐದನೇ ಸ್ಥಾನದಲ್ಲಿ ನಟ ಶಿವರಾಜ್ ಕುಮಾರ್

  ಐದನೇ ಸ್ಥಾನದಲ್ಲಿ ನಟ ಶಿವರಾಜ್ ಕುಮಾರ್

  ಒರ್ಮ್ಯಾಕ್ಸ್‌ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ನಟ ಶಿವರಾಜ್ ಕುಮಾರ್ ಐದನೇ ಸ್ಥಾನದಲ್ಲಿದ್ದಾರೆ. ಜೂನ್‌ನಲ್ಲಿ ಶಿವರಾಜ್ ಕುಮಾರ್ ಅವರ ಯಾವುದೇ ಸಿನಿಮಾಗಳು ಬಿಡುಗಡೆ ಆಗಿರಲಿಲ್ಲ. ಆ ಕಾರಣಕ್ಕೆ ಜೂನ್‌ನಲ್ಲಿ ಶಿವಣ್ಣ ಐದನೇ ಸ್ಥಾನದಲ್ಲಿದ್ದಾರೆ. ಅಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಸಹ ಶಿವಣ್ಣ ಹೆಚ್ಚು ಸಕ್ರಿಯರಲ್ಲ. ಆದರೂ ಶಿವಣ್ಣ ಐದನೇ ಸ್ಥಾನದಲ್ಲಿರುವುದು ದೊಡ್ಡ ಸಂಗತಿಯೇ.

  ನಾಲ್ಕನೇ ಸ್ಥಾನದಲ್ಲಿ ದರ್ಶನ್

  ನಾಲ್ಕನೇ ಸ್ಥಾನದಲ್ಲಿ ದರ್ಶನ್

  ದೊಡ್ಡ ಸಂಖ್ಯೆಯ ಪ್ಯಾನ್ ಬೇಸ್ ಹೊಂದಿರುವ ನಟ ದರ್ಶನ್‌, ಒರ್ಮ್ಯಾಕ್ಸ್‌ನ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ದರ್ಶನ್ ಅವರ ಸಿನಿಮಾ ಒಂದು ಬಿಡುಗಡೆ ಆಗಿ ವರ್ಷದ ಮೇಲೆ ಕೆಲವು ತಿಂಗಳುಗಳಾಗಿವೆ. ಹಾಗಿದ್ದರೂ ನಟ ದರ್ಶನ್ ನಾಲ್ಕನೇ ಸ್ಥಾನದಲ್ಲಿದ್ದಾರೆ. ದರ್ಶನ್‌ರ ಸೋಷಿಯಲ್ ಮೀಡಿಯಾ ಅಪಿಯರೆನ್ಸ್ ಸಹ ಕಡಿಮೆಯೇ ಆಗಿದ್ದರೂ ನಾಲ್ಕನೇ ಸ್ಥಾನದಲ್ಲಿದ್ದಾರೆ ನಟ ದರ್ಶನ್.

  ಮೂರನೇ ಸ್ಥಾನದಲ್ಲಿ 'ರೈಸಿಂಗ್ ಸ್ಟಾರ್' ರಕ್ಷಿತ್ ಶೆಟ್ಟಿ

  ಮೂರನೇ ಸ್ಥಾನದಲ್ಲಿ 'ರೈಸಿಂಗ್ ಸ್ಟಾರ್' ರಕ್ಷಿತ್ ಶೆಟ್ಟಿ

  ಮೂರನೇ ಸ್ಥಾನದಲ್ಲಿ ನಟ ರಕ್ಷಿತ್ ಶೆಟ್ಟಿ ಇದ್ದಾರೆ. ಜೂನ್ ತಿಂಗಳಲ್ಲಿ ರಕ್ಷಿತ್ ಶೆಟ್ಟಿ ನಟನೆಯ '777 ಚಾರ್ಲಿ' ಸಿನಿಮಾ ಬಿಡುಗಡೆ ಆಗಿ ದೊಡ್ಡ ಹಿಟ್ ಆಗಿದೆ. ಹಾಗಾಗಿ ಅವರ ಜನಪ್ರಿಯೆಯಲ್ಲಿಯೂ ದೊಡ್ಡ ಮಟ್ಟದ ಏರಿಕೆಯಾಗಿದೆ. ಅದರ ಜೊತೆಗೆ ಸಾಲು-ಸಾಲು ಸಿನಿಮಾಗಳ ನಿರ್ಮಾಣ ಸಹ ರಕ್ಷಿತ್ ಸೆಟ್ಟಿ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಒಳ್ಳೆಯ ಸಿನಿಮಾಗಳು ರಕ್ಷಿತ್ ಶೆಟ್ಟಿ ಕಡೆಯಿಂದ ಬರಲಿವೆ.

  ಎರಡನೇ ಸ್ಥಾನದಲ್ಲಿ ನಟ ಸುದೀಪ್

  ಎರಡನೇ ಸ್ಥಾನದಲ್ಲಿ ನಟ ಸುದೀಪ್

  ನಟ ಸುದೀಪ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಸುದೀಪ್ ನಟನೆಯ 'ವಿಕ್ರಾಂತ್ ರೋಣ' ಸಿನಿಮಾದ ಬಿಡುಗಡೆ ಸನಿಹಕ್ಕೆ ಬಂದಿದೆ. ಜೂನ್ ತಿಂಗಳಲ್ಲಿ 'ವಿಕ್ರಾಂತ್ ರೋಣ' ಸಿನಿಮಾದ ಹಾಡು ಬಿಡುಗಡೆ ಆಗಿ ವೈರಲ್ ಆಗಿದೆ. ಅಲ್ಲದೆ, 'ವಿಕ್ರಾಂತ್ ರೋಣ' ಸಿನಿಮಾಕ್ಕೆ ಸಂಬಂಧಿಸಿದಂತೆ ಕೆಲವು ಇವೆಂಟ್‌ಗಳಲ್ಲಿ ಸಹ ಸುದೀಪ್ ಪಾಲ್ಗೊಂಡಿದ್ದರು. ಅಲ್ಲದೆ, ಬಾಲಿವುಡ್ ನಟ ಅಜಯ್ ದೇವಗನ್ ಜೊತೆ ಭಾಷೆಯ ವಿಷಯಕ್ಕೆ ಟ್ವಿಟ್ಟರ್‌ನಲ್ಲಿ ಚರ್ಚೆಗಿಳಿದಿದ್ದು ಸಹ ಜೂನ್ ತಿಂಗಳಲ್ಲಿಯೇ ಇನ್ನೂ ಕೆಲವು ಕಾರಣಗಳಿಂದ ಜೂನ್ ತಿಂಗಳಲ್ಲಿ ಸುದೀಪ್‌ರ ಜನಪ್ರಿಯತೆ ಹೆಚ್ಚಿದೆ.

  ಮೊದಲ ಸ್ಥಾನದಲ್ಲಿ ಯಶ್

  ಮೊದಲ ಸ್ಥಾನದಲ್ಲಿ ಯಶ್

  'ಕೆಜಿಎಫ್ 2' ಸಿನಿಮಾದಿಂದಾಗಿ ಯಶ್‌ ಜನಪ್ರಿಯತೆ ದೊಡ್ಡ ಮಟ್ಟದಲ್ಲಿ ಹೆಚ್ಚಾಗಿದೆ. 'ಕೆಜಿಎಫ್ 2' ಈ ವರ್ಷದ ಈವರೆಗಿನ ಭಾರತದ ದೊಡ್ಡ ಹಿಟ್ ಸಿನಿಮಾ ಎನಿಸಿಕೊಂಡಿದೆ. ಸಹಜವಾಗಿಯೇ ಯಶ್‌ರ ಜನಪ್ರಿಯತೆ ಭಾರಿ ಮಟ್ಟದಲ್ಲಿ ಏರಿಕೆಯಾಗಿದೆ. ಕರ್ನಾಟಕ ಮಾತ್ರವೇ ಅಲ್ಲದೆ ಇತರೆ ರಾಜ್ಯಗಳಲ್ಲಿಯೂ ಯಶ್‌ರ ಜನಪ್ರಿಯತೆ ಹೆಚ್ಚಾಗಿದೆ. ಹಾಗಾಗಿ ಯಶ್‌ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.

  Recommended Video

  Petromax | ಹೆಂಗಿತ್ರಪ್ಪ ಸಿನಿಮಾ ? | Karunya Ram | Sathish Ninasam | Haripriya *Movie Review
  English summary
  Ormax media released popular male star actor of Kannada movie industry in June month.
  Sunday, July 17, 2022, 14:48
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X